For Quick Alerts
ALLOW NOTIFICATIONS  
For Daily Alerts

ಷೇರು ಮಾರುಕಟ್ಟೆಗೆ ಪ್ರವೇಶಿಸಿದ ಪೇಟಿಎಂಗೆ ನಿರಾಶೆ: 15 ನಿಮಿಷದಲ್ಲೇ ಷೇರು ಪಾತಾಳಕ್ಕೆ

|

ದೇಶದ ಪ್ರಮುಖ ಡಿಜಿಟಲ್‌ ಪಾವತಿ ಸಂಸ್ಥೆ ಪೇಟಿಎಂ ಗುರುವಾರ ಷೇರು ವಿನಿಮಯ ಮಾರುಕಟ್ಟೆಯನ್ನು ಪ್ರವೇಶ ಮಾಡಿದೆ. ಆದರೆ ಪದಾರ್ಪಣೆ ಮಾಡಿದ ಆರಂಭದಲ್ಲೇ ಪೇಟಿಎಂಗೆ ನಿರಾಶೆ ಮೂಡಿದೆ. 15 ನಿಮಿಷದಲ್ಲೇ ಷೇರು ಪಾತಾಳಕ್ಕೆ ಇಳಿದಿದೆ. ದೇಶದ ಷೇರು ಮಾರುಕಟ್ಟೆ ಇತಿಹಾಸದಲ್ಲಿಯೇ ಅತಿ ದೊಡ್ಡ ಐಪಿಒ ಆದ ಪೇಟಿಎಂ ಐಪಿಒ ಮೊದಲ ಬಾರಿಯೇ ಶೇಕಡ 28 ರಷ್ಟು ಕುಸಿತ ಕಂಡಿದೆ.

ಪೇಟಿಎಂನ ಪೋಷಕ ಸಂಸ್ಥೆಯಾದ ಒನ್ 97 ಕಮ್ಯುನಿಕೇಷನ್ಸ್ ಎನ್‌ಎಸ್‌ಇ ದಲ್ಲಿ 1,950 ರೂಪಾಯಿ ದರದಲ್ಲಿ ಹಾಗೂ ಬಿಎಸ್‌ಇಯಲ್ಲಿ 1955 ರೂಪಾಯಿ ದರದಲ್ಲಿ ಆರಂಭಿಕ ವಹಿವಾಟಿನೊಂದಿಗೆ ನಿರಾಶೆ ಮೂಡಿಸಿದೆ. ಪೇಟಿಎಂ ಷೇರು ಮಾರುಕಟ್ಟೆ ಪ್ರವೇಶವು 2,150 ರೂಪಾಯಿಯೊಂದಿಗೆ ಆರಂಭವಾಗಿತ್ತು. ಆದರೆ 200 ರೂಪಾಯಿ (ಶೇ 9.3) ರಿಯಾಯಿತಿಯೊಂದಿಗೆ 1955 ರೂಪಾಯಿಯಲ್ಲಿ ಟ್ರೇಡಿಂಗ್ ಆರಂಭಿಸಿತ್ತು.

ಪೇಟಿಎಂ ಐಪಿಒ: ಯಾವಾಗ ಆರಂಭ?, ಇಲ್ಲಿದೆ ಮಾಹಿತಿಪೇಟಿಎಂ ಐಪಿಒ: ಯಾವಾಗ ಆರಂಭ?, ಇಲ್ಲಿದೆ ಮಾಹಿತಿ

ಷೇರು ಮಾರುಕಟ್ಟೆಗೆ ಪ್ರವೇಶ ಮಾಡಿದ 15 ನಿಮಿಷದಲ್ಲೇ ಪೇಟಿಎಂ ಷೇರುಗಳು ಶೇಕಡ 20 ರಷ್ಟು ಕುಸಿತ ಕಂಡು ಬಂದಿದೆ. ಬೆಳಿಗ್ಗೆ ಹತ್ತು ಗಂಟೆಗೆ ಲಿಸ್ಟಿಂಗ್‌ ಆದ ಷೇರುಗಳು 10.25ರ ವೇಳೆಗೆ 1701 ರೂಪಾಯಿಗೆ ಇಳಿದಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ ಅದರ ಷೇರು ಮೌಲ್ಯ 1655.20 ರೂಪಾಯಿಗೆ ಇಳಿಕೆಯಾಗಿತ್ತು.

 ಷೇರು ಮಾರುಕಟ್ಟೆಗೆ ಪ್ರವೇಶಿಸಿದ ಪೇಟಿಎಂಗೆ ನಿರಾಶೆ

18,300 ಕೋಟಿ ರೂ ಮೊತ್ತದ ಪೇಟಿಎಂ ಐಪಿಒ ದೇಶದ ಷೇರು ಮಾರುಕಟ್ಟೆ ಇತಿಹಾಸದಲ್ಲಿಯೇ ಅತಿ ದೊಡ್ಡ ಐಪಿಒ ಆಗಿದೆ. ಷೇರು ಮಾರುಕಟ್ಟೆ ಲಿಸ್ಟಿಂಗ್‌ಗೂ ಮುನ್ನ ಅದು 8,235 ಕೋಟಿ ರೂ ಮೊತ್ತದ ಷೇರುಗಳನ್ನು ಸಾಂಸ್ಥಿಕ ಹೂಡಿಕೆದಾರರಲ್ಲಿ ಹಂಚಿಕೆ ಮಾಡಿತ್ತು. ಆದರೆ ಪೇಟಿಎಂ ನಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅದರ ಸುಮಾರು 1.40 ಲಕ್ಷ ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಲು ಹೂಡಿಕೆದಾರರು ಹಿಂದೇಟು ಹಾಕುತ್ತಿದ್ದಾರೆ.

ರಾಷ್ಟ್ರೀಯ ಷೇರು ಮಾರುಕಟ್ಟೆ (ಎನ್‌ಎಸ್‌ಇ) ದಾಖಲೆಗಳ ಪ್ರಕಾರ ಪೇಟಿಎಂ ಷೇರುಗಳಿಗೆ 1.66 ಪಟ್ಟು ಹೆಚ್ಚಿನ ಚಿಲ್ಲರೆ ಹೂಡಿಕೆದಾರರು, 2.79 ಪಟ್ಟು ಅರ್ಹ ಸಾಂಸ್ಥಿಕ ಖರೀದಿದಾರರು ಮತ್ತು 0.24 ಪಟ್ಟು ಸಾಂಸ್ಥಿಕೇತರ ಹೂಡಿಕೆದಾರರು ಆಸಕ್ತಿ ತೋರಿಸಿದ್ದರು. ಆಗಾಗಲೇ ಷೇರುಗಳು ಹಂಚಿಕೆ ಆಗಿದೆ ಎಂಬುವುದನ್ನು ಬಿಎಸ‌ಇಯಲ್ಲಿ ಅಥವಾ ರಿಜಿಸ್ಟ್ರಾರ್‌ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಐಪಿಒ ಸಂದರ್ಭದಲ್ಲಿ ಪೇಟಿಎಂ 8,300 ಕೋಟಿ ರೂಪಾಯಿ ಮೊತ್ತದ ಷೇರುಗಳನ್ನು ಹೊಸದಾಗಿ ಬಿಡುಗಡೆ ಮಾಡಿದೆ. ಈ ವೇಳೆ ಹಾಲಿ ಷೇರುದಾರರು 10,000 ಕೋಟಿ ರೂ. ಮೊತ್ತದ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿದೆ.

ಪೇಟಿಎಂ ಐಪಿಒಗೆ ಸೆಬಿ ಒಪ್ಪಿಗೆ: 16,600 ಕೋಟಿ ರೂಪಾಯಿಪೇಟಿಎಂ ಐಪಿಒಗೆ ಸೆಬಿ ಒಪ್ಪಿಗೆ: 16,600 ಕೋಟಿ ರೂಪಾಯಿ

ಹಾಗಾದರೆ ಈಗ ಪೇಟಿಎಂಗೆ ಇರುವ ಸಮಸ್ಯೆ ಏನು?

ಪೇಟಿಎಂನ ಮಾತೃಸಂಸ್ಥೆಯಾದ ಒನ್ 97 ಕಮ್ಯುನಿಕೇಷನ್ಸ್‌ಗೆ ವಿದೇಶಿ ದಲ್ಲಾಳಿ ಸಂಸ್ಥೆ ಮ್ಯಾಕ್ವಾರಿ ಕಡಿಮೆ ರೇಟಿಂಗ್ ನೀಡಿತ್ತು. ಷೇರು ಮಾರುಕಟ್ಟೆಯಲ್ಲಿ ಪೇಟಿಎಂನ ಆರಂಭಿಕ ದರವು 2,150ಕ್ಕಿಂತ ಅಂದರೆ ಶೇಕಡ 44ರಷ್ಟು ಕಡಿಮೆ ಆಗಿದೆ. ಅಂದರೆ 1,200 ರೂ ಗುರಿಯನ್ನು ನಿಗದಿ ಮಾಡಲಾಗಿತ್ತು. ಇನ್ನು ವಿದೇಶಿ ದಲ್ಲಾಳಿ ಸಂಸ್ಥೆ ಮ್ಯಾಕ್ವಾರಿ, ಪೇಟಿಎಂನ ಮಾತೃಸಂಸ್ಥೆಯಾದ ಒನ್ 97 ಕಮ್ಯುನಿಕೇಷನ್ಸ್‌ ಅತೀ ಆಸೆಯಿಂದ ಹಣವನ್ನು ಸ್ವಾಹ ಮಾಡುವಂತೆ ಆಗಿದೆ ಎಂದು ಹೇಳಿತ್ತು. ಈ ನಡುವೆ ಪೇಟಿಎಂಗೆ ಲಾಭ ಪಡೆಯುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಪೇಟಿಎಂಗೆ ನಿಯಂತ್ರಣ ನಿಯಮಗಳು ಹಾಗೂ ಸ್ಪರ್ಧೆಗಳು ಅಡೆತಡೆಯನ್ನು ಉಂಟು ಮಾಡಿದೆ. ಇನ್ನು ಪೇಟಿಎಂ ಮಾಡುವ ಕಾರ್ಯವನ್ನು ಬೇರೆ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ಸಂಸ್ಥೆಗಳಾದ ಅಮೇಜಾನ್, ಫ್ಲಿಪ್‌ಕಾರ್ಟ್, ಗೂಗಲ್ ಮೊದಲಾದವು ಕೂಡಾ ಮಾಡುತ್ತಿದೆ. ಬಿಎಸ್‌ಪಿಎಲ್‌ ಕ್ಷೇತ್ರ ಹಾಗೂ ವಿವಿಧ ಆರ್ಥಿಕ ಉತ್ಪನ್ನಗಳ ಹಂಚಿಕೆಯಲ್ಲಿ ಸ್ಪರ್ಧೆ ಸ್ಪಷ್ಟವಾಗಿ ಇದೆ ಎಂದು ಕೂಡಾ ವಿದೇಶಿ ದಲ್ಲಾಳಿ ಸಂಸ್ಥೆ ಮ್ಯಾಕ್ವಾರಿ ಹೇಳಿದೆ.

English summary

Paytm Shares Crash 28% On Debut After India's Biggest-Ever IPO

Paytm Shares Crash 28% On Debut After India's Biggest-Ever IPO.
Story first published: Thursday, November 18, 2021, 20:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X