For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್- ಡೀಸೆಲ್ ದರಕ್ಕೆ ಬೆಂಕಿ ಹೊತ್ತಿಸಿದ ಕೊರೊನಾ

By ಅನಿಲ್ ಆಚಾರ್
|

ಪೆಟ್ರೋಲ್- ಡೀಸೆಲ್ ದರಕ್ಕೇ ಬೆಂಕಿ ಬಿದ್ದಂತೆ ಮೇಲಕ್ಕೆ ಏರಿದ ವರ್ಷ 2020. ಭಾರತದ ತೈಲ ಅಗತ್ಯಕ್ಕೆ ಬಹುಪಾಲು ಅವಲಂಬನೆ ಆಗಿರುವುದು ಆಮದಿನ ಮೇಲೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಹೆಚ್ಚಳವಾದರೆ ಅದರ ನೇರ ಪರಿಣಾಮ ಭಾರತದ ದೇಶೀ ಮಾರುಕಟ್ಟೆಯಲ್ಲಿ ಆಗುತ್ತದೆ.

 

ಸರ್ಕಾರಿ ಸ್ವಾಮ್ಯದ ತೈಲ ಮಾರ್ಕೆಟಿಂಗ್ ಕಂಪೆನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಪ್ರತಿ ನಿತ್ಯವೂ ತೈಲ ದರದ ಪರಿಷ್ಕರಣೆ ಮಾಡುತ್ತದೆ. ಈ ಪರಿಪಾಠ 2017ರ ಜೂನ್ 15ನೇ ತಾರೀಕಿನಿಂದ ನಡೆದುಕೊಂಡು ಬಂದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ದರ ಹಾಗೂ ವಿದೇಶಿ ವಿನಿಮಯ ದರದ ಆಧಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿಗದಿ ಆಗುತ್ತದೆ.

ನವೆಂಬರ್ ಚಿಲ್ಲರೆ ಹಣದುಬ್ಬರ ದರದಲ್ಲಿ ಅಲ್ಪ ಪ್ರಮಾಣದ ಇಳಿಕೆನವೆಂಬರ್ ಚಿಲ್ಲರೆ ಹಣದುಬ್ಬರ ದರದಲ್ಲಿ ಅಲ್ಪ ಪ್ರಮಾಣದ ಇಳಿಕೆ

ಆದರೆ, ಭಾರತದಲ್ಲಿ ಪೆಟ್ರೋಲ್ ದರ ಒಂದು ರಾಜ್ಯದಿಂದ ಮತ್ತೊಂದಕ್ಕೆ ಬದಲಾಗುತ್ತದೆ. ವ್ಯಾಟ್ ಅಥವಾ ಸ್ಥಳೀಯ ಸರ್ಕಾರ ಹಾಕಿರುವ ಮಾರಾಟ ತೆರಿಗೆ ಆಧಾರದಲ್ಲಿ ಬೆಲೆ ವ್ಯತ್ಯಾಸ ಆಗುತ್ತದೆ.

ಕೊರೊನಾ ಬೀರಿದ ಪರಿಣಾಮ

ಕೊರೊನಾ ಬೀರಿದ ಪರಿಣಾಮ

ಈ ವರ್ಷ ಕೊರೊನಾ ಬಿಕ್ಕಟ್ಟು ತಲೆದೋರಿ, ಸರ್ಕಾರದಿಂದ ಕಠಿಣವಾದ ಲಾಕ್ ಡೌನ್ ಘೋಷಿಸಲಾಯಿತು. ಇದು ಕೇವಲ ಭಾರತ ಮಾತ್ರವಲ್ಲ, ವಿಶ್ವದಾದ್ಯಂತ ಹೀಗೇ ಆಯಿತು. ಲಾಕ್ ಡೌನ್ ಸರಣಿ ಹಾಗೂ ಪ್ರಯಾಣ ನಿರ್ಬಂಧದಿಂದ ವಿಶ್ವದಾದ್ಯಂತ ತೈಲ ಬಳಕೆಯೇ ಕಡಿಮೆ ಆಯಿತು. ಬೆಲೆ ಕೂಡ ಕಡಿಮೆಯಾಯಿತು. ತೈಲ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಏರಿಳಿತ ಕಾಣಲು ಆರಂಭಿಸಿದಾಗ ಭಾರತದಲ್ಲಿ ಪೆಟ್ರೋಲ್ - ಡೀಸೆಲ್ ಚಿಲ್ಲರೆ ದರ ನಿತ್ಯದ ಪರಿಷ್ಕರಣೆಯನ್ನು ತಿಂಗಳುಗಟ್ಟಲೆ ನಿಲ್ಲಿಸಲಾಯಿತು. ಕೊರೊನಾ ಬಿಕ್ಕಟ್ಟಿನ ಪರಿಣಾಮವಾಗಿಯೇ ತೈಲ ವಲಯ ಈ ಹಿಂದೆಂದೂ ಕಂಡಿರದ ಕೆಟ್ಟ ಸನ್ನಿವೇಶವನ್ನು ಈ ವರ್ಷ ನೋಡುವಂತಾಯಿತು. ಈ ವರ್ಷದ ಏಪ್ರಿಲ್ ನಲ್ಲಿ ಫ್ಯೂಚರ್ ದರ ಶೂನ್ಯಕ್ಕೆ ಮತ್ತು ನೆಗೆಟಿವ್ ಮಟ್ಟಕೆ ಇಳಿಯಿತು. ಅಂದರೆ ಖರೀದಿಸುವವರೇ ಇಲ್ಲ. ಒಂದು ವೇಳೆ ಖರೀದಿ ಮಾಡಿದಲ್ಲಿ ಮಾರಾಟ ಮಾಡುವವರೇ ಹಣ ನೀಡಬೇಕು ಎಂಬ ಸ್ಥಿತಿ ಅದು.

ತೈಲ ಉತ್ಪಾದನೆ ಕಡಿತಕ್ಕೆ ನಿರ್ಧಾರ
 

ತೈಲ ಉತ್ಪಾದನೆ ಕಡಿತಕ್ಕೆ ನಿರ್ಧಾರ

ಆ ಸಂದರ್ಭದಲ್ಲಿ ಆರ್ಗನೈಸೇಷನ್ ಆಫ್ ಪೆಟ್ರೋಲಿಯಂ ಎಕ್ಸ್ ಪೋರ್ಟಿಂಗ್ ಕಂಟ್ರೀಸ್ (OPEC) ಮತ್ತು ಅದರ ಸದಸ್ಯ ರಾಷ್ಟ್ರಗಳು ಮಧ್ಯಪ್ರವೇಶಿಸಿ, ತೈಲ ಉತ್ಪಾದನೆ ಪ್ರಮಾಣವನ್ನೇ ಇಳಿಕೆ ಮಾಡಲು ನಿರ್ಧರಿಸಿದವು. ಆ ಮೂಲಕ ಕುಸಿಯುತ್ತಿದ್ದ ತೈಲ ಬೆಲೆಗೆ ಚೈತನ್ಯ ನೀಡುವ ಪ್ರಯತ್ನ ನಡೆಯಿತು. ಆ ಪ್ರಕಾರ, ತೈಲ ಉತ್ಪಾದಕರ ಕ್ಲಬ್ ಮೇ ಮತ್ತು ಜೂನ್ ತಿಂಗಳಲ್ಲಿ ಉತ್ಪಾದನೆಯನ್ನು ದಿನಕ್ಕೆ 9.7 ಮಿಲಿಯನ್ ಬ್ಯಾರೆಲ್ (bpd)ಗೆ ಇಳಿಸಿದವು. ಈ ನಡೆಯ ನಂತರ ತೈಲ ದರದಲ್ಲಿ ಏರಿಕೆ ಕಾಣಲು ಆರಂಭವಾಯಿತು. ಸದ್ಯಕ್ಕೆ ಒಂದು ಬ್ಯಾರೆಲ್ ತೈಲ ದರ $ 50ರ ಸಮೀಪ ಇದೆ. ಯಾವಾಗ ಲಾಕ್ ಡೌನ್ ನಿರ್ಬಂಧ ಸಡಿಲವಾಯಿತೋ ಹಾಗೂ ವರ್ಕ್ ಫ್ರಮ್ ಹೋಮ್ ನಿಂದ ಜನ ಹೊರಬರಲು ಶುರುವಾದರೋ, ಅಂದರೆ 2020ರ ಜೂನ್ ಹೊತ್ತಿಗೆ ವಿಶ್ವದಾದ್ಯಂತ ತೈಲದ ಬೇಡಿಕೆ ಕುದುರಿಕೊಳ್ಳುವುದಕ್ಕೆ ಶುರುವಾಯಿತು.

ಜಾಗತಿಕ ಒಟ್ಟಾರೆ ಪೂರೈಕೆಯ ಶೇಕಡಾ 10ರಷ್ಟಕ್ಕೆ ಸಮ

ಜಾಗತಿಕ ಒಟ್ಟಾರೆ ಪೂರೈಕೆಯ ಶೇಕಡಾ 10ರಷ್ಟಕ್ಕೆ ಸಮ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಎನರ್ಜಿ ಇನ್ಫರ್ಮೇಷನ್ ಅಡ್ಮಿನಿಸ್ಟ್ರೇಷನ್ (EIA) ಅಂದಾಜು ಮಾಡಿದ ಪ್ರಕಾರ, ವಿಶ್ವದ ತೈಲ ಬಳಕೆ 2020ರ ಬೇಡಿಕೆಯು 2020ರ ಜೂನ್ ನಲ್ಲಿ 8.30 ಮಿಲಿಯನ್ ಬಿಪಿಡಿ ಕಡಿಮೆ ಆಗಬಹುದು ಎಂದುಕೊಂಡಿತ್ತು. ಅದಕ್ಕೂ ಮುಂಚೆ 8.15 ಮಿಲಿಯನ್ ಬಿಪಿಡಿ ಇಳಿಕೆ ಅಂದಾಜು ಮಾಡಿತ್ತು. ಅಂದ ಹಾಗೆ 9.7 ಮಿಲಿಯನ್ ಬಿಪಿಡಿ ಉತ್ಪಾದನೆ ಕಡಿಮೆ ಮಾಡಬೇಕು ಎಂಬ ಒಪೆಕ್ ನಿರ್ಧಾರವು ಜಾಗತಿಕ ಒಟ್ಟಾರೆ ಪೂರೈಕೆಯ ಶೇಕಡಾ 10ರಷ್ಟಕ್ಕೆ ಸಮವಾಗುತ್ತಿತ್ತು. ಈ ಕಡಿತವು 2020ರ ಜುಲೈ ತನಕ ಮುಂದುವರಿಯಿತು. ಇನ್ನು ಭಾರತದಲ್ಲಿ ತೈಲ ದರವು 85 ದಿನಗಳ ಕಾಲ ಸ್ಥಿರವಾಗಿತ್ತು. ಮಾರ್ಚ್ 17 ಮತ್ತು ಜೂನ್ 6, ಜೂನ್ 30ರಿಂದ ಆಗಸ್ಟ್ 15, ಪೆಟ್ರೋಲ್ ದರ ಪರಿಷ್ಕರಣೆ ಸತತ 58 ದಿನ ಮಾಡಿರಲಿಲ್ಲ. ಡೀಸೆಲ್ ದರ ಪರಿಷ್ಕರಣೆಯನ್ನು ಸತತ 48 ದಿನಗಳ ಕಾಲ ಮಾಡಿರಲಿಲ್ಲ.

ಪೆಟ್ರೋಲ್ ದರ ಲೀಟರ್ ಗೆ 90 ರುಪಾಯಿ

ಪೆಟ್ರೋಲ್ ದರ ಲೀಟರ್ ಗೆ 90 ರುಪಾಯಿ

ಆದರೆ, ಈಚಿನ ಕೊರೊನಾ ಲಸಿಕೆ ಸುದ್ದಿಯ ಕಾರಣಕ್ಕೆ ತೈಲಕ್ಕೆ ಬೇಡಿಕೆ ಹೆಚ್ಚಾಗಿ, ದರ ಹೆಚ್ಚಳಕ್ಕೆ ಕಾರಣವಾಗಿದೆ. ಯುಎಸ್ ಕಚ್ಚಾ ತೈಲ ಬೆಂಚ್ ಮಾರ್ಕ್ ಕಳೆದ ಕೆಲ ದಿನಗಳಿಂದ ಸಕಾರಾತ್ಮಕ ಬೆಳವಣಿಗೆ ಕಾಣುತ್ತಿದೆ. ಕಚ್ಚಾ ಬೆಂಚ್ ಮಾರ್ಕ್- ಬ್ರೆಂಟ್ ಕಳೆದ ಅಕ್ಟೋಬರ್ 30ರಂದು ಬ್ಯಾರೆಲ್ ಗೆ $ 36.9 ಇದ್ದದ್ದು 36.74% ಏರಿಕೆ ಆಗಿದೆ. ಸದ್ಯಕ್ಕೆ ಬ್ರೆಂಟ್ ಬ್ಯಾರೆಲ್ ಗೆ $ 50 ದಾಟಿದೆ. ಡಿಸೆಂಬರ್ 12ನೇ ತಾರೀಕು ಬ್ಯಾರೆಲ್ ಗೆ $ 50.55ರೊಂದಿಗೆ ವಹಿವಾಟು ನಡೆಸಿತ್ತು. ಅದರ ಹಿಂದಿನ ವಹಿವಾಟಿಗಿಂತ 1.16% ಏರಿಕೆ ದಾಖಲು ಮಾಡಿತ್ತು. ಈಗಿನ ಕೊರನಾ ಸನ್ನಿವೇಶದ ಹೊರತಾಗಿಯೂ ಭಾರತದಲ್ಲಿ ತೈಲ ದರ ಎರಡು ವರ್ಷದ ಗರಿಷ್ಠ ಮಟ್ಟದಲ್ಲಿದೆ. ಮುಂಬೈ ಸೇರಿದಂತೆ ಹಲವೆಡೆ ಪೆಟ್ರೋಲ್ ದರ ಲೀಟರ್ ಗೆ 90 ರುಪಾಯಿ ಹಾಗೂ ಡೀಸೆಲ್ ದರ 80 ರುಪಾಯಿಯನ್ನು ದಾಟಿ ಹೋಗಿದೆ. ಅದರ ಬೆನ್ನಿಗೇ ಹಣದುಬ್ಬರ ಅಬ್ಬರಿಸುತ್ತಿದೆ.

English summary

Petrol, Diesel Price Scale Up In 2020

Petrol and diesel price scale up in 2020. How corona affect on petrol and diesel, here is an analysis.
Story first published: Tuesday, December 15, 2020, 16:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X