For Quick Alerts
ALLOW NOTIFICATIONS  
For Daily Alerts

ಲಾಕ್‌ಡೌನ್ ಎಫೆಕ್ಟ್: ಪೆಟ್ರೋಲ್, ಡೀಸೆಲ್ ಮಾರಾಟದಲ್ಲಿ ಭಾರೀ ಕುಸಿತ, ಎಲ್‌ಪಿಜಿ ಸಿಲಿಂಡರ್‌ ಏರಿಕೆ

|

ದೇಶಾದ್ಯಂತ ಕೊರೊನಾವೈರಸ್ ತಡೆಗಟ್ಟುವ ಹಿನ್ನೆಲೆ ಲಾಕ್‌ಡೌನ್ ಇರುವುದರಿಂದ ಪೆಟ್ರೋಲ್ ಮಾರಾಟ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಮಾರ್ಚ್ ತಿಂಗಳಿನಲ್ಲಿ ದೇಶಾದ್ಯಂತ ಪೆಟ್ರೋಲ್ ಮಾರಾಟದಲ್ಲಿ 15.5 ಪರ್ಸೆಂಟ್ ಇಳಿಕೆಯಾಗಿದೆ. ಇನ್ನು ಡೀಸೆಲ್ ಮಾರಾಟದಲ್ಲಿ 24 ಪರ್ಸೆಂಟ್ ಕಡಿಮೆಯಾಗಿದೆ.

ಮಾರ್ಚ್‌ ತಿಂಗಳಲ್ಲಿ ಪೆಟ್ರೋಲ್‌ ಮಾರಾಟ 1.859 ಮಿಲಿಯನ್ ಟನ್‌ಗಳು, ಡೀಸೆಲ್‌ ಮಾರಾಟ 4.8 ಮಿಲಿಯನ್ ಟನ್‌ಗಳು, ಎಟಿಎಫ್(ವಿಮಾನಯಾನ ಇಂಧನ) ಮಾರಾಟ 2.25 ಟನ್‌ಗಳಿಗೆ ಕುಸಿದಿದೆ ಎಂದು ಮೂಲಗಳು ತಿಳಿಸಿವೆ.

ಲಾಕ್‌ಡೌನ್ ಎಫೆಕ್ಟ್: ಪೆಟ್ರೋಲ್, ಡೀಸೆಲ್ ಮಾರಾಟದಲ್ಲಿ ಭಾರೀ ಕುಸಿತ

2019ರ ಮಾರ್ಚ್‌ ತಿಂಗಳಿನ ಅವಧಿಯಲ್ಲಿ ಪೆಟ್ರೋಲ್ ಮಾರಾಟವು 2.2 ಮಿಲಿಯನ್ ಟನ್‌, ಡೀಸೆಲ್ 6.34 ಮಿಲಿಯನ್ ಟನ್‌ ಹಾಗೂ ಎಟಿಎಫ್ 2.185 ಮಿಲಿಯನ್ ಟನ್‌ ಮಾರಾಟವಾಗಿತ್ತು.

ವಿಮಾನಗಳ ಹಾರಾಟ ಸ್ಥಗಿತಗೊಂಡ ಪರಿಣಾಮ ವಿಮಾನಯಾನ ಇಂಧನ (ಎಟಿಎಫ್) ಮಾರಾಟದಲ್ಲೂ 31.6 ಪರ್ಸೆಂಟ್‌ರಷ್ಟು ಕುಸಿತವಾಗಿದೆ. ಆದರೆ ಇದೇ ಅವಧಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಮಾರಾಟದಲ್ಲಿ 3.1 ಪರ್ಸೆಂಟ್‌ರಷ್ಟು ಏರಿಕೆಯಾಗಿದೆ. ಕಳೆದ ತಿಂಗಳು ಮಾರ್ಚ್‌ನಲ್ಲಿ 2.25 ಟನ್‌ಗಳಷ್ಟು ಮಾರಾಟವಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 2.185 ಮಿಲಿಯನ್ ಟನ್‌ ಎಲ್‌ಪಿಜಿ ಸಿಲಿಂಡರ್‌ಗಳ ಮಾರಾಟವಾಗಿತ್ತು.

English summary

Petrol Diesel Sales Down In March LPG Sales Up

India's petrol sales shrank by 15.5 per cent and diesel demand tanked over 24 per cent in March LPG Sales up
Story first published: Tuesday, April 7, 2020, 10:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X