For Quick Alerts
ALLOW NOTIFICATIONS  
For Daily Alerts

ರಾಜಸ್ಥಾನ, ಮಧ್ಯಪ್ರದೇಶದಲ್ಲಿ 100ರ ಗಡಿ ದಾಟಿದ ಪೆಟ್ರೋಲ್‌ ದರ!

|

ಪಂಚ ರಾಜ್ಯಗಳ ಚುನಾವಣೆಯ ಬಳಿಕ ಸತತ ನಾಲ್ಕು ದಿನಗಳು ತೈಲ ಬೆಲೆ ಏರಿಕೆಗೊಂಡಿದ್ದು, ಶುಕ್ರವಾರ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಪೆಟ್ರೋಲ್ ಲೀಟರ್‌ಗೆ 102 ರೂಪಾಯಿಗೆ ಏರಿಕೆಯಾಗಿದೆ.

 

ಸತತ 4ನೇ ದಿನ ಪೆಟ್ರೋಲ್, ಡೀಸೆಲ್‌ ದರ ಏರಿಕೆ: ಲೀಟರ್‌ಗೆ ಎಷ್ಟು ರೂ. ಹೆಚ್ಚಳ?ಸತತ 4ನೇ ದಿನ ಪೆಟ್ರೋಲ್, ಡೀಸೆಲ್‌ ದರ ಏರಿಕೆ: ಲೀಟರ್‌ಗೆ ಎಷ್ಟು ರೂ. ಹೆಚ್ಚಳ?

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಶುಕ್ರವಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 29 ಪೈಸೆ ಮತ್ತು ಡೀಸೆಲ್‌ ಲೀಟರ್‌ಗೆ 31 ಪೈಸೆ ಹೆಚ್ಚಿಸಿದೆ. ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 91.27 ರೂಪಾಯಿ ಮತ್ತು ಡೀಸೆಲ್ ದರ ಲೀಟರ್‌ಗೆ 81.73 ರೂಪಾಯಿ ತಲುಪಿದೆ.

 
ರಾಜಸ್ಥಾನ, ಮಧ್ಯಪ್ರದೇಶದಲ್ಲಿ 100ರ ಗಡಿ ದಾಟಿದ ಪೆಟ್ರೋಲ್‌ ದರ!

ರಾಜಸ್ಥಾನದ ಶ್ರೀ ಗಂಗನಗರ ಜಿಲ್ಲೆಯಲ್ಲಿ ಪೆಟ್ರೋಲ್ ಲೀಟರ್‌ಗೆ 102.15 ರೂಪಾಯಿಗೆ ತಲುಪಿದೆ. ಇನ್ನು ಮಧ್ಯಪ್ರದೇಶದ ಅನುಪ್ಪೂರಿನಲ್ಲಿ, ಪೆಟ್ರೋಲ್‌ಗೆ ಈಗ 101.86 ರೂಪಾಯಿಗೆ ತಲುಪಿದ್ರೆ, ಮಹಾರಾಷ್ಟ್ರದ ಪರಭಾನಿಯಲ್ಲಿ 100ರ ಗಡಿಯಲ್ಲಿದ್ದು, ಲೀಟರ್‌ಗೆ 99.95 ರೂಪಾಯಿನಷ್ಟಿದೆ.

ಈ ವರ್ಷ ಎರಡನೇ ಬಾರಿಗೆ ದೇಶದ ಕೆಲವು ಭಾಗಗಳಲ್ಲಿ ಪೆಟ್ರೋಲ್ ದರ ಲೀಟರ್‌ಗೆ 100 ರೂಪಾಯಿ ಗಡಿದಾಟಿದೆ. ಆಯಾ ರಾಜ್ಯಗಳ ತೆರಿಗೆಗಳಾದ ವ್ಯಾಟ್‌ ಮತ್ತು ಸರಕು ಶುಲ್ಕದ ಆಧಾರದ ಮೇಲೆ ಇಂಧನ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ರಾಜಸ್ಥಾನವು ದೇಶದಲ್ಲೇ ಅತಿ ಹೆಚ್ಚು ವ್ಯಾಟ್‌ ವಿಧಿಸುತ್ತದೆ, ನಂತರದ ಸ್ಥಾನದಲ್ಲಿ ಮಧ್ಯಪ್ರದೇಶವಿದೆ.

English summary

Petrol Rate Rs 102 Mark In Rajasthan And MP

Petrol price on Friday scaled to Rs 102 per litre in some parts of Rajasthan and Madhya Pradesh after rates were raised for the fourth straight day
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X