For Quick Alerts
ALLOW NOTIFICATIONS  
For Daily Alerts

ಏಪ್ರಿಲ್‌ 1ರಿಂದ ಆರ್‌ಬಿಐ ಹೊಸ ನಿಯಮ: ಬ್ಯಾಂಕುಗಳಿಂದ ಸ್ವಯಂ ಡೆಬಿಟ್‌ ಸೌಲಭ್ಯ ಇರೋದಿಲ್ಲ!

|

ಏಪ್ರಿಲ್‌ 1ರಿಂದ ಸಾಕಷ್ಟು ನಿಯಮಗಳು ಬದಲಾಗುತ್ತಿವೆ. ಅದರಲ್ಲೂ ಪ್ರಮುಖವಾಗಿ ಆರ್‌ಬಿಐ ಈ ಹೊಸ ನಿಯಮದ ಕುರಿತು ನೀವು ತಿಳಿದುಕೊಳ್ಳುವುದು ಉತ್ತಮ. ಏಪ್ರಿಲ್‌ ತಿಂಗಳಿನಿಂದ ಮೊಬೈಲ್ ಫೋನ್ ಬಿಲ್‌ಗಳು, ಯುಟಿಲಿಟಿ ಬಿಲ್‌ಗಳು, ಇತರೆ ಚಂದಾದಾರಿಕೆ ಶುಲ್ಕಗಳು ಮತ್ತು ಬ್ಯಾಂಕುಗಳ ಸ್ವಯಂ ಡೆಬಿಟ್‌ ಸೌಲಭ್ಯಗಳಿಗೆ ಅಡಚಣೆಯಾಗಲಿದೆ.

ಈ ಹೊಸ ನಿಯಮವು ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಅಷ್ಟೇ ಅಲ್ಲದೆ ಟೆಲಿಕಾಂ ಕಂಪನಿಗಳಾದ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ, ಟಾಟಾ ಪವರ್ ಮತ್ತು ಬಿಎಸ್‌ಇಎಸ್ ಮುಂತಾದ ಕಂಪನಿಗಳಿಗೂ ಸಹ ಪರಿಣಾಮ ಬೀರುತ್ತವೆ.

ಸ್ವಯಂ ಡೆಬಿಟ್ ಪಾವತಿ ವಿಫಲವಾಗುವ ಸಾಧ್ಯತೆ

ಸ್ವಯಂ ಡೆಬಿಟ್ ಪಾವತಿ ವಿಫಲವಾಗುವ ಸಾಧ್ಯತೆ

ಅಂದರೆ ನೀವು ಸ್ವಯಂ ಡೆಬಿಟ್ ಪಾವತಿಯನ್ನು ಸೆಟ್‌ ಮಾಡಿದ್ದರೆ ಏಪ್ರಿಲ್ 1ರಿಂದ ಅದು ವಿಫಲವಾಗುವ ಸಾಧ್ಯತೆಯಿದೆ. ಡೆಬಿಟ್ ಮತ್ತು ಕ್ರೆಡಿಟ್‌ ಕಾರ್ಡ್‌ ಮೂಲಕ ಪಾವತಿಗಳಿಗಾಗಿ ಎಎಫ್‌ಎ ಜಾರಿಗೆ ತರಲು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಮಾರ್ಚ್‌ 31ರವರೆಗೆ ಗಡುವು ನೀಡಿತ್ತು. ಹೀಗಾಗಿ ಏಪ್ರಿಲ್ 1ರಿಂದ ಲಕ್ಷಾಂತರ ಗ್ರಾಹಕರಿಗೆ ಇದ್ರಿಂದ ತೊಂದರೆಯಾಗಲಿದೆ.

ಆರ್‌ಬಿಐ ನಿಯಮ ಪಾಲಿಸದ ಬ್ಯಾಂಕ್‌ಗಳು

ಆರ್‌ಬಿಐ ನಿಯಮ ಪಾಲಿಸದ ಬ್ಯಾಂಕ್‌ಗಳು

ಈ ಮೊದಲೇ ಆರ್‌ಬಿಐ ವಿಧಿಸಿದ್ದ ನಿಯಮಗಳನ್ನು ಹೆಚ್ಚಿನ ಪ್ರಮುಖ ಬ್ಯಾಂಕುಗಳು ಪಾಲಿಸಿಲ್ಲ. ಈ ನಿರ್ಧಾರದಿಂದ ಎರಡು ಸಾವಿರ ಕೋಟಿ ಪೇಮೆಂಟ್ ಮೇಲೆ ಪರಿಣಾಮ ಬೀರಲಿದೆ. ಇವುಗಳಲ್ಲಿ ಮೊಬೈಲ್ ಬಿಲ್, ಯುಟಿಲಿಟಿ ಬಿಲ್, ಒಟಿಟಿ, ಮಾಧ್ಯಮ ಚಂದಾದಾರಿಕೆ ಸೇರಿದಂತೆ ಇತರ ಪಾವತಿಗಳ ಮೇಲೆ ಪರಿಣಾಮ ಬೀರಲಿದೆ.

ಗ್ರಾಹಕರಿಗೆ ಐದು ದಿನಗಳ ಮೊದಲೇ ನೋಟಿಫಿಕೇಶನ್ ಕಳುಹಿಸಬೇಕು

ಗ್ರಾಹಕರಿಗೆ ಐದು ದಿನಗಳ ಮೊದಲೇ ನೋಟಿಫಿಕೇಶನ್ ಕಳುಹಿಸಬೇಕು

ಹೊಸ ನಿಯಮಗಳಿಂದಾಗಿ ಬ್ಯಾಂಕುಗಳು, ಕ್ರೆಡಿಟ್ ಕಾರ್ಡ್ ಸೇವಾ ಪೂರೈಕೆದಾರರು ಪಾವತಿಯನ್ನು ಕಡಿತಗೊಳಿಸಲು ಐದು ದಿನಗಳ ಮೊದಲೇ ಗ್ರಾಹಕರಿಗೆ ನೋಟಿಫಿಕೇಶನ್ ಕಳುಹಿಸಬೇಕಿದೆ. ನಂತರ ಈ ನೋಟಿಫಿಕೇಶನ್ ಮೂಲಕ ಗ್ರಾಹಕರು ಪಾವತಿಯನ್ನು ಅನುಮೋದಿಸಿದ ನಂತರವೇ ಡೆಬಿಟ್‌ಗೆ ಅವಕಾಶ ನೀಡಿದೆ.

5,000 ರೂ.ಗಿಂತ ಹೆಚ್ಚಿನ ಪಾವತಿಗೆ ಒಟಿಪಿ

5,000 ರೂ.ಗಿಂತ ಹೆಚ್ಚಿನ ಪಾವತಿಗೆ ಒಟಿಪಿ

ಆರಂಭದಲ್ಲಿ, 2,000 ರೂಪಾಯಿವರೆಗಿನ ಪಾವತಿಗಳಿಗೆ ಮಿತಿಗಳನ್ನು ಅಳವಡಿಸಲಾಗಿತ್ತು. ಆದರೆ 2020 ಡಿಸೆಂಬರ್‌ನಲ್ಲಿ ಮಧ್ಯಸ್ಥಗಾರರಿಂದ ಆರ್‌ಬಿಐ ಪಡೆದ ಮನವಿಗಳ ಆಧಾರದ ಮೇಲೆ ಈ ಮಿತಿಯನ್ನು 5,000 ರೂ. ಹೆಚ್ಚಿಸಲಾಗಿದೆ.

5,000 ರೂಪಾಯಿಗಿಂತ ಹೆಚ್ಚಿನ ಪೇಮೆಂಟ್‌ಗೆ ಬ್ಯಾಂಕುಗಳು ಗ್ರಾಹಕರಿಗೆ ಒನ್‌-ಟೈಮ್ ಪಾಸ್‌ವರ್ಡ್ (ಒಟಿಪಿ) ಅಗತ್ಯವಿರುತ್ತದೆ.

 

English summary

Phone and other utility bill payments through auto-debit facility set to fail in April month

The Reserve Bank of India had given time up to March 31 to banks, card networks and online vendors to comply with new rules for two-factor authentication for customers’ recurring payments through debit and credit cards.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X