For Quick Alerts
ALLOW NOTIFICATIONS  
For Daily Alerts

ಪ್ರಧಾನ ಮಂತ್ರಿ ಜನ್ ಧನ್ ಯೋಜನಾಗೆ 41 ಕೋಟಿಗೂ ಹೆಚ್ಚು ಫಲಾನುಭವಿಗಳು

|

41 ಕೋಟಿಗೂ ಹೆಚ್ಚು ಫಲಾನುಭವಿಗಳು ಪ್ರಧಾನ ಮಂತ್ರಿ ಜನ್ ಧನ್ ಯೋಜನಾ (PMJDY) ಅಡಿ ಅನುಕೂಲ ಪಡೆದಿದ್ದಾರೆ. ಜನವರಿ 6, 2021ಕ್ಕೆ ಜನ್ ಧನ್ ಖಾತೆದಾರರ ಸಂಖ್ಯೆ 41.6 ಕೋಟಿ ಇದೆ. ಎಲ್ಲ ನಾಗರಿಕರನ್ನೂ ಹಣಕಾಸು ಆರ್ಥಿಕ ಒಳಗೊಳ್ಳುವಿಕೆಯಲ್ಲಿ ಸೇರಿಸಿಕೊಳ್ಳಬೇಕು ಎಂಬುದಕ್ಕೆ ಸರ್ಕಾರ ಬದ್ಧವಾಗಿದೆ. ಜನವರಿ 6ಕ್ಕೆ ಖಾತೆದಾರರ ಸಂಖ್ಯೆ 41 ಕೋಟಿ ದಾಟಿದೆ. ಶೂನ್ಯ ಬ್ಯಾಲೆನ್ಸ್ ಖಾತೆ ಮಾರ್ಚ್ 2015ರಲ್ಲಿ 58% ಇದ್ದದ್ದು 7.5%ಗೆ ಇಳಿದಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

2014ರ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಜನ್ ಧನ್ ಯೋಜನಾ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ಅದೇ ವರ್ಷದ ಆಗಸ್ಟ್ 28ರಂದು ಯೋಜನೆಗೆ ಚಾಲನೆ ನೀಡಲಾಯಿತು.

 

ಜನ್ ಧನ್ ಖಾತೆಗೆ 7500 ರುಪಾಯಿ ವರ್ಗಾವಣೆಗೆ ಕಾಂಗ್ರೆಸ್ ಸಲಹೆ

2018ರಲ್ಲಿ PMJDY 2.0 ಮೂಲಕ ಫೀಚರ್ಸ್ ಮತ್ತು ಅನುಕೂಲಗಳನ್ನು ವಿಸ್ತರಿಸಲಾಯಿತು. ಪ್ರತಿ ಕುಟುಂಬಕ್ಕೂ ಒಂದು ಖಾತೆ ಎಂದು ಇದ್ದ ಗಮನವನ್ನು ಈ ಹೊಸ ಅವತರಣಿಕೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯ ವ್ಯಾಪ್ತಿಗೆ ಒಳಪಡದ ಎಲ್ಲ ವಯಸ್ಕರಿಗೂ ಅನುಕೂಲ ದೊರಕಿಸಬೇಕು ಎಂದು ಬದಲಾಗಿತ್ತು.

ಪ್ರಧಾನ ಮಂತ್ರಿ ಜನ್ ಧನ್ ಯೋಜನಾಗೆ 41 ಕೋಟಿಗೂ ಹೆಚ್ಚು ಫಲಾನುಭವಿಗಳು

2018ರ ಆಗಸ್ಟ್ 28ರ ನಂತರ ಖಾತೆ ತೆರೆದವರಿಗೆ RuPay ಕಾರ್ಡ್ ಗಳ ಮೇಲೆ ಎರಡು ಲಕ್ಷ ರುಪಾಯಿ ಉಚಿತ ಅಪಘಾತ ವಿಮೆ ಘೋಷಿಸಲಾಯಿತು. ಓವರ್ ಡ್ರಾಫ್ಟ್ (ಓ.ಡಿ.) ಅನ್ನು 10 ಸಾವಿರದ ತನಕ ವಿಸ್ತರಿಸಲಾಯಿತು. ಯಾವುದೇ ನಿಯಮ ಇಲ್ಲದೆ 2000 ರುಪಾಯಿ ಓ.ಡಿ. ದೊರೆಯುವ ವ್ಯವಸ್ಥೆ ಮಾಡಲಾಯಿತು.

English summary

PM Jan Dhan Account Holders Number Crossed 41 Crore

PM Jan Dhan account holders number crossed 41 crore on January 6, 2021, according to finance ministry.
Company Search
COVID-19