For Quick Alerts
ALLOW NOTIFICATIONS  
For Daily Alerts

ಈ ಷೇರಿನ ಬೆಲೆ ಕೇವಲ 10 ದಿನದಲ್ಲಿ ಡಬಲ್ ಆಗಿದೆ!

|

ಕೊರೊನಾವೈರಸ್ ಹಾವಳಿಯಿಂದಾಗಿ ಇಡೀ ದೇಶದಲ್ಲಿ ಜನರು ವಿವಿಧ ರೀತಿಯಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸಿದ್ದಾರೆ. ಅನೇಕ ಕಂಪನಿಗಳು ಚೇತರಿಸಿಕೊಳ್ಳಲಾರದ ಮಟ್ಟವನ್ನು ತಲುಪಿವೆ. ಇನ್ನೂ ಕೆಲ ಕಂಪನಿಗಳು ಮುಂದುವರಿಯಲಾರದ ಪರಿಸ್ಥಿತಿಯಲ್ಲಿವೆ.

ಇದರ ನಡುವೆ ಕೊರೊನಾ ನಡುವೆ ಲಾಭಗಳಿಸಿದ ಕಂಪನಿಗಳ ಉದಾಹರಣೆಯನ್ನು ನಾವು ನೋಡಬಹುದು. ಅಮೆರಿಕಾದಲ್ಲಿ ಅಮೆಜಾನ್, ಟೆಸ್ಲಾ ಕಂಪನಿಯು ವಿಶ್ವದಲ್ಲೇ ಅತಿ ಹೆಚ್ಚು ಲಾಭಗಳಿಸಿದವು. ಭಾರತದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಂಬಲು ಸಾಧ್ಯವಾಗದಷ್ಟು ಹೂಡಿಕೆದಾರರನ್ನು ಸೆಳೆದು ಜಿಯೋ ಪ್ಲಾಟ್‌ಫಾರ್ಮ್‌ಗಳನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ.

ಇದೇ ರೀತಿಯಲ್ಲಿ ಭಾರತೀಯ ಷೇರುಪೇಟೆಯಲ್ಲಿ ಅಚ್ಚರಿಯ ಲಾಭಗಳಿಸಿದವರು ಕಡಿಮೆ ಇಲ್ಲ. ಕೆಲವೇ ದಿನಗಳಲ್ಲಿ ಹೂಡಿಕೆದಾರರ ಹಣವನ್ನು ದ್ವಿಗುಣಗೊಳಿಸಿರುವ ಷೇರುಗಳಿವೆ. ಅಂತಹ ಷೇರುಗಳಲ್ಲಿ ಒಂದಾದ ಪಿಎನ್‌ಬಿ ಹೌಸಿಂಗ್ ಫೈನಾನ್ಸ್‌ ಕೆಲವು ದಿನಗಳಲ್ಲಿ ಹೂಡಿಕೆದಾರ ಹಣ ದ್ವಿಗುಣಗೊಳಿಸಿದೆ.

ಕೇವಲ 10 ದಿನಗಳಲ್ಲಿ ಹೂಡಿಕೆದಾರರ ಹಣ ಡಬಲ್

ಕೇವಲ 10 ದಿನಗಳಲ್ಲಿ ಹೂಡಿಕೆದಾರರ ಹಣ ಡಬಲ್

ಪಿಎನ್‌ಬಿ ಬ್ಯಾಂಕಿನ ಅಂಗಸಂಸ್ಥೆಯಾದ ಪಿಎನ್‌ಬಿ ಹೌಸಿಂಗ್ ಫೈನಾನ್ಸ್‌ನ ಕಳೆದ 10 ವಹಿವಾಟುಗಳಲ್ಲಿ ಭರ್ಜರಿ ಏರಿಕೆ ದಾಖಲಿಸಿದೆ. ಈ ಷೇರು ಸುಮಾರು 10 ದಿನಗಳಲ್ಲಿ ಹೂಡಿಕೆದಾರರ ಹಣವನ್ನು ದ್ವಿಗುಣಗೊಳಿಸಿದೆ. ಸೋಮವಾರದವರೆಗೆ ಸತತ ಆರನೇ ಬಾರಿಗೆ ಮೇಲ್ಭಾಗದ ಸರ್ಕ್ಯೂಟ್ ಅನ್ನು ಮುಟ್ಟಿದೆ. ಇಂದು ಈ ಷೇರು ಶೇಕಡಾ 2ರಷ್ಟು ಕುಸಿತ ಕಂಡುಬಂದರೂ, ದಿನದ ಆರಂಭಿಕ ವಹಿವಾಟಿನಲ್ಲಿ 925 ರೂಪಾಯಿ ಮುಟ್ಟಿತ್ತು.

ಗೃಹ ಸಾಲದ ಕಂಪನಿ ಪಿಎನ್‌ಬಿ ಹೌಸಿಂಗ್ ಫೈನಾನ್ಸ್‌

ಗೃಹ ಸಾಲದ ಕಂಪನಿ ಪಿಎನ್‌ಬಿ ಹೌಸಿಂಗ್ ಫೈನಾನ್ಸ್‌

ಹೆಸರೇ ಸೂಚಿಸುವಂತೆ, ಈ ಕಂಪನಿಯು ಗೃಹ ಸಾಲದ ವ್ಯವಹಾರದಲ್ಲಿದೆ. ಪ್ರಸ್ತುತ, ಪಿಎನ್‌ಬಿ ಹೌಸಿಂಗ್ ಫೈನಾನ್ಸ್‌ನ ಬಡ್ಡಿದರಗಳು ಶೇಕಡಾ 7.55 ರಿಂದ ಪ್ರಾರಂಭವಾಗುತ್ತವೆ. ಕಂಪನಿಯು ಮೌಲ್ಯ ಅನುಪಾತಕ್ಕೆ ಸಾಲವನ್ನು ನೀಡುತ್ತದೆ, ಅಂದರೆ ಆಸ್ತಿ ಮೌಲ್ಯದ 90 ಪ್ರತಿಶತದವರೆಗೆ ಸಾಲ ನೀಡುತ್ತದೆ.

ಇದು ಮಾತ್ರವಲ್ಲದೆ, ಈ ಕಂಪನಿಯು 30 ವರ್ಷಗಳವರೆಗೆ ಗೃಹ ಸಾಲವನ್ನೂ ನೀಡುತ್ತದೆ. ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನೋಂದಾಯಿತ ವಸತಿ ಹಣಕಾಸು ಕಂಪನಿಯಾಗಿದೆ. ಮನೆ ಖರೀದಿ, ದುರಸ್ತಿ, ವಿಸ್ತರಣೆ, ನಿರ್ಮಾಣ ಮತ್ತು ಸುಧಾರಣೆಗಾಗಿ ಕಂಪನಿಯು ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ವೃತ್ತಿಪರರಿಗೆ ಸುಲಭವಾದ ಸಾಲವನ್ನು ನೀಡುತ್ತದೆ.

 

ಸತತ 10 ದಿನಗಳ ಭರ್ಜರಿ ವಹಿವಾಟು
 

ಸತತ 10 ದಿನಗಳ ಭರ್ಜರಿ ವಹಿವಾಟು

ಪಿಎನ್‌ಬಿ ಹೌಸಿಂಗ್ ಫೈನಾನ್ಸ್‌ನ ಷೇರು ಕಳೆದ 10 ದಿನಗಳಿಂದ ಈ ಮಟ್ಟಿನ ಭಾರೀ ಏರಿಕೆ ದಾಖಲಿಸಿದೆ. ಕಂಪನಿಯ ಮಂಡಳಿಯ ಸಭೆಯ ನಂತರ ಈ ಆರಂಭವು ಕಂಡು ಬಂದಿದೆ. ಈ ಸಭೆಯಲ್ಲಿ ಕಂಪನಿಯ ಮಂಡಳಿ 4,000 ಕೋಟಿ ರೂ.ಗಳ ಹಣವನ್ನು ಸಂಗ್ರಹಿಸಲು ಅನುಮೋದನೆ ನೀಡಿತು. ಈ ಕಾರಣದಿಂದಾಗಿ ಈ ಷೇರುಗಳ ದರವು 10 ದಿನಗಳಲ್ಲಿ ದ್ವಿಗುಣಗೊಂಡಿದೆ.

ಇಂದು ಅಂದರೆ ಮಂಗಳವಾರ ಮಧ್ಯಾಹ್ನ, ಈ ಷೇರು ಎನ್‌ಎಸ್‌ಇಯಲ್ಲಿ ದಿನದ ಕನಿಷ್ಠ ಮಟ್ಟವನ್ನು 837.35 ರೂ. ಮತ್ತು ಗರಿಷ್ಠ 925.00 ರೂ. ತಲುಪಿದೆ. ಮೇ 26, 2021ರಂದು 400 ರೂಪಾಯಿ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದ್ದ ಪಿಎನ್‌ಬಿ ಫೈನಾನ್ಸ್ ಷೇರು ಮೌಲ್ಯ ದ್ವಿಗುಣಗೊಂಡಿದೆ.

 Alert: ಜೂನ್‌ನಲ್ಲಿ SBI, HDFC, ICICI ಬ್ಯಾಂಕ್‌ನ ಈ ವಿಶೇಷ ಯೋಜನೆಗಳು ಮುಕ್ತಾಯ Alert: ಜೂನ್‌ನಲ್ಲಿ SBI, HDFC, ICICI ಬ್ಯಾಂಕ್‌ನ ಈ ವಿಶೇಷ ಯೋಜನೆಗಳು ಮುಕ್ತಾಯ

ಮೂರು ವರ್ಷಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ!

ಮೂರು ವರ್ಷಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ!

ಪಿಎನ್‌ಬಿ ಹೌಸಿಂಗ್ ಫೈನಾನ್ಸ್ 4000 ಕೋಟಿ ರೂ.ಗಳನ್ನು ಸಂಗ್ರಹಿಸುವುದಾಗಿ ಘೋಷಿಸಿದಾಗಿನಿಂದ, ಈ ಷೇರು ನಿರಂತರ ಗರಿಷ್ಠ ಮಟ್ಟವನ್ನು ಗಳಿಸುತ್ತಿದೆ. ಈ ಕಾರಣದಿಂದಾಗಿ, ಇದು ಸುಮಾರು 10 ದಿನಗಳಲ್ಲಿ ದ್ವಿಗುಣಗೊಂಡಿದೆ. ಜೊತೆಗೆ ಈ ಷೇರು 3 ವರ್ಷಗಳ ಅತ್ಯುನ್ನತ ಮಟ್ಟವನ್ನು ಮಾಡಲು ಸಾಧ್ಯವಾಯಿತು. ಪಿಎನ್‌ಬಿ ಹೌಸಿಂಗ್ ಫೈನಾನ್ಸ್‌ನ ಷೇರು ಜೂನ್ 2017 ರಿಂದ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.

ಈಕ್ವಿಟಿ ಷೇರುಗಳು ಮತ್ತು ಕನ್ವರ್ಟಿಬಲ್ ವಾರಂಟ್‌ಗಳನ್ನು ನೀಡುವ ಮೂಲಕ 4,000 ಕೋಟಿ ರೂ.ಗಳವರೆಗೆ ಸಂಗ್ರಹಿಸುವ ಪ್ರಸ್ತಾಪಕ್ಕೆ ಮಂಡಳಿ ಅನುಮೋದನೆ ನೀಡಿದೆ ಎಂದು ಕಂಪನಿ ಸೋಮವಾರ ತಿಳಿಸಿತ್ತು. ಕಾರ್ಲೈಲ್ ಗ್ರೂಪ್ ಸಂಸ್ಥೆಗಳ ನೇತೃತ್ವದ ಸಂಸ್ಥೆಗಳಿಂದ ಹಣವನ್ನು ಸಂಗ್ರಹಿಸಲಾಗುವುದು.

 

ಆದಿತ್ಯ ಪುರಿಯಿಂದ ಪಾಲು ಖರೀದಿ

ಆದಿತ್ಯ ಪುರಿಯಿಂದ ಪಾಲು ಖರೀದಿ

ಎಚ್‌ಡಿಎಫ್‌ಸಿ ಬ್ಯಾಂಕಿನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಆದಿತ್ಯ ಪುರಿ ಕೂಡ ಈ 4000 ಕೋಟಿ ರೂ.ಗಳ ಬಾಂಡ್‌ನಲ್ಲಿ ಪಾಲು ತೆಗೆದುಕೊಳ್ಳಲಿದ್ದಾರೆ. ಅವರ ಕುಟುಂಬದ ಹೂಡಿಕೆ ಸಂಸ್ಥೆ ಸಾಲಿಸ್‌ಬರಿ ಇನ್ವೆಸ್ಟ್‌ಮೆಂಟ್ಸ್ ಮೂಲಕ ಈ ಪಾಲನ್ನು ಪಡೆಯಲಾಗುವುದು.

English summary

PNB Housing Finance Stock Price Doubled In Just 10 Days

Here the details of PNB housing finance stock which price was doubled in just 10 days
Story first published: Tuesday, June 8, 2021, 15:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X