For Quick Alerts
ALLOW NOTIFICATIONS  
For Daily Alerts

ಇನ್ಮುಂದೆ ಗರ್ಭಿಣಿಯರಿಗೆ ಅಮೆರಿಕಾ ವೀಸಾ ಸಿಗೋದು ಕಷ್ಟ!

|

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಆಡಳಿತವು 'ವೀಸಾ ಪ್ರವಾಸೋದ್ಯಮ' ಮೇಲೇ ನಿರ್ಬಂಧಗಳನ್ನು ಹೇರಿದೆ. ಮಗುವಿಗೆ ಜನ್ಮ ನೀಡಲು ಅಮೆರಿಕಾಕ್ಕೆ ತೆರಳುತ್ತಿದ್ದ ಗರ್ಭಿಣಿಯರಿಗೆ ವೀಸಾಗಳಲ್ಲಿ ಬದಲಾವಣೆ ತರಲಾಗಿದೆ.

ಈ ಮೊದಲು ಮುಖ್ಯವಾಗಿ ಗರ್ಭಿಣಿಯರು ಮಗುವಿಗೆ ಜನ್ಮ ನೀಡಲು ಅಮೆರಿಕಾಕ್ಕೆ ತೆರಳುತ್ತಿದ್ದಾಗ 'ಬರ್ತ್ ಟೂರಿಸಂ' ಮೇಲೆ ವೀಸಾಗಳನ್ನು ನೀಡಲಾಗುತ್ತಿತ್ತು. ಆದರೆ ಟ್ರಂಪ್ ಆಡಳಿತವು ಈ ವೀಸಾಗಳ ಮೇಲೆ ನಿರ್ಬಂಧ ಹೇರಿದ್ದು, ಈ ರೀತಿಯಲ್ಲಿ ಬರುವ ವೀಸಾ ಅರ್ಜಿದಾರರನ್ನು ಈಗ ವೈದ್ಯಕೀಯ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ಬರುವ ಇತರ ವಿದೇಶಿಯರಂತೆ ಪರಿಗಣಿಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಇಲಾಖೆಯ ಮಾರ್ಗದರ್ಶನ ಬುಧವಾರ ಕಳುಹಿಸಲಾಗಿದೆ.

ಮಗುವಿಗೆ ಜನ್ಮ ನೀಡಲು ಅಮೆರಿಕಾಕ್ಕೆ ತೆರಳುವ ಅರ್ಜಿದಾರರು ತಾವು ವೈದ್ಯಕೀಯ ಚಿಕಿತ್ಸೆಗಾಗಿ ಬರುತ್ತಿದ್ದೇವೆ ಎಂದು ಸಾಬೀತುಪಡಿಸಬೇಕು ಮತ್ತು ಅದನ್ನು ಪಾವತಿಸಲು ಅವರ ಬಳಿ ಹಣವಿದೆ ಎಂದು ತಿಳಿಸಬೇಕು. ಅಮೆರಿಕಾ ಹೊಸ ವೀಸಾ ನಿಯಮಗಳು ಶುಕ್ರವಾರದಿಂದಲೇ ಜಾರಿಗೆ ಬರಲಿವೆ.

ಇನ್ಮುಂದೆ ಗರ್ಭಿಣಿಯರಿಗೆ ಅಮೆರಿಕಾ ವೀಸಾ ಸಿಗೋದು ಕಷ್ಟ!

ಈ ಮೊದಲು ಮಗುವಿಗೆ ಅಮೆರಿಕಾ ಪೌರತ್ವ ಪಡೆಯುವ ನೆಪದಿಂದ 'ಬರ್ತ್ ಟೂರಿಸಂ' ವೀಸಾದಡಿಯಲ್ಲಿ ತೆರಳಿ ಮಕ್ಕಳಿಗೆ ಅಲ್ಲಿನ ಪೌರತ್ವ ಪಡೆಯುವ ಪ್ರಕರಣಗಳು ಹೆಚ್ಚಾಗಿವೆ ಎಂದು ಅಲ್ಲಿನ ಮೂಲಗಳು ಹೇಳಿವೆ. ಈ ಮೂಲಕ ವೀಸಾ ವಂಚನೆ ಹಾಗೂ ತೆರಿಗೆ ವಂಚನೆ ಹೆಚ್ಚಾಗಿದೆ ಎಂಬುದು ಅಲ್ಲಿನ ಆಡಳಿತದ ಆರೋಪವಾಗಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಈ ಎಲ್ಲಾ ರೀತಿಯ ವಲಸೆಯನ್ನು ನಿರ್ಬಂಧಿಸುತ್ತಿದೆ. ಅಮೆರಿಕಾದಲ್ಲಿ ಜನಿಸಿದ ಯಾರನ್ನೂ ಸಂವಿಧಾನದಡಿಯಲ್ಲಿ ನಾಗರಿಕರೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಬರ್ತ್ ಟೂರಿಸಂ ವೀಸಾ ಬದಲಾವಣೆ ತರಲು ಮುಂದಾಗಿದೆ.

ಬರ್ತ್ ಟೂರಿಸಂ ಅಮೆರಿಕಾ ಮತ್ತು ವಿದೇಶಗಳಲ್ಲಿ ಲಾಭದಾಯಕ ವ್ಯವಹಾರವಾಗಿದೆ. ಅಮೆರಿಕನ್ ಕಂಪನಿಗಳು ಜಾಹೀರಾತುಗಳನ್ನು ನೀಡಿ ಈ ಸೌಲಭ್ಯವನ್ನು ಒದಗಿಸಲು 80,000 ಡಾಲರ್ ವರೆಗೂ ವರೆಗೆ ಶುಲ್ಕ ವಿಧಿಸುತ್ತವೆ. ಈ ಸೇವೆಯಡಿಯಲ್ಲಿ ಹೋಟೆಲ್ ಕೊಠಡಿಗಳು ನೀಡುವುದು ಮತ್ತು ವೈದ್ಯಕೀಯ ಆರೈಕೆಯನ್ನು ನೀಡುತ್ತವೆ. ಅಮೆರಿಕಾದಲ್ಲಿ ಜನ್ಮ ನೀಡಲು ಅನೇಕ ಮಹಿಳೆಯರು ರಷ್ಯಾ ಮತ್ತು ಚೀನಾದಿಂದ ಪ್ರಯಾಣಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಹೆರಿಗೆಗಾಗಿ ನಿರ್ದಿಷ್ಟವಾಗಿ ಎಷ್ಟು ವಿದೇಶಿ ಮಹಿಳೆಯರು ಅಮೆರಿಕಾಕ್ಕೆ ಪ್ರಯಾಣಿಸುತ್ತಾರೆ ಎಂಬುದರ ಬಗ್ಗೆ ಯಾವುದೇ ಅಂಕಿ ಅಂಶಗಳಿಲ್ಲ. ಕಠಿಣ ವಲಸೆ ಕಾನೂನುಗಳನ್ನು ಪ್ರತಿಪಾದಿಸುವ ಸೆಂಟರ್ ಫಾರ್ ಇಮಿಗ್ರೇಷನ್ ಸ್ಟಡೀಸ್, 2012 ರಲ್ಲಿ, ಅಮೆರಿಕಾದಲ್ಲಿ ಸುಮಾರು 36,000 ವಿದೇಶಿ ಮೂಲದ ಮಹಿಳೆಯರು ಮಗುವಿಗೆ ಜನ್ಮ ನೀಡಿದರು, ನಂತರ ದೇಶವನ್ನು ತೊರೆದರು ಎಂದು ಅಂದಾಜಿಸಲಾಗಿದೆ.

English summary

Pregnant Foreigners Now Hard To Travel Us For Giving Birth

The Trump administration is coming out Thursday with new visa restrictions aimed at restricting “birth tourism," in which women travel to the US to give birth
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X