For Quick Alerts
ALLOW NOTIFICATIONS  
For Daily Alerts

ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಉದ್ಯೋಗಿಗಳ ವೇತನ ಹೆಚ್ಚಳ ಅಂತಿಮ

By ಅನಿಲ್ ಆಚಾರ್
|

ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ (PSB) ಉದ್ಯೋಗಿಗಳಿಗೆ ಕಳೆದ ಮೂರು ವರ್ಷಗಳಿಂದ ಬಾಕಿ ಇದ್ದ ವೇತನ ಪರಿಷ್ಕರಣೆಗೆ ಸಹಿ ಹಾಕಿ, ಮುದ್ರೆ ಬಿದ್ದು, ತಲುಪಿಸಲಾಗಿದೆ. ಭಾರತೀಯ ಬ್ಯಾಂಕ್ ಒಕ್ಕೂಟ ಹಾಗೂ ಕಾರ್ಮಿಕರ ಸಂಘಟನೆಯ ಒಪ್ಪಂದದಂತೆಯೇ ವೇತನ ಹೆಚ್ಚಳಕ್ಕೆ 3385 ಕೋಟಿ ರುಪಾಯಿ ಆಗುತ್ತದೆ. ಅಂದರೆ ವೇತನದಲ್ಲಿನ ಒಟ್ಟು ಭಾಗದ 15 ಪರ್ಸೆಂಟ್ ಆಗುತ್ತದೆ.

ಇನ್ನು ಐದು ದಿನಗಳ ಕಾರ್ಯ ನಿರ್ವಹಣೆಯ ನಿಯಮ ಜಾರಿಗೆ ತರಬೇಕು ಎಂದು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಅಧಿಕಾರಿಗಳ ಬೇಡಿಕೆಗೆ ಯಾವುದೇ ಘೋಷಣೆ ಮಾಡಿಲ್ಲ. ಇನ್ನು ಐಬಿಎ ಎಪ್ಪತ್ಮೂರನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಒಂದು ಶ್ರೇಯಾಂಕ, ಒಂದು ಪಿಂಚಣಿ ಯೋಜನೆಯ ಸುಳಿವು ನೀಡಿದ್ದರು.

 

ಅದರ ಪ್ರಕಾರ, ನಿವೃತ್ತಿಯ ದಿನಾಂಕ ಹಾಗೂ ಅವರ ಹುದ್ದೆಯನ್ನು ಗಣನೆಗೆ ತೆಗೆದುಕೊಳ್ಳದೆ ಪ್ರತಿಯೊಬ್ಬರಿಗೂ ಪರಿಮಾಣದ ದೃಷ್ಟಿಯಿಂದ ಒಂದೇ ಬಗೆಯ ಪಿಂಚಣಿ ದೊರೆಯುತ್ತದೆ.

ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಉದ್ಯೋಗಿಗಳ ವೇತನ ಹೆಚ್ಚಳ ಅಂತಿಮ

ಇನ್ನು, ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ಉದ್ಯೋಗಿಗಳಿಗೆ ಹದಿನೈದು ಪರ್ಸೆಂಟ್ ವೇತನ ಹೆಚ್ಚಳ ಮಾಡಲಾಗುತ್ತದೆ. ಇದರಿಂದ ಸಂಬಳದಲ್ಲಿ ವೈಯಕ್ತಿಕ ಮಟ್ಟದಲ್ಲಿ 1100 ರುಪಾಯಿ ಸೇರ್ಪಡೆ ಮಾಡುತ್ತದೆ. ಇದರಿಂದ ತುಟ್ಟಿ ಭತ್ಯೆ (ಡಿಯರ್ ನೆಸ್ ಅಲೋವೆನ್ಸ್) 6352 ಪಾಯಿಂಟ್ಸ್ ಒಟ್ಟಾಗಿಸುತ್ತದೆ.

ಕುಟುಂಬ ಪಿಂಚಣಿ ಸಮಾನವಾಗಿ ಮೂವತ್ತು ಪರ್ಸೆಂಟ್ ಪಾವತಿಸಲಾಗುತ್ತದೆ. ಇದಕ್ಕೆ ಸರ್ಕಾರ ಅನುಮತಿ ನೀಡಬೇಕಿದೆ. ಇನ್ನು ವೈದ್ಯಕೀಯ ವೆಚ್ಚದ ರೀ ಎಂಬರ್ಸ್ ಮೆಂಟ್ ಅನ್ನು ವೈದ್ಯಕೀಯ ಅನುದಾನ ಯೋಜನೆಗೆ ವಾರ್ಷಿಕವಾಗಿ ಗರಿಷ್ಠ 2355 ರುಪಾಯಿ ಮಿತಿ ಹಾಕಲಾಗಿದೆ.

English summary

PSB Employees Wage Hike Decided

Public Sector Bank (PSB) employees wage hike decided. One rank and one pension to be adopted.
Story first published: Wednesday, November 11, 2020, 23:14 [IST]
Company Search
COVID-19