For Quick Alerts
ALLOW NOTIFICATIONS  
For Daily Alerts

ಪುಣೆಯ 'ಗೋಲ್ಡ್‌ ಮ್ಯಾನ್‌' ಸಾಮ್ರಾಟ್ ಮೊಜೆ ಇನ್ನಿಲ್ಲ

|

ಗೋಲ್ಡ್‌ ಮ್ಯಾನ್‌ ಎಂದೇ ಖ್ಯಾತಿಯ ಮಹಾರಾಷ್ಟ್ರದ ಉದ್ಯಮಿ ಸಾಮ್ರಾಟ್‌ ಮೊಜೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೈಮೇಲೆ 10 ಕಿಲೋ ಗ್ರಾಂ ಬಂಗಾರ ಹಾಕಿಕೊಂಡು ಒಡಾಡುತ್ತಿದ್ದ ಸಾಮ್ರಾಟ್‌ ಮೊಜೆ ದೇಶಾದ್ಯಂತ 'ಗೋಲ್ಡ್‌ ಮ್ಯಾನ್' ಎಂದೇ ಪ್ರಖ್ಯಾತಿಯಾಗಿದ್ದರು. 39 ವರ್ಷ ವಯಸ್ಸಿನ ಸಾಮ್ರಾಟ್‌, ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅವರ ಅಂತ್ಯಸಂಸ್ಕಾರವನ್ನು ಪುಣೆಯ ಯರವಾಡದ ಬಳಿ ಕೆಲವೇ ಜನರ ಸಮ್ಮುಖದಲ್ಲಿ ನೆರವೇರಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪುಣೆಯ 'ಗೋಲ್ಡ್‌ ಮ್ಯಾನ್‌' ಸಾಮ್ರಾಟ್ ಮೊಜೆ ಇನ್ನಿಲ್ಲ

ಪುಣೆ ನಗರದಾದ್ಯಂತ ಖ್ಯಾತ ಬ್ಯುಸಿನೆಸ್‌ಮನ್ ಆಗಿ ಮೊಜೆ ಗುರುತಿಸಿಕೊಂಡಿದ್ದರು. ಕತ್ತಿನಲ್ಲಿ ಎಂಟರಿಂದ ಹತ್ತು ಕೆ.ಜಿ ಚಿನ್ನವನ್ನು ಧರಿಸುವ ಮೂಲಕ ಗೋಲ್ಡ್ ಮ್ಯಾನ್ ಎಂದೇ ಗುರುತಿಸಿಕೊಂಡಿದ್ದರು. ಮೊಜೆ ರಾಜಕೀಯದಲ್ಲಿ ಗುರುತಿಸಿಕೊಳ್ಳುವ ಅಭಿಲಾಷೆ ಹೊಂದಿದ್ದರು.

ಗೋಲ್ಡ್‌ ಮ್ಯಾನ್ ಎಂದು ಗುರುತಿಸಿಕೊಂಡು ಅತಿ ಕಡಿಮೆ ವಯಸ್ಸಿನಲ್ಲಿ ಮೃತಪಟ್ಟವರ ಪೈಕಿ ಸಾಮ್ರಾಟ್‌ ಮೊಜೆ ಮೊದಲಿಗರೇನಲ್ಲ. ಈ ಮೊದಲು 2011ರಲ್ಲಿ ರಮೇಶ್ ವಂಜಾಲೆ ಎಂಬಾತ ಕೂಡಾ ಗೋಲ್ಡ್‌ ಮ್ಯಾನ್ ಎಂಬ ಹೆಸರಿನಿಂದಲೇ ಪ್ರಖ್ಯಾತನಾಗಿದ್ದ. ಆದರೆ ಆತ ಕೂಡಾ 45ನೇ ವಯಸ್ಸಿಗೆ ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದರು.

Read more about: gold ಚಿನ್ನ
English summary

Pune Gold Man Samrat Moze Dies

Popular as the “gold man” in his lifetime, 39-year-old Samrat Hiraman Moze died of a cardiac arrest at a private hospital
Story first published: Saturday, May 9, 2020, 15:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X