For Quick Alerts
ALLOW NOTIFICATIONS  
For Daily Alerts

ಮೊದಲ ತ್ರೈಮಾಸಿಕದಲ್ಲಿ ಕೆನರಾ ಬ್ಯಾಂಕ್‌ಗೆ 406 ಕೋಟಿ ರುಪಾಯಿ ನಿವ್ವಳ ಲಾಭ

|

ಕೆನರಾ ಬ್ಯಾಂಕ್‌ನ ಪ್ರಸಕ್ತ ಹಣಕಾಸು ವರ್ಷ 2020-21 ರ ಮೊದಲ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಶೇಕಡ 23ರಷ್ಟು ಏರಿಕೆಯಾಗಿದೆ. ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್‌ 406 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ 320 ಕೋಟಿ ರುಪಾಯಿ ಲಾಭ ಗಳಿಸಿತ್ತು. ಒಟ್ಟಾರೆ ವರಮಾನ 14,062 ಕೋಟಿಗಳಿಂದ 20,686 ಕೋಟಿಗಳಿಗೆ ಏರಿಕೆಯಾಗಿದೆ ಎಂದು ಷೇರುಪೇಟೆಗೆ ಕೆನರಾ ಬ್ಯಾಂಕ್‌ ಮಾಹಿತಿ ನೀಡಿದೆ.

ಭಾರತದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಬ್ಯಾಂಕ್‌ ಸಿಇಓ ಇವರು

ಬ್ಯಾಂಕಿನ ವಸೂಲಾಗದ ಸಾಲದ (ಎನ್‌ಪಿಎ) ಸರಾಸರಿ ಮೊತ್ತ 39,399 ಕೋಟಿಗಳಿಂದ 57,525 ಕೋಟಿಗಳಿಗೆ ಏರಿಕೆಯಾಗಿದೆ. ನಿವ್ವಳ ಎನ್‌ಪಿಎ ಮೊತ್ತ 23,150 ಕೋಟಿಗಳಿಂದ 24,355 ಕೋಟಿ ರುಪಾಯಿಗೆ ಏರಿಕೆಯಾಗಿದೆ.

ಮೊದಲ ತ್ರೈಮಾಸಿಕದಲ್ಲಿ ಕೆನರಾ ಬ್ಯಾಂಕ್‌ಗೆ 406 ಕೋಟಿ ರು ನಿವ್ವಳ ಲಾಭ

 

ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತವು 1,899 ಕೋಟಿಗಳಿಂದ 3,826 ಕೋಟಿಗಳಿಗೆ ತಲುಪಿದೆ ಎಂದು ಪಿಟಿಐ ವರದಿ ಮಾಡಿದೆ.

English summary

Quarter 1: Canara Bank Net Profit Rises To Rs 406 Crore

Quarter 1: Canara Bank Net Profit Rises To Rs 406 Crore
Company Search
COVID-19