For Quick Alerts
ALLOW NOTIFICATIONS  
For Daily Alerts

ಮುಂಬೈನಲ್ಲಿ 1,000 ಕೋಟಿ ಬೆಲೆಯ ಬಂಗಲೆ ಖರೀದಿಸಿದ ರಾಧಾಕಿಶನ್ ದಮಾನಿ

|

ದೇಶದ ಟಾಪ್ ಶ್ರೀಮಂತರಲ್ಲಿ ಒಬ್ಬ ಅವೆನ್ಯೂ ಸೂಪರ್‌ಮಾರ್ಕೆಂಟ್ ಮಾಲೀಕ ರಾಧಾಕಿಶನ್ ದಮಾನಿ ದಕ್ಷಿಣ ಮುಂಬೈಯಲ್ಲಿ ಬರೋಬ್ಬರಿ 1,001 ಕೋಟಿ ಮೌಲ್ಯದ ಆಸ್ತಿಯನ್ನು ಖರೀದಿಸಿದ್ದಾರೆ. ದಮಾನಿ ತನ್ನ ಸಹೋದರ ಗೋಪಿಕಿಶನ್ ದಮಾನಿ ಅವರೊಂದಿಗೆ ಈ ಆಸ್ತಿಯನ್ನು ಖರೀದಿಸಿದ್ದಾರೆ.

61,916.3 ಚದರ ಅಡಿ ಅಳತೆಯ ಎರಡು ಅಂತಸ್ತಿನ ಬಂಗಲೆಯಾಗಿರುವ ರಾಧಾಕಿಶನ್ ದಮಾನಿ ಹೊಸ ಮನೆಯು, ದೇಶದ ವಸತಿ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ವ್ಯವಹಾರವಾಗಿದೆ.

ಮುಂಬೈನಲ್ಲಿ 1,000 ಕೋಟಿ ರೂ. ಬಂಗಲೆ ಖರೀದಿಸಿದ ರಾಧಾಕಿಶನ್ ದಮಾನಿ

ಇದು ದಕ್ಷಿಣ ಮುಂಬಯಿಯ ಮಲಬಾರ್ ಹಿಲ್ ಪ್ರದೇಶದಲ್ಲಿ ನಾರಾಯಣ್ ದಾಭೋಲ್ಕರ್ ರಸ್ತೆಯಲ್ಲಿದೆ. ದಾಖಲೆಗಳ ಪ್ರಕಾರ ಆಸ್ತಿಯ ಮಾರುಕಟ್ಟೆ ಬೆಲೆ 724 ಕೋಟಿ ರೂಪಾಯಿ. ದಮಾನಿ 30.03 ಕೋಟಿ ರೂಪಾಯಿಯನ್ನು ಸ್ಟಾಂಪ್ ಡ್ಯೂಟಿಯಾಗಿ ಪಾವತಿಸಿದ್ದಾರೆ. ಆಸ್ತಿಯ ನೋಂದಣಿ 31 ಮಾರ್ಚ್ 2021ರಂದು ಆಗಿದೆ.

ATM ಕಾರ್ಡ್‌ ಇಲ್ಲದೆ ಗೂಗಲ್ ಪೇ, ಪೇಟಿಎಂನಿಂದ ಹಣ ವಿತ್‌ಡ್ರಾ ಮಾಡುವುದು ಹೇಗೆ?ATM ಕಾರ್ಡ್‌ ಇಲ್ಲದೆ ಗೂಗಲ್ ಪೇ, ಪೇಟಿಎಂನಿಂದ ಹಣ ವಿತ್‌ಡ್ರಾ ಮಾಡುವುದು ಹೇಗೆ?

ದಮಾನಿ ಮತ್ತು ಅವರ ಸಹೋದರ ಪ್ರಸ್ತುತ ದಕ್ಷಿಣ ಮುಂಬೈನ ಮತ್ತೊಂದು ದುಬಾರಿ ಪ್ರದೇಶವಾದ ಅಲ್ಟಾಮೌಂಟ್ ರಸ್ತೆಯ ಪೃಥ್ವಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ .

ಪ್ರಸ್ತುತ ಪುರಚಂದ್ ರಾಯ್‌ಚಂದ್ & ಸನ್ಸ್ ಎಲ್‌ಎಲ್‌ಪಿ, ಪರೇಶ್‌ಚಂದ್ ರಾಯ್‌ಚಂದ್ & ಸನ್ಸ್ ಎಲ್‌ಎಲ್‌ಪಿ ಮತ್ತು ಪ್ರೇಮ್‌ಚಂದ್ ರಾಯ್‌ಚಂದ್ ಮತ್ತು ಸನ್ಸ್ ಎಲ್‌ಎಲ್‌ಪಿ ಪಾಲುದಾರರಿಂದ ದಮಾನಿ ಈ ಆಸ್ತಿಯನ್ನು ಖರೀದಿಸಿದ್ದಾರೆ.

English summary

Radhakishan Damani Buys Rs 1000 Crore Bungalow In Mumbai

Founder of DMart, Radhakishan Damani, has bought a property in South Mumbai worth Rs 1,001 crore.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X