For Quick Alerts
ALLOW NOTIFICATIONS  
For Daily Alerts

RailTel IPO ಫೆಬ್ರವರಿ 16ರಿಂದ ಶುರು; ರು. 93- 94 ದರ ನಿಗದಿ

|

ಸರ್ಕಾರಿ ಸ್ವಾಮ್ಯದ ರೈಲ್ ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಗುರುವಾರ ಆರಂಭಿಕ ಷೇರು ಮಾರಾಟಕ್ಕೆ ದರ ನಿಗದಿ ಮಾಡಿದೆ. ಇನಿಷಿಯಲ್ ಷೇರು ಮಾರಾಟಕ್ಕೆ ರು. 93ರಿಂದ 94 ಎಂದು ನಿಗದಿ ಮಾಡಿದೆ. ಸಾರ್ವಜನಿಕರಿಗೆ ಸಬ್ ಸ್ಕ್ರಿಪ್ಷನ್ ಗಾಗಿ ಫೆಬ್ರವರಿ 16ರಿಂದ ಲಭ್ಯವಾಗುತ್ತದೆ. ಈ ಐಪಿಒ ಸಂಪೂರ್ಣವಾಗಿ ಆಫರ್ ಫಾರ್ ಸೇಲ್ (ಒಎಫ್ ಎಸ್) ಆಗಿರುತ್ತದೆ.

ಈ ಮೂಲಕ ಸರ್ಕಾರವು 87,153,369 ಈಕ್ವಿಟಿ ಷೇರುಗಳನ್ನು ಮಾರಲಿದೆ. ಇದು ಕಂಪೆನಿಯಲ್ಲಿನ ಒಟ್ಟು ಶೇಕಡಾ 27.16ರಷ್ಟು ಆಗುತ್ತದೆ ಎಂದು ಕಂಪೆನಿಯು ಹೇಳಿಕೆಯಲ್ಲಿ ತಿಳಿಸಿದೆ. ಮೇಲ್ ಸ್ತರದ ದರದಲ್ಲಿ ಸರ್ಕಾರವು ರು. 819 ಕೋಟಿಗಿಂತ ಸ್ವಲ್ಪ ಹೆಚ್ಚು ಹಣವನ್ನು ಸಂಗ್ರಹ ಮಾಡಲಿದೆ.

BEMLನಲ್ಲಿ 26% ಷೇರು ಬಂಡವಾಳ ಹಿಂತೆಗೆತಕ್ಕೆ ಮಾರ್ಚ್ 1ರ ತನಕ ಬಿಡ್ಡಿಂಗ್BEMLನಲ್ಲಿ 26% ಷೇರು ಬಂಡವಾಳ ಹಿಂತೆಗೆತಕ್ಕೆ ಮಾರ್ಚ್ 1ರ ತನಕ ಬಿಡ್ಡಿಂಗ್

ಮೂರು ದಿನಗಳ ಸಬ್ ಸ್ಕ್ರಿಪ್ಷನ್ ಫೆಬ್ರವರಿ 18ಕ್ಕೆ ಕೊನೆಯಾಗುತ್ತದೆ. ಆಂಕರ್ ಹೂಡಿಕೆದಾರರ ಪಾಲಿನ ಸಬ್ ಸ್ಕ್ರಿಪ್ಷನ್ ಫೆಬ್ರವರಿ 15ರಂದು ಶುರುವಾಗುತ್ತದೆ. ವಿತರಣೆಯ ಅರ್ಧದಷ್ಟು ಸಾಂಸ್ಥಿಕ ಖರೀದಿದಾರರು, 35% ರೀಟೇಲ್ ಹೂಡಿಕೆದಾರರಿಗೆ, 15 ಪರ್ಸೆಂಟ್ ಸಾಂಸ್ಥಿಕೇತರ ಹೂಡಿಕೆದಾರರಿಗೆ ಮೀಸಲಾಗಿರುತ್ತದೆ.

RailTel IPO ಫೆಬ್ರವರಿ 16ರಿಂದ ಶುರು; ರು. 93- 94 ದರ ನಿಗದಿ

ರೈಲ್ ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಮಿನಿ ರತ್ನ ಪಿಎಸ್ ಯು. ಅತಿ ದೊಡ್ಡ ನ್ಯೂಟ್ರಲ್ ಟೆಲಿಕಾಂ ಮೂಲಸೌಕರ್ಯ ಒದಗಿಸುವ ಅತಿ ದೊಡ್ಡ ಕಂಪೆನಿಗಳಲ್ಲಿ ಒಂದು.. ರೈಲ್ವೆ ಹಳಿ ಜತೆ ರೈಟ್ ಆಫ್ ವೇ (RoW) ದೇಶದ ಅತಿ ದೊಡ್ಡ ಆಪ್ಟಿಕ್ ಫೈಬರ್ ನೆಟ್ ವರ್ಕ್ ಹೊಂದಿದೆ.

ಜೂನ್ 30, 2020ಕ್ಕೆ ಆಪ್ಟಿಕ್ ಫೈಬರ್ ನೆಟ್ ವರ್ಕ್ 55,000 ಕಿ.ಮೀ. ಮತ್ತು 5677 ರೈಲು ನಿಲ್ದಾಣಗಳನ್ನು ಒಳಗೊಳ್ಳುತ್ತದೆ. ಅಂದ ಹಾಗೆ ಐಸಿಐಸಿಐ ಸೆಕ್ಯೂರಿಟೀಸ್, ಐಡಿಬಿಐ ಕ್ಯಾಪಿಟಲ್, ಎಸ್ ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಈ ಇಶ್ಯೂಗೆ ಮರ್ಚೆಂಟ್ ಬ್ಯಾಂಕರ್ ಗಳಾಗಿವೆ.

English summary

RailTel IPO Subscription From February 16th; Price Band Rs 93- 94

Mini ratna PSU Rail Tel IPO starts from February 16th, 2021. Price band Rs 93- 94. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X