ನವೆಂಬರ್ ತಿಂಗಳಲ್ಲಿನ ಷೇರುಪೇಟೆಯ ಬೆಲೆ ದೀಪಾವಳಿಯಲ್ಲಿ ಅನುಭವಿ ಹೂಡಿಕೆದಾರ ರಾಕೇಶ್ ಜುಂಜುನ್ ವಾಲಾ ಅವರ ಪೋರ್ಟ್ ಫೋಲಿಯೋ ಭರ್ಜರಿಯಾದ ಏರಿಕೆ ಕಂಡಿದೆ. ಕಳೆದ ಒಂದೇ ತಿಂಗಳಲ್ಲಿ ನಿಫ್ಟಿ ಸೂಚ್ಯಂಕ 11 ಪರ್ಸೆಂಟ್ ಗಳಿಕೆ ಕಂಡಿದೆ. ಇದರಿಂದಾಗಿ ರಾಕೇಶ್ ಜುಂಜುನ್ ವಾಲಾ ಐದು ಕಂಪೆನಿಯ ಷೇರುಗಳಿಂದಲೇ 967 ಕೋಟಿ ರುಪಾಯಿ ಲಾಭ ಮಾಡಿದ್ದಾರೆ.
ಅದರ ಜತೆಗೆ ಕಳೆದ ತ್ರೈಮಾಸಿಕದಲ್ಲಿ ಕೆಲವು ಷೇರುಗಳಲ್ಲಿ ಹೂಡಿಕೆ ಹೆಚ್ಚು ಮಾಡಿದ್ದಾರೆ ಮತ್ತು ಅಂಥ ಮೂರು ಕಂಪೆನಿಯ ಷೇರುಗಳಿಂದ 65.3 ಕೋಟಿ ಸಂಪತ್ತು ಕರಗಿದೆ. ನವೆಂಬರ್ ನಲ್ಲಿ ಟೈಟಾನ್ ಕಂಪೆನಿಯ ಷೇರು 11.5 ಪರ್ಸೆಂಟ್ ಹೆಚ್ಚಳ ದಾಖಲಿಸಿದೆ. ರಾಕೇಶ್ ಜುಂಜುನ್ ವಾಲಾ ಮತ್ತು ಅವರ ಪತ್ನಿ ಆ ಕಂಪೆನಿಯ 4.9 ಕೋಟಿ ಷೇರುಗಳನ್ನು ಹೊಂದಿದ್ದಾರೆ.
ಈ ಷೇರಿನ ಬೆಲೆ ಏರಿಕೆಯಿಂದಾಗಿ ರಾಕೇಶ್ ಜುಂಜುನ್ ವಾಲಾಗೆ 686 ಕೋಟಿ ರುಪಾಯಿ ಲಾಭ ಆಗಿದೆ. ಮಾರ್ಚ್ ತಿಂಗಳಲ್ಲಿ ಟೈಟಾನ್ ಷೇರು ಅನುಭವಿಸಿದ್ದ ನಷ್ಟವನ್ನು ಸಹ ಭರಿಸಿಕೊಂಡು, ಈ ವರ್ಷದಲ್ಲಿ 17% ಗಳಿಕೆಯಲ್ಲಿ ಇದೆ. ಟೈಟಾನ್ ಹೊರತುಪಡಿಸಿ ರಾಕೇಶ್ ಜುಂಜುನ್ ವಾಲಾಗೆ ಲಾಭ ತಂದುಕೊಟ್ಟಿರುವ ಕಂಪೆನಿ ಎಸ್ಕಾರ್ಟ್ಸ್.

ಆ ಕಂಪೆನಿಯ ಷೇರುಗಳ ಮೂಲಕ ನವೆಂಬರ್ ನಲ್ಲಿ 149.2 ಕೋಟಿ ಲಾಭ ಆಗಿದೆ. ಒಟ್ಟು 72 ಲಕ್ಷ ಎಸ್ಕಾರ್ಟ್ಸ್ ಷೇರುಗಳು ಜುಂಜುನ್ ವಾಲಾ ಬಳಿ ಇವೆ. ಇನ್ನು ಅತಿ ದೊಡ್ಡ ಲಾಭ ತಂದುಕೊಟ್ಟಿರುವುದು ಇಂಡಿಯನ್ ಹೋಟೆಲ್ಸ್. ನವೆಂಬರ್ ನಲ್ಲಿ ಇಪ್ಪತ್ತೊಂದು ಪರ್ಸೆಂಟ್ ಗಳಿಕೆ ಕಂಡಿರುವ ಆ ಷೇರಿನಿಂದ ಒಂದೇ ತಿಂಗಳಲ್ಲಿ 26.3 ಕೋಟಿ ಸಂಪತ್ತು ಹೆಚ್ಚಾಗಿದೆ.
ಇನ್ನು Rallies India ಷೇರಿನಿಂದ 56.1 ಕೋಟಿ ಹಾಗೂ ಫೋರ್ಟೀಸ್ ಹೆಲ್ತ್ ಕೇರ್ ನಿಂದ 50 ಕೋಟಿ ರುಪಾಯಿ ಲಾಭ ಪಡೆದುಕೊಂಡಿದ್ದಾರೆ. ಅದೇ ರೀತಿ ಬೆಲೆ ಇಳಿಕೆ ಕಂಡ ಷೇರುಗಳೆಂದರೆ, ಲುಪಿನ್, ಜುಬಿಲಿಯೆಂಟ್ ಲೈಫ್ ಸೈನ್ಸಸ್, ಆಗ್ರೋಟೆಕ್ ಫುಡ್ಸ್.
More From GoodReturns

ಷೇರು ಮಾರುಕಟ್ಟೆ ಇಂದು ಭರ್ಜರಿ ಏರಿಕೆ: ಹೂಡಿಕೆದಾರರಿಗೆ ಬಂಪರ್ ಲಾಭ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರಿಗೆ ಭರ್ಜರಿ ಲಾಭ ಸಿಗುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಷೇರು ಮಾರುಕಟ್ಟೆ ಇಂದು: ಟಿಸಿಎಸ್ ಫಲಿತಾಂಶದ ಅನಿರೀಕ್ಷಿತ ತಿರುವು!

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!



Click it and Unblock the Notifications