For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಲಾಕರ್ ಒಪ್ಪಂದ ರಿನಿವಲ್ ಗಡುವು ವಿಸ್ತರಣೆ, ಹೊಸ ಡೆಡ್‌ಲೈನ್ ತಿಳಿಯಿರಿ

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬ್ಯಾಂಕ್ ಲಾಕರ್ ಬಳಕೆ ಮಾಡುವ ಗ್ರಾಹಕರಿಗೆ ರಿಲೀಫ್ ನೀಡಿದೆ. ಬ್ಯಾಂಕ್ ಲಾಕರ್ ಒಪ್ಪಂದ ರಿನಿವಲ್ ಮಾಡುವ ಗಡುವನ್ನು ಆರ್‌ಬಿಐ ವಿಸ್ತರಣೆ ಮಾಡಿದೆ. ಗ್ರಾಹಕರು ಡಿಸೆಂಬರ್ 31, 2023ರವರೆಗೆ ಬ್ಯಾಂಕ್ ಲಾಕರ್ ಒಪ್ಪಂದ ರಿನಿವಲ್ ಗಡುವನ್ನು ಹೊಂದಿದ್ದಾರೆ. ಈ ಹಿಂದೆ ಬ್ಯಾಂಕ್ ಲಾಕರ್ ಒಪ್ಪಂದ ರಿನಿವಲ್ ಮಾಡುವ ಗಡುವು ಜನವರಿ 1, 2023 ಆಗಿದೆ.

ಹಲವಾರು ಗ್ರಾಹಕರುಗಳು ಹೊಸ ಒಪ್ಪಂದಕ್ಕೆ ಅಥವಾ ಹೊಸ ಒಪ್ಪಂದ ರಿನಿವಲ್‌ಗೆ ಮಾಡಿಕೊಂಡಿಲ್ಲ. ಕೆಲವು ಬ್ಯಾಂಕುಗಳು ಬ್ಯಾಂಕ್ ಲಾಕರ್ ಒಪ್ಪಂದ ರಿನಿವಲ್ ಮಾಡಿಕೊಳ್ಳಿ ಎಂದು ತಮ್ಮ ಗ್ರಾಹಕರಿಗೆ ಮಾಹಿತಿಯೇ ನೀಡಿಲ್ಲ. ಹಾಗೆಯೇ ಜನವರಿ 1, 2023ರ ಒಳಗೆ ಹೊಸ ಒಪ್ಪಂದವನ್ನು ಮಾಡಿಕೊಳ್ಳುವಂತೆಯೂ ತಿಳಿಸಿಲ್ಲ ಎಂಬುವುಉದ ಆರ್‌ಬಿಐನ ಗಮನಕ್ಕೆ ಬಂದಿದೆ.

ಅಪ್‌ಡೇಟ್ ಸೂಚನೆಯ ಪ್ರಕಾರ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ (ಐಬಿಎ) ಹೊಸ ಒಪ್ಪಂದಕ್ಕೆ ಸಹಿ ಮಾಡಬೇಕಾಗುತ್ತದೆ. ಇದಕ್ಕಾಗಿ ಒಪ್ಪಂದ ಗಡುವನ್ನು ಡಿಸೆಂಬರ್ 31, 2023ರವರೆಗೆ ವಿಸ್ತರಣೆ ಮಾಡಲಾಗಿದೆ. ಹಾಗೆಯೇ ಎಲ್ಲ ಬ್ಯಾಂಕ್‌ಗಳು ಏಪ್ರಿಲ್ 30, 2023ರ ಒಳಗೆ ಬ್ಯಾಂಕ್ ಲಾಕರ್ ಒಪ್ಪಂದದ ಗಡುವನ್ನು ವಿಸ್ತರಣೆ ಮಾಡಿಕೊಳ್ಳುವಂತೆ ತಮ್ಮ ಗ್ರಾಹಕರಿಗೆ ಮಾಹಿತಿ ನೀಡಬೇಕು ಎಂದು ಆರ್‌ಬಿಐ ಹೇಳಿದೆ.

ಬ್ಯಾಂಕ್ ಲಾಕರ್ ಒಪ್ಪಂದ ರಿನಿವಲ್ ಗಡುವು ವಿಸ್ತರಣೆ, ವಿವರ ಇಲ್ಲಿದೆ

ಹಾಗೆಯೇ ಜೂನ್ 30, 2023ರ ಒಳಗಾಗಿ ಶೇಕಡ 50ರಷ್ಟು ಗ್ರಾಹಕರುಗಳು ಪರಿಷ್ಕೃತ ಒಪ್ಪಂದಕ್ಕೆ ಸಹಿ ಮಾಡಿ ಆಗಿರಬೇಕು. ಹಾಗೆಯೇ ಸೆಪ್ಟೆಂಬರ್ 30, 2023ರ ಒಳಗೆ ಶೇಕಡ 75ರಷ್ಟು ಗ್ರಾಹಕರು ಒಪ್ಪಂದಕ್ಕೆ ಸಹಿ ಮಾಡಿ ಆಗಿರಬೇಕು ಎಂದು ಆರ್‌ಬಿಐ ಬ್ಯಾಂಕುಗಳಿಗೆ ಸೂಚನೆ ನೀಡಿದೆ.

ಒಪ್ಪಂದ ರಿನಿವಲ್ ಸುಲಭಗೊಳಿಸಲು ಆರ್‌ಬಿಐ ಸಲಹೆ

ಬ್ಯಾಂಕ್ ಲಾಕರ್‌ನ ಹೊಸ ಒಪ್ಪಂದವನ್ನು ಮಾಡಿಕೊಳ್ಳಲು ತಮ್ಮ ಗ್ರಾಹಕರಿಗೆ ಸುಲಭವಾಗುವಂತಹ ಕ್ರಮವನ್ನು ಕೈಗೊಳ್ಳಲು ಆರ್‌ಬಿಐ ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಸ್ಟಾಂಪ್ ಪೇಪರ್ ಒದಗಿಸುವುದು, ಫ್ರಾಂಕಿಂಗ್, ಎಲೆಕ್ಟ್ರಾನಿಕ್ ಒಪ್ಪಂದ, ಇ-ಸ್ಟಾಂಪಿಂಗ್, ಒಪ್ಪಂದದ ಪ್ರತಿಯನ್ನು ಜನರಿಗೆ ತಲುಪಿಸುವಂತಹ ಕಾರ್ಯವನ್ನು ಬ್ಯಾಂಕ್‌ಗಳು ಮಾಡಬೇಕು ಎಂದು ಆರ್‌ಬಿಐ ಹೇಳಿದೆ.

ಈ ಹಿಂದೆ ಬ್ಯಾಂಕ್ ಲಾಕರ್ ರಿನಿವಲ್ ಮಾಡುವ ಗಡುವ ಜನವರಿ 1, 2023 ಆಗಿತ್ತು. ಅದಾದ ಬಳಿಕ ಬ್ಯಾಕ್ ಲಾಕರ್ ಅನ್ನು ಫ್ರೀಜ್ ಮಾಡಲಾಗಿತ್ತು. ಆದರೆ ಈಗ ಗಡುವು ವಿಸ್ತರಣೆ ಮಾಡಿರುವ ಕಾರಣದಿಂದಾಗಿ ಫ್ರೀಜ್ ಮಾಡಿರುವ ಲಾಕರ್ ಅನ್ನು ಅನ್‌ಫ್ರೀಜ್ ಮಾಡಬೇಕು ಎಂದು ಆರ್‌ಬಿಐ ಹೇಳಿದೆ. ಈ ಹಿಂದೆ 2021ರ ಆಗಸ್ಟ್ 18ರಂದು ಸುತ್ತೋಲೆಯನ್ನು ಹೊರಡಿಸಿದ್ದು, ಬ್ಯಾಂಕ್ ಲಾಕರ್ ಒಪ್ಪಂದವನ್ನು ರಿನಿವಲ್ ಮಾಡಿಕೊಳ್ಳುವಂತೆ ತಿಳಿಸಿದೆ.

ಲಾಕರ್‌ನಲ್ಲಿ ಯಾವುದೇ ವಸ್ತು ಕಳೆದುಹೋದರೂ ಬ್ಯಾಂಕ್ ಜವಾಬ್ದಾರಿ

ಆರ್‌ಬಿಐ ಆಗಸ್ಟ್ 8, 2022ರಲ್ಲಿ ಬಿಡುಗಡೆ ಮಾಡಿದ ಒಪ್ಪಂದದ ಪ್ರಕಾರ ಬ್ಯಾಂಕ್ ಲಾಕರ್‌ನಲ್ಲಿರುವ ಯಾವುದೇ ವಸ್ತುಗಳು ಕಳೆದುಹೋದರೆ ಅದು ಬ್ಯಾಂಕ್‌ನ ಜವಾಬ್ದಾರಿಯಾಗಿದೆ. ಇನ್ನು ಹೊಸ ಒಪ್ಪಂದದ ಬಳಿಕ ಗ್ರಾಹಕರು ಲಾಕರ್‌ನ ನಿರ್ಬಂಧಗಳನ್ನು ಬದಲಾವಣೆ ಮಾಡಿಕೊಳ್ಳುವಂತೆಯೂ ಎಸ್‌ಎಂಎಸ್ ಹಾಗೂ ಬೇರೆ ಚಾನೆಲ್‌ಗಳ ಮೂಲಕ ತಿಳಿಸಲಾಗಿದೆ.

ಹೊಸ ನಿಯಮದ ಪ್ರಕಾರ ಲಾಕರ್‌ನಲ್ಲಿ ಯಾವುದೇ ವಸ್ತು ಕಾಣದಿದ್ದರೂ ಅದಕ್ಕೆ ಬ್ಯಾಂಕ್‌ ಜವಾಬ್ದಾರಿಯಾಗಿರುತ್ತದೆ. ಬ್ಯಾಂಕ್ ಸಿಬ್ಬಂದಿಗಳ ವಂಚನೆಯಿಂದಾಗಿ ಬ್ಯಾಂಕ್ ಲಾಕರ್‌ನಿಂದ ಯಾವುದೇ ವಸ್ತು ಕಳೆದುಹೋದರೂ ಬ್ಯಾಂಕ್ ಗ್ರಾಹಕರಿಗೆ ಕಳೆದುಹೋದ ವಸ್ತುವಿನ ಮೌಲ್ಯಕ್ಕಿಂತ 100 ಪಟ್ಟು ಅಧಿಕ ಗ್ರಾಹಕರಿಗೆ ಪಾವತಿ ನೀಡಬೇಕಾಗುತ್ತದೆ. ಆದರೆ ನೈಸರ್ಗಿಕ ವಿಕೋಪದಿಂದಾಗಿ ಯಾವುದೇ ನಷ್ಟ ಉಂಟಾದರೂ ಬ್ಯಾಂಕ್ ಪರಿಹಾರ ನೀಡಬೇಕಾಗಿಲ್ಲ. ಲಾಕರ್ ಮಾಡಿಸಿಕೊಂಡ ವ್ಯಕ್ತಿಯೂ ಸಾವನ್ನಪ್ಪಿದರೆ ನಾಮಿನಿಗೆ ಆ ಸೊತ್ತನ್ನು ನೀಡಲಾಗುತ್ತದೆ ಅಥವಾ ನಾಮಿನಿ ಆ ಸೊತ್ತಿನ ಜವಾಬ್ದಾರಿ ಹೊಂದಿರುತ್ತಾರೆ.

English summary

RBI extends deadline for bank locker agreement renewals till December 2023, details here

The Reserve Bank of India (RBI) has given a relief for customers who use bank lockers by extending the deadline for banks to renew the contract with their customers until December 31, 2023.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X