For Quick Alerts
ALLOW NOTIFICATIONS  
For Daily Alerts

ನವದೆಹಲಿ: ಕೋಟ್ಯಂತರ ರೂ. ಹಣ ವರ್ಗಾವಣೆ, ಬ್ಯಾಂಕ್ ಅಧಿಕಾರಿ ಬಂಧನ

|

ನವದೆಹಲಿ, ಜನವರಿ 15: ತಾವಿದ್ದ ಬ್ಯಾಂಕ್‌ನಲ್ಲಿಯೇ ಅಧಿಕಾರಿಯೊಬ್ಬರು ಇಬ್ಬರು ಗ್ರಾಹಕರ ಕೋಟ್ಯಂತರ ರೂಪಾಯಿಯನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ಪೊಲೀಸರ ಬಲೆಗೆ ಬಿದ್ದ ಘಟನೆ ನವದೆಹಲಿಯಲ್ಲಿ ನಡೆದಿದೆ.

 

ಗ್ರಾಹಕರ ಹಣ ಲಪಟಾಯಿಸಿದ್ದ ಆರ್‌ಬಿಎಲ್‌ ಬ್ಯಾಂಕ್‌ನ ಸಹಾಯಕ ಉಪಾಧ್ಯಕ್ಷ ನಾಗೇಂದ್ರ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸ್ಥಾನದಲ್ಲಿರುವ ಈ ಅಧಿಕಾರಿ ದೆಹಲಿಯ ವಸಂತಕುಂಜ ಪ್ರದೇಶಲ್ಲಿರುವ ಆರ್‌ಬಿಎಲ್ ಬ್ಯಾಂಕ್‌ ಉಪಾಧ್ಯಕ್ಷನಾಗಿದ್ದಾನೆ. ಬ್ಯಾಂಕ್‌ನ ಇಬ್ಬರು ಗ್ರಾಹಕರ ಖಾತೆಯಿಂದ ಸುಮಾರು 19.8ಕೋಟಿ ರೂ. ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ಸಿಕ್ಕಿಬಿದ್ದಿದ್ದಾನೆ.

 
ನವದೆಹಲಿ: ಕೋಟ್ಯಂತರ ರೂ. ಹಣ ವರ್ಗಾವಣೆ, ಬ್ಯಾಂಕ್ ಅಧಿಕಾರಿ ಬಂಧನ

Amazon Layoff: ಭಾರತ ಸೇರಿ ಜಾಗತಿಕ ಸಾವಿರಾರು ನೌಕರರ ವಜಾಗೆ ಕಂಪೆನಿ ನಿರ್ಧಾರ, ಕಾರಣ ತಿಳಿಯಿರಿAmazon Layoff: ಭಾರತ ಸೇರಿ ಜಾಗತಿಕ ಸಾವಿರಾರು ನೌಕರರ ವಜಾಗೆ ಕಂಪೆನಿ ನಿರ್ಧಾರ, ಕಾರಣ ತಿಳಿಯಿರಿ

ಆರೋಪಿ 2020 ರಲ್ಲಿ ಈ ಅಪರಾಧ ಕೃತ್ಯ ಎಸಗಿದ್ದ. ಈ ಬಗ್ಗೆ ಪೂರ್ಣ ಮಾಹಿತಿ ಕೆಲೆ ಹಾಕಿದ ಅಪರಾಧ ವಿಭಾಗದ ಅಧಿಕಾರಿಗಳು ಶುಕ್ರವಾರ (ಜ.13)ರಂದು ಬಂಧಿಸಿದ್ದಾರೆ.

ಮೆಸರ್ಸ್ ಜ್ಯುಬಿಲೆಂಟ್ ಲೈಫ್‌ ಸೈನ್ಸಸ್ ಲಿಮಿಟೆಡ್ ಮತ್ತು ಜುಬಿಲೆಂಟ್ ಅಗ್ರಿ ಆಂಡ್ ಕನ್ಸ್ಯೂಮರ್ ಪ್ರಾಡಕ್ಟ್ ಲಿಮಿಟೆಡ್ ಕಂಪನಿಗಳ ಖಾತೆಯಲ್ಲಿ ಭಾರಿ ಹಣದ ವ್ಯತ್ಯಾಸ ಕಂಡು ಬಂದಿತ್ತು. 2020 ಆಗಸ್ಟ್ ಮೊದಲ ವಾರ ಆರ್ಥಿಕ ಅಪರಾಧ ವಿಭಾಗಕ್ಕೆ ದೂರು ಸಲ್ಲಿಕೆಯಾಗಿತ್ತು.

ನವದೆಹಲಿ: ಕೋಟ್ಯಂತರ ರೂ. ಹಣ ವರ್ಗಾವಣೆ, ಬ್ಯಾಂಕ್ ಅಧಿಕಾರಿ ಬಂಧನ

ಸಂಬಂಧ ಸತತ ಸುಮಾರು ಎರಡೂವರೆ ವರ್ಷ ತನಿಖೆ ನಡೆಸಿದ ಅಪರಾಧ ವಿಭಾಗದ ಪೊಲೀಸರು ಆರೋಪಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ನಾಗೇಂದ್ರ ಕುಮಾರ್ ಈ ಕಂಪನಿಗಳ ಎರಡು ಖಾತೆಯಿಂದ ತಮ್ಮ ಖಾತೆ ಹಣ ವರ್ಗಾಯಿಸಿಕೊಂಡಿರುವುದು ಬೆಳೆಕಿಗೆ ಬಂದಿದೆ.

English summary

RBL bank officer Had Transferred 19.8 Cr From 2 Customer Bank Account To His Account Was Arrested

RBL bank officer Nagendra Kumar Had Transferred 19.8 Cr From 2 Customer Bank Account To His Account Was Arrested.
Story first published: Sunday, January 15, 2023, 20:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X