For Quick Alerts
ALLOW NOTIFICATIONS  
For Daily Alerts

ಸ್ಕೈಟ್ರಾನ್ ಇಂಕ್‌ನಲ್ಲಿ ಮತ್ತಷ್ಟು ಈಕ್ವಿಟಿ ಪಾಲುದಾರಿಕೆ ಖರೀದಿಸಿದ ರಿಲಯನ್ಸ್‌

|

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ರಿಲಯನ್ಸ್ ಸ್ಟ್ರಾಟೆಜಿಕ್ ಬಿಸಿನೆಸ್ ವೆಂಚರ್ಸ್ ಲಿಮಿಟೆಡ್ ("ಆರ್‌ಎಸ್‌ಬಿವಿಎಲ್") ತಾನು ಹೂಡಿಕೆ ಮಾಡಿರುವ ಸಂಸ್ಥೆಯಾದ ಸ್ಕೈಟ್ರಾನ್ ಇಂಕ್‌ನಲ್ಲಿ ("ಸ್ಕೈಟ್ರಾನ್") 26.76 ಮಿಲಿಯನ್ ಅಮೆರಿಕನ್ ಡಾಲರುಗಳ ಮೊತ್ತದ ಹೆಚ್ಚುವರಿ ಷೇರುಗಳನ್ನು ಖರೀದಿಸಿರುವುದಾಗಿ ಪ್ರಕಟಿಸಿದ್ದು, ಇದರಿಂದಾಗಿ ಸಂಸ್ಥೆಯು ಹೊಂದಿರುವ ಷೇರುಗಳ ಪ್ರಮಾಣ ಫುಲ್ಲಿ ಡೈಲ್ಯೂಟೆಡ್ ಆಧಾರದ ಮೇಲೆ ಶೇ.54.46ಕ್ಕೆ ಏರಿಕೆಯಾಗಿದೆ.

ಯುಎಸ್‌ಎ ಡೆಲಾವೇರ್‌ನ ಕಾನೂನುಗಳಡಿ 2011 ರಲ್ಲಿ ಸ್ಥಾಪಿತವಾದ ಸ್ಕೈಟ್ರಾನ್ ಒಂದು ತಂತ್ರಜ್ಞಾನ ಸಂಸ್ಥೆಯಾಗಿದೆ. ಜಾಗತಿಕವಾಗಿ ಸಂಚಾರ ದಟ್ಟಣೆಯ ಸಮಸ್ಯೆಯನ್ನು ಪರಿಹರಿಸುವ ಗುರಿಯೊಂದಿಗೆ ವೈಯಕ್ತಿಕ ಸಾರಿಗೆ ವ್ಯವಸ್ಥೆಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಆವಿಷ್ಕಾರಿಯಾದ ಪ್ಯಾಸಿವ್ ಮ್ಯಾಗ್ನೆಟಿಕ್ ಲೆವಿಟೇಶನ್ ಮತ್ತು ಪ್ರೊಪಲ್ಷನ್ ತಂತ್ರಜ್ಞಾನವನ್ನು ಸ್ಕೈಟ್ರಾನ್ ಅಭಿವೃದ್ಧಿಪಡಿಸಿದೆ.

ಸ್ಕೈಟ್ರಾನ್ ಇಂಕ್‌ನಲ್ಲಿ ಮತ್ತಷ್ಟು ಈಕ್ವಿಟಿ ಪಾಲುದಾರಿಕೆ ಖರೀದಿ

ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ಮುಖೇಶ್ ಅಂಬಾನಿ, "ಸ್ಕೈಟ್ರಾನ್‌ನಲ್ಲಿ ಅಧಿಕಾಂಶ ಈಕ್ವಿಟಿ ಪಾಲುದಾರಿಕೆ ಪಡೆದುಕೊಂಡಿರುವುದು, ಜಗತ್ತನ್ನು ಪರಿವರ್ತಿಸುವ ಭವಿಷ್ಯದ ತಂತ್ರಜ್ಞಾನಗಳನ್ನು ನಿರ್ಮಿಸುವುದಕ್ಕಾಗಿ ಹೂಡಿಕೆ ಮಾಡುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಅತಿವೇಗದ ಅಂತರ್ ಮತ್ತು ಅಂತರ-ನಗರ ಸಂಪರ್ಕದ ಮೇಲೆ ಹೆಚ್ಚಿನ ಪ್ರಭಾವ ಬೀರಬಲ್ಲ ಸ್ಕೈಟ್ರಾನ್ ಸಾಮರ್ಥ್ಯ ಹಾಗೂ ಭಾರತ ಮತ್ತು ಪ್ರಪಂಚದ ಉಳಿದ ಭಾಗಗಳಿಗೆ ಹೆಚ್ಚಿನ ವೇಗದ, ಹೆಚ್ಚು ಪರಿಣಾಮಕಾರಿಯಾದ ಮತ್ತು ಕಡಿಮೆ ವೆಚ್ಚದ 'ಟ್ರಾನ್ಸ್‌ಪೋರ್ಟೇಶನ್-ಆಸ್-ಎ-ಸರ್ವಿಸ್' ವೇದಿಕೆಯನ್ನು ಒದಗಿಸುವ ಅದರ ಕೌಶಲದಿಂದ ನಾವು ಉತ್ಸುಕರಾಗಿದ್ದೇವೆ. ಮಾಲಿನ್ಯರಹಿತ, ಹೆಚ್ಚಿನ ವೇಗದ ವೈಯಕ್ತಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯು ಪರ್ಯಾಯ ಶಕ್ತಿಯನ್ನು ಸಮರ್ಥವಾಗಿ ಬಳಸುವುದರ ಮೂಲಕ ಪರಿಸರ ಸುಸ್ಥಿರತೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ ಮತ್ತು ಗಾಳಿ ಮತ್ತು ಶಬ್ದ ಮಾಲಿನ್ಯವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ ಎಂದು ನಾವು ದೃಢವಾಗಿ ನಂಬುತ್ತೇವೆ." ಎಂದು ಹೇಳಿದ್ದಾರೆ.

ಸ್ಮಾರ್ಟ್ ಮೊಬಿಲಿಟಿ ಪರಿಹಾರಗಳನ್ನು ರೂಪಿಸಲು ಸ್ಕೈಟ್ರಾನ್ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಪ್ರಸ್ತಾವಿತ ಸ್ಕೈಟ್ರಾನ್ ಸಾರಿಗೆ ವ್ಯವಸ್ಥೆಗಳು ಅದರ ಅತ್ಯಾಧುನಿಕ, ಪೇಟೆಂಟ್ ಪಡೆದ ಪ್ಯಾಸಿವ್ ಮ್ಯಾಗ್ನೆಟಿಕ್ ಲೆವಿಟೇಶನ್ ತಂತ್ರಜ್ಞಾನ ಬಳಸುವ ಕಂಪ್ಯೂಟರ್-ನಿಯಂತ್ರಿತ ಪ್ರಯಾಣಿಕರ ಪಾಡ್‌ಗಳನ್ನು ಒಳಗೊಂಡಿರುತ್ತವೆ. ವೇಗವಾಗಿ, ಸುರಕ್ಷಿತವಾಗಿ, ಪರಿಸರ ಸ್ನೇಹಿಯಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಅತ್ಯಾಧುನಿಕ ಐಟಿ, ಟೆಲಿಕಾಂ, ಐಒಟಿ ಮತ್ತು ಸುಧಾರಿತ ಮೆಟೀರಿಯಲ್ಸ್ ತಂತ್ರಜ್ಞಾನಗಳನ್ನು ಬಳಸುತ್ತವೆ.

English summary

Reliance Acquires Majority Equity Stake In SKYTRAN INC

Reliance Strategic Business Ventures Limited, a wholly owned subsidiary of Reliance Industries Limited bought shares in SKYTRAN INC
Story first published: Monday, March 1, 2021, 16:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X