For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಜಿಯೋದಲ್ಲಿ ಹೂಡಿಕೆಗೆ ಮತ್ತೆ ಮೂರು ಕಂಪೆನಿ ಜತೆ ಮಾತುಕತೆ

|

ರಿಲಯನ್ಸ್ ಜಿಯೋ ಎಂಬ ಅಯಸ್ಕಾಂತ ಮತ್ತೆ ಆಕರ್ಷಣೆ ಆರಂಭಿಸಿದೆ. ಈ ಬಾರಿ ಮಧ್ಯ ಪ್ರಾಚ್ಯದ ಮೂರು ಅತಿ ದೊಡ್ಡ ಸವರನ್ ವೆಲ್ತ್ ಫಂಡ್ ಗಳು ರಿಲಯನ್ಸ್ ಇಂಡಸ್ಟ್ರೀಸ್ ನ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಹೂಡಿಕೆ ಮಾಡುವ ಮಾತುಕತೆ ನಡೆಸುತ್ತಿವೆ ಎಂದು ಈ ವ್ಯವಹಾರದ ಬಗ್ಗೆ ಮಾಹಿತಿ ಇರುವ ವ್ಯಕ್ತಿಗಳು ತಿಳಿಸಿದ್ದಾರೆ.

ಅಬುಧಾಬಿಯ ಮುಬದಾಲ ಕಂಪೆನಿಯು ಜಿಯೋ ಪ್ಲಾಟ್ ಫಾರ್ಮ್ ನಲ್ಲಿ 1 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಹೂಡಿಕೆ ಮಾಡಲು ಇನ್ನೇನು ವ್ಯವಹಾರ ಅಂತಿಮಗೊಳಿಸಲಿದೆ. ಈ ವಾರದಲ್ಲಿ ಹೂಡಿಕೆ ಬಗ್ಗೆ ಅಂತಿಮ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಜಿಯೋ ಪ್ಲಾಟ್ ಫಾರ್ಮ್ ಗೆ 10 ಬಿಲಿಯನ್ ಹೂಡಿಕೆ

ಜಿಯೋ ಪ್ಲಾಟ್ ಫಾರ್ಮ್ ಗೆ 10 ಬಿಲಿಯನ್ ಹೂಡಿಕೆ

ಇನ್ನು ಅಬುಧಾಬಿ ಇನ್ವೆಸ್ಟ್ ಮೆಂಟ್ ಅಥಾರಿಟಿ ಮತ್ತು ಸೌದಿ ಅರೇಬಿಯಾದ ಪಬ್ಲಿಕ್ ಇನ್ವೆಸ್ಟ್ ಮೆಂಟ್ ಫಂಡ್ ಜತೆಗೆ ಕೂಡ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಹೂಡಿಕೆ ಬಗ್ಗೆ ಚರ್ಚೆ ನಡೆಸುತ್ತಿದೆ. ಅಂದ ಹಾಗೆ ಈಚೆಗೆ ಜಿಯೋ ಪ್ಲಾಟ್ ಫಾರ್ಮ್ ಗೆ $ 10 ಬಿಲಿಯನ್ ಹೂಡಿಕೆ ಬಂದಿದೆ. ಇನ್ನು ಮುಂದಿನ ಯಾವುದೇ ಹೂಡಿಕೆ ಬಂದರೂ ಅದು ಈಗಾಗಲೇ ಬಂದಿರುವ ಮೊತ್ತಕ್ಕೆ ಸೇರಿಕೊಳ್ಳುತ್ತದೆ.

ವಿದೇಶದಲ್ಲಿ ಲಿಸ್ಟಿಂಗ್ ಗೆ ಸಿದ್ಧತೆ

ವಿದೇಶದಲ್ಲಿ ಲಿಸ್ಟಿಂಗ್ ಗೆ ಸಿದ್ಧತೆ

ಈಗಾಗಲೇ ವಿದೇಶದಲ್ಲಿ ಜಿಯೋ ಪ್ಲಾಟ್ ಫಾರ್ಮ್ ವಿದೇಶದಲ್ಲಿ ಲಿಸ್ಟಿಂಗ್ ಗೆ ಸಿದ್ಧತೆ ನಡೆಸಿದೆ. ಫೇಸ್ ಬುಕ್ ನಿಂದ ಕೆಕೆಆರ್ ತನಕ ವಿದೇಶಿ ಕಂಪೆನಿಗಳು ಜಿಯೋದ ಮೂಲಕ ಭಾರತದ ಗ್ರಾಹಕ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿವೆ. ಆ ಮೂಲಕ ಭಾರತದ ಸಾಂಪ್ರದಾಯಿಕ ಉದ್ಯಮಗಳು ತಲ್ಲಣಿಸುವಂತೆ ಮಾಡಿವೆ. ಇದು ದೇಶದ ರೀಟೇಲ್ ನಿಂದ ಶಿಕ್ಷಣ ಮತ್ತು ಹಣ ಪಾವತಿ ತನಕ ತಂತ್ರಜ್ಞಾನದ ಮೂಲಕ ಬದಲಾವಣೆ ತರುವ ಸಾಮರ್ಥ್ಯ ಹೊಂದಿವೆ.

ಶೂನ್ಯ ಸಾಲದ ಕಂಪೆನಿ ಮಾಡುವ ಗುರಿ

ಶೂನ್ಯ ಸಾಲದ ಕಂಪೆನಿ ಮಾಡುವ ಗುರಿ

ಈ ರೀತಿಯ ಬಂಡವಾಳ ಹೂಡಿಕೆ ಮೂಲಕ ರಿಲಯನ್ಸ್ ಇಂಡಸ್ಟ್ರಿಯನ್ನು ಶೂನ್ಯ ಸಾಲದ ಕಂಪೆನಿ ಮಾಡಬೇಕು ಎಂದು ಮುಕೇಶ್ ಅಂಬಾನಿ ಇರಿಸಿಕೊಂಡಿರುವ ಮಹತ್ವಾಕಾಂಕ್ಷೆ ಈಡೇರಿಸಲು ನೆರವಾಗಿತ್ತದೆ. ಇನ್ನು ಹೊರಗಿನ ಹಣ ಕೂಡ ಜಿಯೋ ಮೌಲ್ಯ ನಿಗದಿಗೆ ನೆರವಾಗುತ್ತದೆ. ಇತ್ತೀಚಿನ ತನಕ ಜಿಯೋ ಪ್ಲಾಟ್ ಫಾರ್ಮ್ ಷೇರುಗಳು ಅಂಬಾನಿಗೆ ಸೇರಿದ ಕಂಪೆನಿ ಸಮೂಹದಲ್ಲೇ ಇತ್ತು. ಈಚೆಗೆ ಬೇರೆ ಕಂಪೆನಿಗಳು ಹೂಡಿಕೆ ಮಾಡಿದ್ದು, ಲಿಸ್ಟಿಂಗ್ ಗೆ ಸಿದ್ಧತೆ ನಡೆದಿದೆ.

English summary

Reliance Industries Discuss With 3 Companies To Invest In Jio Platform

Mukesh Ambani led Reliance Industries discuss with Middle East 3 companies to invest in Jio platform.
Story first published: Wednesday, June 3, 2020, 13:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X