ಕ್ರಿಕೆಟ್ ಜಗತ್ತಿನ ಸಚಿನ್ ತೆಂಡೂಲ್ಕರ್ ನಂತೆ ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿ ಹೊಸ ಹೊಸ ದಾಖಲೆಗಳನ್ನು ಕಾರ್ಪೊರೇಟ್ ವಲಯದಲ್ಲಿ ಬರೆಯುತ್ತಿದೆ. ಮಾರ್ಚ್ ನಿಂದ ಈಚೆಗೆ ಷೇರು ಮೌಲ್ಯದಲ್ಲಿ ಡಬಲ್ ಆಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಶುಕ್ರವಾರಂದು ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ 11 ಲಕ್ಷ ಕೋಟಿ ರುಪಾಯಿ ಮುಟ್ಟಿದ ಭಾರತದ ಮೊದಲ ಕಂಪೆನಿ ಎಂಬ ದಾಖಲೆ ಬರೆದಿದೆ.
ಗುರುವಾರದ ದಿನಾಂತ್ಯಕ್ಕೆ ಇದ್ದ ದರಕ್ಕಿಂತ 5% ಏರಿಕೆ ದಾಖಲಿಸಿದೆ ರಿಲಯನ್ಸ್ ಇಂಡಸ್ಟ್ರೀಸ್, ನಿಫ್ಟಿಯಲ್ಲಿ ದಿನಾಂತ್ಯಕ್ಕೆ 1759.40 ರುಪಾಯಿಗೆ ವಹಿವಾಟು ಮುಗಿಸಿದೆ. ಜಿಯೋ ಪ್ಲಾಟ್ ಫಾರ್ಮ್ ನ 24.71 ಪರ್ಸೆಂಟ್ ಷೇರನ್ನು ಮಾರಿ, 1.15 ಲಕ್ಷ ಕೋಟಿ ಸಂಗ್ರಹಿಸಲಾಗಿದೆ. ಆ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಸಾಲದಿಂದ ಮುಕ್ತವಾಗಿದೆ ಎಂದು ಮುಕೇಶ್ ಅಂಬಾನಿ ಈ ದಿನ (ಶುಕ್ರವಾರ, ಜೂನ್ 19) ಘೋಷಣೆ ಮಾಡಿದ್ದರು.

ಮಾರ್ಚ್ 31, 2020ಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಸಾಲ 1.61 ಲಕ್ಷ ಕೋಟಿ ಇತ್ತು. ಅಂದ ಹಾಗೆ ಕಂಪೆನಿಯು ರೈಟ್ಸ್ ಇಶ್ಯೂ ಮೂಲಕ 53,124 ಕೋಟಿ ರುಪಾಯಿ ಕೂಡ ಸಂಗ್ರಹಿಸಿದೆ. ಜಿಯೋ ಪ್ಲಾಟ್ ಫಾರ್ಮ್ ನಿಂದ ಇನ್ನೆಷ್ಟು ಹೂಡಿಕೆಯನ್ನು ವಾಪಸ್ ಪಡೆಯುತ್ತದೆ ಎಂಬ ಬಗ್ಗೆ ರಿಲಯನ್ಸ್ ತಿಳಿಸಿಲ್ಲ. ಆದರೆ ತಜ್ಞರ ವರದಿಗಳ ಪ್ರಕಾರ, ಇನ್ನು ಷೇರಿನ ಪಾಲು ಮಾರುವುದಿಲ್ಲ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಚಿನ್ನದ ಬೆಲೆ ಇಳಿಕೆ: ಖರೀದಿಗೆ ಇದೇ ಸುವರ್ಣಾವಕಾಶವೇ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?



Click it and Unblock the Notifications