For Quick Alerts
ALLOW NOTIFICATIONS  
For Daily Alerts

ರಿಲಯನ್ಸ್‌ನ ತ್ರೈಮಾಸಿಕ ಲಾಭದಲ್ಲಿ ಭರ್ಜರಿ ಏರಿಕೆ

|

ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ರಿಲಯನ್ಸ್ ಇಂಡಸ್ಟ್ರೀಸ್‌ಗೆ 13,806 ರೂ. ನಿವ್ವಳ ಲಾಭವಾಗಿದ್ದು (ಎಕ್ಸೆಪ್ಷನಲ್ ಐಟಮ್‌ಗೆ ಮೊದಲು), ಕಳೆದ ವರ್ಷ ಇದೇ ತ್ರೈಮಾಸಿಕದ ಹೋಲಿಕೆಯಲ್ಲಿ ಇದು ಶೇ. 66.7ರಷ್ಟು ಏರಿಕೆ ಕಂಡಿದೆ. ಈ ಅವಧಿಯಲ್ಲಿ ಮಾರಾಟ ಮತ್ತು ಸೇವೆಗಳ ಒಟ್ಟು ಮೌಲ್ಯ 158,862 ಕೋಟಿ ರೂ.ಗಳಾಗಿದೆ. ಬಡ್ಡಿ, ತೆರಿಗೆ, ಡಿಪ್ರಿಸಿಯೇಶನ್ ಹಾಗೂ ಅಮಾರ್ಟೈಸೇಶನ್‌ಗಳ ಮೊದಲಿನ ಆದಾಯವು (EBITDA) ಈ ತ್ರೈಮಾಸಿಕದಲ್ಲಿ 27,550 ಕೋಟಿ ರೂ.ಗಳಷ್ಟಿದೆ.

 

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಬುಧಾಬಿಯ ರುವಾಯಸ್‌ನಲ್ಲಿ ಜಾಗತಿಕ ಪ್ರಮಾಣದ ಹೊಸ ರಾಸಾಯನಿಕ ತಯಾರಿಕಾ ಘಟಕವನ್ನು ಸ್ಥಾಪಿಸಲು ಅಬುಧಾಬಿ ನ್ಯಾಶನಲ್ ಆಯಿಲ್ ಕಂಪನಿ 'ಆಡ್‌ನಾಕ್'ನೊಂದಿಗೆ ಈ ತ್ರೈಮಾಸಿಕದಲ್ಲಿ ಒಪ್ಪಂದ ಮಾಡಿಕೊಂಡಿದೆ. ಇದೇ ಅವಧಿಯಲ್ಲಿ ರಿಲಯನ್ಸ್ ಹಾಗೂ ಬಿಪಿ ಸಂಸ್ಥೆಗಳು ಭಾರತದ ಪೂರ್ವದಲ್ಲಿರುವ KGD6 ಬ್ಲಾಕ್‌ನಲ್ಲಿನ ಸೆಟಲೈಟ್ ಕ್ಲಸ್ಟರ್ ಗ್ಯಾಸ್ ಫೀಲ್ಡ್‌ನಿಂದ ಉತ್ಪಾದನೆಯ ಪ್ರಾರಂಭವನ್ನು ಘೋಷಿಸಿವೆ.

 

ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್‌ಫೋಕಾಮ್ ಲಿಮಿಟೆಡ್, ಅಂಧ್ರಪ್ರದೇಶ, ದೆಹಲಿ ಹಾಗೂ ಮುಂಬಯಿ ವೃತ್ತಗಳಲ್ಲಿ 800 ಮೆಗಾಹರ್ಟ್ಸ್ ಬ್ಯಾಂಡ್‌ನ ಸ್ಪೆಕ್ಟ್ರಮ್ ಬಳಸುವ ಹಕ್ಕನ್ನು ಪಡೆದುಕೊಳ್ಳಲು ಭಾರ್ತಿ ಏರ್‌ಟೆಲ್ ಲಿಮಿಟೆಡ್‌ನೊಂದಿಗೆ ಒಪ್ಪಂದಕ್ಕೆ ಸಹಿಹಾಕಿದ್ದು, ಈ ಮೂಲಕ ತನ್ನ ನೆಟ್‌ವರ್ಕ್ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಇದೇ ಅವಧಿಯಲ್ಲಿ ರಿಲಯನ್ಸ್ ಜಿಯೋ ಇನ್‌ಫೋಕಾಮ್ ಲಿಮಿಟೆಡ್ ಸಂಸ್ಥೆಯು ಗೂಗಲ್‌ನೊಂದಿಗೆ ರೂಪಿಸಿದ 'ಜಿಯೋಫೋನ್ ನೆಕ್ಸ್ಟ್' ಸ್ಮಾರ್ಟ್‌ಫೋನ್ ಅನ್ನೂ ಮೊದಲ ಬಾರಿಗೆ ಪರಿಚಯಿಸಲಾಯಿತು.

ರಿಲಯನ್ಸ್‌ನ ತ್ರೈಮಾಸಿಕ ಲಾಭದಲ್ಲಿ ಭರ್ಜರಿ ಏರಿಕೆ

ರಿಲಯನ್ಸ್ ಇಂಡಸ್ಟ್ರೀಸ್‌ನ ಇನ್ನೊಂದು ಅಂಗಸಂಸ್ಥೆ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಇದೇ ಅವಧಿಯಲ್ಲಿ ಜಸ್ಟ್ ಡಯಲ್ ಲಿಮಿಟೆಡ್‌‌ನಲ್ಲಿ ಪ್ರಮುಖ ಪಾಲಿನ ಖರೀದಿಯನ್ನು ಘೋಷಿಸಿದೆ. ಸಂಸ್ಥೆಯು ಜಸ್ಟ್‌ಡಯಲ್‌ನಲ್ಲಿನ ಶೇ. 40.95 ಪಾಲನ್ನು 3,497 ಕೋಟಿ ರೂ.ಗಳಿಗೆ ಖರೀದಿಸಲಿದ್ದು ಶೇ. 26.0ವರೆಗಿನ ಹೆಚ್ಚುವರಿ ಪಾಲಿಗಾಗಿ ನಿಯಮಾನುಸಾರ ಓಪನ್ ಆಫರ್ ಪ್ರಕಟಿಸಲಿದೆ.

ಮಿಶನ್ ವ್ಯಾಕ್ಸಿನ್ ಸುರಕ್ಷಾ ಕಾರ್ಯಕ್ರಮದಡಿಯಲ್ಲಿ ರಿಲಯನ್ಸ್ ಸಮೂಹವು ತನ್ನ ಉದ್ಯೋಗಿಗಳು ಮತ್ತವರ ಕುಟುಂಬ ಸದಸ್ಯರಿಗೆ 10 ಲಕ್ಷಕ್ಕೂ ಹೆಚ್ಚು ಡೋಸ್‌ಗಳಷ್ಟು ಲಸಿಕೆಯನ್ನು ಉಚಿತವಾಗಿ ನೀಡಿದೆ. ಅರ್ಹ ಉದ್ಯೋಗಿಗಳ ಪೈಕಿ ಶೇ. 98ಕ್ಕಿಂತ ಹೆಚ್ಚಿನವರು ಈಗಾಗಲೇ ಕನಿಷ್ಠ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಈ ಕಾರ್ಯಕ್ರಮದಡಿ ತೆರೆಯಲಾದ ಕೆಲ ವ್ಯಾಕ್ಸಿನ್ ಕೇಂದ್ರಗಳಲ್ಲಿ ಸಮಾಜದ ಕಡಿಮೆ-ಸವಲತ್ತು ಹೊಂದಿರುವ ವರ್ಗಗಳಿಗೂ ಲಸಿಕೆಗಳನ್ನು ನೀಡಲಾಗುತ್ತಿದೆ.

ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್: ರಿಲಯನ್ಸ್ ಸಮೂಹದ ಅಂಗಸಂಸ್ಥೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಆರ್ಥಿಕ ವರ್ಷ 2021-22ರ ಮೊದಲ ತ್ರೈಮಾಸಿಕದಲ್ಲಿ 3,651 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕದೊಡನೆ ಹೋಲಿಕೆಯಲ್ಲಿ ಇದು ಶೇ. 44.9ರಷ್ಟು ಹೆಚ್ಚಾಗಿದೆ.

ಜೂನ್ ಅಂತ್ಯದ ವೇಳೆಗೆ ಜಿಯೋ ಚಂದಾದಾರರ ಸಂಖ್ಯೆ 440.6 ದಶಲಕ್ಷಕ್ಕೆ ತಲುಪಿದ್ದು, ಈ ಸಂಖ್ಯೆಯಲ್ಲಿ ಕಳೆದ ವರ್ಷದ ಹೋಲಿಕೆಯಲ್ಲಿ 42.3 ದಶಲಕ್ಷದಷ್ಟು ನಿವ್ವಳ ಹೆಚ್ಚಳ ಕಂಡುಬಂದಿದೆ. ಈ ತ್ರೈಮಾಸಿಕದಲ್ಲಿ ಪ್ರತಿ ಗ್ರಾಹಕರಿಂದ ದೊರಕಿದ ಸರಾಸರಿ ಆದಾಯ (ARPU) ರೂ. 138.4ರಷ್ಟಿತ್ತು. ಈ ತ್ರೈಮಾಸಿಕದಲ್ಲಿ ಒಟ್ಟಾರೆ ಡೇಟಾ ಟ್ರಾಫಿಕ್ ವಾರ್ಷಿಕ ಶೇ. 38.5ರಷ್ಟು ಹೆಚ್ಚಳ ಕಂಡು 20.3 ಶತಕೋಟಿ ಜಿಬಿ ತಲುಪಿದೆ. ಈ ಅವಧಿಯ ಒಟ್ಟಾರೆ ವಾಯ್ಸ್ ಟ್ರಾಫಿಕ್ 1.06 ಲಕ್ಷ ಕೋಟಿ ನಿಮಿಷಗಳಷ್ಟಿತ್ತು.

English summary

Reliance Industries Q1 Results: Profit After Tax Jumps 67% YoY To Rs 13,806 Crore

India's largest company by market capitalisation, Reliance Industries (RIL) on July 23 reported June quarter profit at Rs 13,806 crore, up 66.7 percent year-on-year (YoY), with normalised tax provision.
Story first published: Saturday, July 24, 2021, 12:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X