For Quick Alerts
ALLOW NOTIFICATIONS  
For Daily Alerts

2019ರಲ್ಲಿ ಮುಕೇಶ್ ಅಂಬಾನಿ ಆಸ್ತಿ 1.19 ಲಕ್ಷ ಕೋಟಿ ರುಪಾಯಿ ಹೆಚ್ಚಳ

|

ಆರ್ಥಿಕತೆಗೆ ಹೊಡೆತ ಬಿದ್ದಿದೆ. ಆ ದೇಶಕ್ಕೆ ಕಷ್ಟವಾಗಿದೆ. ಭಾರತೀಯರಿಗೆ ಕೆಲಸ ಇಲ್ಲವಾಗಿದೆ. ಹೀಗೆ ಏನೇನೋ ಸಮಸ್ಯೆಗಳು ಹೇಳಿಕೊಳ್ಳುತ್ತಿದ್ದರೂ ಏಷ್ಯಾದ ಅತ್ಯಂತ ಶ್ರೀಮಂತ ಮುಕೇಶ್ ಅಂಬಾನಿ ಮಾತ್ರ ತಮ್ಮ ಸಂಪತ್ತಿಗೆ ಇನ್ನಷ್ಟು ಸಂಪತ್ತು ಸೇರಿಸಿಕೊಂಡು, ಖುಷಿಯಾಗಿದ್ದಾರೆ. ನಿಮಗೆ ಗೊತ್ತಾ? ಈ ವರ್ಷ ಮುಕೇಶ್ ಅಂಬಾನಿ ಆಸ್ತಿಗೆ ಎಷ್ಟು ಸಂಪತ್ತು ಸೇರ್ಪಡೆಯಾಗಿದೆ.

 

ಅವರ ಸಂಪತ್ತು ಸುಮಾರು $17 ಬಿಲಿಯನ್‌ ನಷ್ಟು ಹೆಚ್ಚಳವಾಗಿದೆ. ಅದನ್ನು ಭಾರತೀಯ ರುಪಾಯಿಗಳಲ್ಲಿ ಹೇಳುವುದಾದರೆ, 1,19,000,000,000. ಲೆಕ್ಕ ಗೊತ್ತಾಯಿತಾ? ಈ ವರ್ಷದಲ್ಲೇ 1.19 ಲಕ್ಷ ಕೋಟಿ ರುಪಾಯಿ ಸಂಪತ್ತು ಹೆಚ್ಚಳವಾಗುವ ಮೂಲಕ ಅವರ ಒಟ್ಟಾರೆ ಸಂಪತ್ತು ಸುಮಾರು $61 ಬಿಲಿಯನ್ (ಭಾರತದ ರುಪಾಯಿ ಲೆಕ್ಕದಲ್ಲಿ 427,000,000,000) ಆಗಿದೆ. ಅಂದರೆ 4.27 ಲಕ್ಷ ಕೋಟಿ ರುಪಾಯಿ ತಲುಪಿದೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ ಸೂಚ್ಯಂಕ ತಿಳಿಸಿದೆ.

 

ರಿಲಯನ್ಸ್ ಜಿಯೋದಿಂದ 'ಹ್ಯಾಪಿ ನ್ಯೂ ಇಯರ್' ಪ್ಲಾನ್ರಿಲಯನ್ಸ್ ಜಿಯೋದಿಂದ 'ಹ್ಯಾಪಿ ನ್ಯೂ ಇಯರ್' ಪ್ಲಾನ್

ಮುಕೇಶ್ ಅಂಬಾನಿಗೆ ಪೈಪೋಟಿ ನೀಡುತ್ತಿದ್ದ ಅಲಿಬಾಬಾ ಸಮೂಹದ ಸಂಸ್ಥಾಪಕ ಜಾಕ್ ಮಾ ಸಂಪತ್ತು $11.3 ಬಿಲಿಯನ್ ಏರಿಕೆಯಾಗಿದ್ದರೆ, ಜೆಫ್ ಬೆಜೋಸ್ ರ $ 13.3 ಬಿಲಿಯನ್ ನಷ್ಟು ಸಂಪತ್ತು ಕರಗಿದೆ.

2019ರಲ್ಲಿ ಮುಕೇಶ್ ಅಂಬಾನಿ ಆಸ್ತಿ 1,19,000,000,000 ಹೆಚ್ಚಳ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಷೇರುಗಳು ಈ ವರ್ಷ ಶೇ 40ರಷ್ಟು ಏರಿಕೆಯಾಗಿದ್ದು, ಅಂಬಾನಿ ಸಂಪತ್ತಿನ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಹೂಡಿಕೆದಾರರು ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ರಿಲಯನ್ಸ್ ನಲ್ಲಿ ಹೂಡಿಕೆ ಮಾಡಿದ್ದಾರೆ. ಜತೆಗೆ ಅವರ ದೂರಸಂಪರ್ಕ ಸಂಹವನ ಮತ್ತು ರೀಟೇಲ್ ಉದ್ಯಮವೂ ಲಾಭದಾಯಕವಾಗಿದೆ.

ಇ-ಕಾಮರ್ಸ್ ಉದ್ಯಮ ಅಮೆಜಾನ್ ಗೆ ಸವಾಲೊಡ್ಡುವ ಸಲುವಾಗಿ ಭಾರತದ್ದೇ ಇ-ಕಾಮರ್ಸ್ ಆರಂಭಿಸಲು ಮುಕೇಶ್ ಅಂಬಾನಿ ಸಿದ್ಧತೆ ನಡೆಸಿದ್ದಾರೆ. ಅದರ ನಡುವೆಯೇ ಜಿಯೋ ಮೇಲೆ ಸುಮಾರು $50 ಬಿಲಿಯನ್ ಹೂಡಿಕೆ ಮಾಡುವ ಮೂಲಕ ಮೂರು ವರ್ಷಗಳಲ್ಲಿಯೇ ದೇಶದ ನಂ.1 ಮೊಬೈಲ್ ಸೇವೆಯನ್ನಾಗಿ ಮಾಡಿದ್ದಾರೆ.

2016ರ ಅಂತ್ಯದ ಬಳಿಕ ರಿಲಯನ್ಸ್ ಷೇರು ಮೌಲ್ಯ ಮೂರು ಪಟ್ಟು ಹೆಚ್ಚಳವಾಗಿದೆ. ಇದಕ್ಕೆ ಕಾರಣ ಜಿಯೋ ನೆಟ್‌ವರ್ಕ್. 35 ಕೋಟಿ ಗ್ರಾಹಕರನ್ನು ಹೊಂದಿರುವ ಜಿಯೋ, ಸೆಪ್ಟೆಂಬರ್ ತ್ರೈಮಾಸಿಕದ ವೇಳೆಗೆ 996 ಕೋಟಿ ರುಪಾಯಿ ಒಟ್ಟಾರೆ ಆದಾಯವನ್ನು ಘೋಷಿಸಿಕೊಂಡಿದೆ.

English summary

Reliance Mukesh Ambani Wealth Increased By 1.19 Lakh Crore In 2019

Asia's richest man Mukesh Ambani's wealth increased by 1.19 lakh in 2019 according to Bloomberg. Here is the complete details of the story.
Story first published: Tuesday, December 24, 2019, 19:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X