For Quick Alerts
ALLOW NOTIFICATIONS  
For Daily Alerts

ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇಕಡಾ 4.29ಕ್ಕೆ ಇಳಿಕೆ

|

ಚಿಲ್ಲರೆ ಹಣದುಬ್ಬರವು 2021 ರ ಏಪ್ರಿಲ್‌ನಲ್ಲಿ ನಲ್ಲಿ 4.29 ಕ್ಕೆ ಇಳಿದಿದ್ದು, ತರಕಾರಿ ಬೆಲೆಗಳು ತೀವ್ರವಾಗಿ ಕುಸಿದಿವೆ ಎಂದು ಸರ್ಕಾರಿ ಅಂಕಿ ಅಂಶಗಳು ತಿಳಿಸಿವೆ.

 

ಚಿನ್ನದ ಬೆಲೆ ಇಳಿಕೆ: ಮೇ 12ರ ಬೆಲೆ ಹೀಗಿದೆಚಿನ್ನದ ಬೆಲೆ ಇಳಿಕೆ: ಮೇ 12ರ ಬೆಲೆ ಹೀಗಿದೆ

ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ಏಪ್ರಿಲ್ ತಿಂಗಳಲ್ಲಿ ಶೇ 4.29 ಕ್ಕೆ ಇಳಿದಿದೆ. ಇದು ಮಾರ್ಚ್‌ನಲ್ಲಿ ಶೇ 5.52 ರಷ್ಟಿತ್ತು.

 
ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇಕಡಾ 4.29ಕ್ಕೆ ಇಳಿಕೆ

ಚಿಲ್ಲರೆ ಹಣದುಬ್ಬರವು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮೇಲಿನ ಅಂಚಿನಲ್ಲಿ ಸತತ ಐದನೇ ತಿಂಗಳು ಶೇಕಡಾ 6ರಷ್ಟಿದೆ. ಮಾರ್ಚ್ 2026 ಕ್ಕೆ ಕೊನೆಗೊಳ್ಳುವ ಐದು ವರ್ಷಗಳ ಅವಧಿಗೆ ಶೇಕಡಾ 2ರ ಅಂತರದೊಂದಿಗೆ ಚಿಲ್ಲರೆ ಹಣದುಬ್ಬರವನ್ನು 4 ಪ್ರತಿಶತದಷ್ಟು ಕಾಯ್ದುಕೊಳ್ಳಲು ಸರ್ಕಾರ ಕೇಂದ್ರ ಬ್ಯಾಂಕನ್ನು ಕೇಳಿದೆ. ಅಂದರೆ ಗರಿಷ್ಠ ಶೇಕಡಾ 6 ರಷ್ಟು ಮತ್ತು ಕನಿಷ್ಠ 2 ರಷ್ಟಾಗಿದೆ.

ಕಳೆದ ತಿಂಗಳು ಚಿಲ್ಲರೆ ಹಣದುಬ್ಬರ ಕಡಿಮೆಯಾಗಲು ಆಹಾರ ಬೆಲೆಗಳ ಇಳಿಕೆ ಪ್ರಮುಖ ಕಾರಣವಾಗಿದೆ. ಗ್ರಾಹಕ ಆಹಾರ ಬೆಲೆ ಸೂಚ್ಯಂಕ (ಸಿಎಫ್‌ಪಿಐ) ಅಥವಾ ಆಹಾರ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ 2.02 ಕ್ಕೆ ಇಳಿದಿದೆ, ಇದು ಮಾರ್ಚ್‌ನಲ್ಲಿ ಶೇ 4.87 ರಷ್ಟಿತ್ತು. ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಆರ್‌ಬಿಐ ಹಣದುಬ್ಬರವನ್ನು ಶೇ 5.2 ರಷ್ಟು ನಿರೀಕ್ಷಿಸಿದೆ.

ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಯಿಂದ ಅಳೆಯಲ್ಪಟ್ಟ ಭಾರತೀಯ ಕೈಗಾರಿಕಾ ಉತ್ಪಾದನೆಯು ಕಳೆದ ವರ್ಷದ ಮಾರ್ಚ್‌ಗೆ ಹೋಲಿಸಿದರೆ ಈ ವರ್ಷದ ಮಾರ್ಚ್‌ನಲ್ಲಿ ಶೇ 22.4 ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಪರಿಣಾಮ ವ್ಯಾಪಾರ ಚಟುವಟಿಕೆಗಳು ಸೀಮಿತವಾಗಿತ್ತು. ಗಣಿಗಾರಿಕೆ ಉತ್ಪಾದನೆಯು ಮಾರ್ಚ್‌ನಲ್ಲಿ ಶೇ 6.1 ರಷ್ಟು ಏರಿಕೆಯಾಗಿದೆ. ಉತ್ಪಾದನೆಯು ಶೇಕಡಾ 25.8 ರಷ್ಟು ಹೆಚ್ಚಾಗಿದೆ. ಇದಲ್ಲದೆ ವಿದ್ಯುತ್ ಉತ್ಪಾದನೆಯೂ ಶೇಕಡಾ 22.5 ರಷ್ಟು ಹೆಚ್ಚಾಗಿದೆ.

English summary

Retail Inflation Eases To 4.29 Percent In April

Retail inflation eased to 4.29 per cent in April 2021, owing to a drop in food prices, government data showed on Friday
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X