For Quick Alerts
ALLOW NOTIFICATIONS  
For Daily Alerts

ಸೋಲಾರ್ ಪ್ಯಾನೆಲ್ ತಯಾರಕ REC ಖರೀದಿಗೆ ಮುಂದಾದ ರಿಲಯನ್ಸ್‌ ಇಂಡಸ್ಟ್ರೀಸ್

|

ಭಾರತದ ಅತಿ ದೊಡ್ಡ ಶ್ರೀಮಂತ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್‌) ನಾರ್ವೇಜಿಯನ್ ಸೋಲಾರ್ ಮಾಡ್ಯೂಲ್ ತಯಾರಕ ಆರ್ಇಸಿ ಗ್ರೂಪ್ ಬರೋಬ್ಬರಿ 1 ರಿಂದ 1.12 ಬಿಲಿಯನ್ ಡಾಲರ್‌ಗೆ ಖರೀದಿಸಲು ಮಾತುಕತೆ ನಡೆಸಿದ್ದಾರೆ.

ಚೀನಾ ನ್ಯಾಷನಲ್ ಕೆಮಿಕಲ್ ಕಾರ್ಪ್ (ಕೆಮ್ಚಿನಾ) ನಿಂದ ರಿಲಯನ್ಸ್ ಇಂಡಸ್ಟ್ರೀಸ್ 75,000 ಕೋಟಿ ರೂಪಾಯಿಗೆ ಸೌರಶಕ್ತಿಯ ಬಲ ಹೆಚ್ಚಿಸಲು ಖರೀದಿಗೆ ಮುಂದಾಗಿದೆ. ಈ ಡೀಲ್ ಕುರಿತಾಗಿ ಸುಮಾರು 500-600 ಮಿಲಿಯನ್ ಡಾಲರ್‌ಗಳನ್ನು ಸಂಗ್ರಹಿಸಲು ಜಾಗತಿಕ ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಉಳಿದ ಹಣವನ್ನು ಈಕ್ವಿಟಿ ಮೂಲಕ ನೀಡಲಾಗುತ್ತದೆ.

ರಿಲಯನ್ಸ್ ಜಿಯೋ ಅಗ್ಗದ ಫೋನ್, ಶೀಘ್ರದಲ್ಲೇ ಬುಕ್ಕಿಂಗ್ ಆರಂಭ: ಬೆಲೆ ಎಷ್ಟಿರಬಹುದು?ರಿಲಯನ್ಸ್ ಜಿಯೋ ಅಗ್ಗದ ಫೋನ್, ಶೀಘ್ರದಲ್ಲೇ ಬುಕ್ಕಿಂಗ್ ಆರಂಭ: ಬೆಲೆ ಎಷ್ಟಿರಬಹುದು?

ಇದಲ್ಲದೆ, ಈ ಸ್ವಾಧೀನವು ರಿಲಯನ್ಸ್‌ಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಜಾಗತಿಕ ಉತ್ಪಾದನಾ ಸಾಮರ್ಥ್ಯಗಳನ್ನು ಪ್ರವೇಶಿಸಲು ಬಾಗಿಲು ತೆರೆಯುತ್ತದೆ, ಏಕೆಂದರೆ ಇದು ಸೌರಶಕ್ತಿ ಕ್ಷೇತ್ರಕ್ಕೆ ವಿಸ್ತರಿಸುವ ಯೋಜನೆಯನ್ನು ಮುಂದುವರಿಸುತ್ತಿದೆ ಎಂದು ಎಕನಾಮಿಕ್ಸ್ ಟೈಮ್ಸ್‌ ವರದಿ ಮಾಡಿದೆ.

ಸೋಲಾರ್ ಪ್ಯಾನೆಲ್ ತಯಾರಕ REC ಖರೀದಿಗೆ ಮುಂದಾದ ರಿಲಯನ್ಸ್‌

1996ರಲ್ಲಿ ಪ್ರಾರಂಭಗೊಂಡ ಆರ್‌ಇಸಿ ಗ್ರೂಪ್ ರಾಸಾಯನಿಕಗಳ ಪ್ರಮುಖ ಕೆಮ್ಚಿನಾ ಅಂತರಾಷ್ಟ್ರೀಯ ಮಂಡಳಿ ಸದಸ್ಯ ಕೂಡ ಆಗಿದ್ದು, ಪಿರೆಲ್ಲಿ ಟೈರ್ ಮತ್ತು ಸಿಂಜೆಂಟಾದಲ್ಲಿ ಅತಿದೊಡ್ಡ ಷೇರುದಾರನಾಗಿದೆ. ಆರ್‌ಇಸಿ ಗ್ರೂಪ್ ಸೌರ ದ್ಯುತಿವಿದ್ಯುಜ್ಜನಕ (PV) ಪ್ಯಾನಲ್‌ಗಳಿಗಾಗಿ ಯೂರೋಪ್‌ನಲ್ಲಿ ಬಹುದೊಡ್ಡ ಮಾರುಕಟ್ಟೆ ಹೊಂದಿದೆ. ವಾರ್ಷಿಕವಾಗಿ 1.8 ಗಿಗಾವಾಟ್ (GW) ಪ್ರಮಾಣದ ಸೋಲಾರ್ ಪ್ಯಾನಲ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಜಾಗತಿಕವಾಗಿ ಬರೋಬ್ಬರಿ 10GW ಸಾಮರ್ಥ್ಯವನ್ನು ಒದಗಿಸುವ ಶಕ್ತಿ ಇದೆ.

ಭಾರತ ಈಗಾಗಲೇ ಸೌರಶಕ್ತಿ ಬಳಕೆಗೆ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದು, ಅದಾನಿ ಗ್ರೀನ್ ಕೂಡ ಬಹಳ ವೇಗವಾಗಿ ಬೆಳೆಯುತ್ತಿದೆ. 2022 ರ ವೇಳೆಗೆ 100GW ಸೋಲಾರ್ ಸೇರಿದಂತೆ 175GW ನವೀಕರಿಸಬಹುದಾದ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಭಾರತ ಸಜ್ಜಾಗಿದೆ. ಪ್ರಸ್ತುತ, ಸೌರ ಸಲಕರಣೆ ಮಾರುಕಟ್ಟೆಯು ಬೀಜಿಂಗ್ ಮೂಲದ ಕಂಪನಿಗಳಾದ ಟ್ರಿನಾ ಸೋಲಾರ್ ಲಿಮಿಟೆಡ್, ಇಟಿ ಸೋಲಾರ್ ಮತ್ತು ಜಿಂಕೊ ಸಾಕಷ್ಟು ಪ್ರಾಬಲ್ಯವನ್ನು ಹೊಂದಿದೆ. ಸದ್ಯ ಭಾರತವು ಕೇವಲ 3GW ಸೋಲಾರ್ ಸೆಲ್ಸ್ ಮತ್ತು 15GW ಸೋಲಾರ್ ಮಾಡ್ಯುಲ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.

ಚೀನಾದ ಮೇಲೆ ಹೆಚ್ಚು ಅವಲಂಬನೆ:
ಸೋಲಾರ್ ಪ್ಯಾನೆಲ್ ಉತ್ಪಾದನೆ ಹಾಗೂ ಸಲಕರಣೆಗಳಿಗಾಗಿ ಭಾರತವು ಚೀನಾವನ್ನು ಹೆಚ್ಚು ಅವಲಂಬಿಸಿದೆ. ಏಕೆಂದರೆ ಪ್ರಪಂಚದ ಪಾಲಿಸಿಲಿಕಾನ್ ನ ಮುಕ್ಕಾಲು ಭಾಗಕ್ಕಿಂತ ಹೆಚ್ಚು ಪೂರೈಕೆದಾರರು ಇಲ್ಲಿದ್ದಾರೆ. ಹೆಚ್ಚಿನ ಭಾರತದ ಸೋಲಾರ್ ಪ್ಯಾನೆಲ್‌ಗಳ ಅಗತ್ಯ ಸಲಕರಣೆಗಳು ಚೀನಾ ಮತ್ತು ಅಮೆರಿಕಾದಿಂದ ಪೂರೈಕೆ ಆಗುತ್ತದೆ.

ಬೆನ್‌ರೂಟರ್ ಸಂಶೋಧನಾ ವರದಿ ಪ್ರಕಾರ 2019 ರಲ್ಲಿ ಸೌರಶಕ್ತಿಯನ್ನು ವಿಶ್ವದ ಹೊಸ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಉನ್ನತ ಮೂಲವೆಂದು ಪರಿಗಣಿಸಲಾಗಿದೆ. ಸೌರ ಫಲಕಗಳನ್ನು ತಯಾರಿಸಲು ಉದ್ಯಮವು ಬಳಸಿದ ಪಾಲಿಸೈಲಿಕನ್‌ನ ಸುಮಾರು ಶೇಕಡಾ 33 ರಷ್ಟು ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯದಿಂದ ಬಂದಿದೆ.

English summary

RIL Nears Deal To Acquire Solar Panel Maker REC For $1.2 Billion

Reliance industires Ltd is in discussion with global banks to raise about $500-600 million in acquisition financing for the deal of solar panel REc fro $1.2 Billion from china
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X