For Quick Alerts
ALLOW NOTIFICATIONS  
For Daily Alerts

ರುಪೇ ಇಂಟರ್ ನ್ಯಾಷನಲ್ ಕಾರ್ಡ್ ಗೆ 40% ಕ್ಯಾಶ್ ಬ್ಯಾಕ್

|

ರುಪೇ ಇಂಟರ್ ನ್ಯಾಷನಲ್ (ಡೆಬಿಟ್/ಕ್ರೆಡಿಟ್) ಕಾರ್ಡ್ ಬಳಕೆದಾರರಿಗೆ ಭರ್ಜರಿ ಸುದ್ದಿಯೊಂದಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಈ ಬಗ್ಗೆ ಗುರುವಾರ ಘೋಷಣೆ ಮಾಡಿದೆ. ಆ ಪ್ರಕಾರ, ರುಪೇ ಇಂಟರ್ ನ್ಯಾಷನಲ್ ಕಾರ್ಡ್ ದಾರರಿಗೆ 40% ಕ್ಯಾಶ್ ಬ್ಯಾಕ್ ದೊರೆಯಲಿದೆ.

ಯುಎಇ, ಸಿಂಗಾಪೂರ್, ಶ್ರೀಲಂಕಾ, ಯು.ಕೆ., ಯು.ಎಸ್.ಎ., ಸ್ಪೇನ್, ಸ್ವಿಟ್ಜರ್ಲೆಂಡ್ ಮತ್ತು ಥಾಯ್ಲೆಂಡ್ ದೇಶಗಳಲ್ಲಿ ರುಪೇ ಕಾರ್ಡ್ ಬಳಸಿ ಪಿಒಎಸ್ (ಪಾಯಿಂಟ್ ಆಫ್ ಸೇಲ್ಸ್) ವ್ಯವಹಾರಗಳನ್ನು ಮಾಡಿದರೆ 40% ಕ್ಯಾಶ್ ಬ್ಯಾಕ್ ದೊರೆಯುತ್ತದೆ. ವಿಪರೀತ ಪ್ರವಾಸ ಮಾಡುವವರನ್ನು ಗಮನದಲ್ಲಿಟ್ಟುಕೊಂಡು, ಡಿಜಿಟಲ್ ಪಾವತಿಯನ್ನು ಉತ್ತೇಜಿಸುವ ಕಾರಣಕ್ಕೆ ಈ ಕೊಡುಗೆ ನೀಡಲಾಗಿದೆ.

ಬ್ಯಾಂಕ್ ನಲ್ಲಿ ಆಕ್ಟಿವೇಟ್ ಮಾಡಿಸಬೇಕು

ಬ್ಯಾಂಕ್ ನಲ್ಲಿ ಆಕ್ಟಿವೇಟ್ ಮಾಡಿಸಬೇಕು

ಕ್ಯಾಶ್ ಬ್ಯಾಕ್ ಆಫರ್ ಜತೆಗೆ ಈ ಕಾರ್ಡ್ ಗಳ ಬಳಕೆದಾರರು ಅಂತರರಾಷ್ಟ್ರೀಯ ಪ್ರವಾಸದ ವೇಳೆಯಲ್ಲೂ ಉಳಿತಾಯ ಮಾಡಬಹುದು. ದುಬೈ ಶಾಪಿಂಗ್ ಹಬ್ಬವೂ ಸೇರಿದಂತೆ ಇತರೆಡೆಯಲ್ಲೂ ರುಪೇ ಕಾರ್ಡ್ ಬಳಸಿ, ಉಳಿತಾಯ ಮಾಡಬಹುದು. ಆದರೆ ಅಂತರರಾಷ್ಟ್ರೀಯ ಪ್ರವಾಸಕ್ಕೂ ತೆರಳುವ ಮುನ್ನ ರುಪೇ ಇಂಟರ್ ನ್ಯಾಷನಲ್ ಕಾರ್ಡ್ ಆಕ್ಟಿವೇಟ್ ಮಾಡಿಸಬೇಕು. ಅಂದರೆ ಯಾವ ಬ್ಯಾಂಕ್ ನಿಂದ ಕಾರ್ಡ್ ವಿತರಿಸಲಾಗಿದೆಯೋ ಅಲ್ಲೇ ಆಕ್ಟಿವೇಟ್ ಮಾಡಿಸಬೇಕು. ಅಥವಾ ಆ ಬ್ಯಾಂಕ್ ನ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಅಥವಾ ಬ್ರ್ಯಾಂಚ್ ಬ್ಯಾಂಕಿಂಗ್ ಸೇವೆ ಮೂಲಕವೂ ಆಕ್ಟಿವೇಟ್ ಮಾಡಿಸಬಹುದು.

ಕನಿಷ್ಠ ಒಂದು ಸಾವಿರ ರುಪಾಯಿ ವ್ಯವಹಾರ

ಕನಿಷ್ಠ ಒಂದು ಸಾವಿರ ರುಪಾಯಿ ವ್ಯವಹಾರ

ಕ್ಯಾಶ್ ಬ್ಯಾಕ್ ಆಫರ್ ಸಿಗಬೇಕು ಅಂದರೆ ಕನಿಷ್ಠ ಒಂದು ಸಾವಿರ ರುಪಾಯಿಯ ವ್ಯವಹಾರ ಮಾಡಬೇಕು. ಒಂದು ವ್ಯವಹಾರಕ್ಕೆ ಗರಿಷ್ಠ ನಾಲ್ಕು ಸಾವಿರ ರುಪಾಯಿ ಕ್ಯಾಶ್ ಬ್ಯಾಕ್ ಬರುತ್ತದೆ. ಹೀಗೆ ಒಂದು ತಿಂಗಳಲ್ಲಿ ನಾಲ್ಕು ಬಾರಿ ಬಳಸಬಹುದು. ಹದಿನಾರು ಸಾವಿರ ರುಪಾಯಿ ತನಕ ಕ್ಯಾಶ್ ಬ್ಯಾಕ್ ಪಡೆಯುವ ಅವಕಾಶ ಇರುತ್ತದೆ. ರುಪೇ ಕಾರ್ಡ್ ಹಲವು ಬಳಸುವಂಥ ಗ್ರಾಹಕರಿಗೆ ಹೆಚ್ಚಿನ ಕ್ಯಾಶ್ ಬ್ಯಾಕ್ ಕೊಡುಗೆ ಪಡೆಯುವ ಅನುಕೂಲ ಇರುತ್ತದೆ.

ವಿಮಾನ, ಹೋಟೆಲ್ ಬುಕ್ಕಿಂಗ್ ಮೇಲೂ ಆಫರ್

ವಿಮಾನ, ಹೋಟೆಲ್ ಬುಕ್ಕಿಂಗ್ ಮೇಲೂ ಆಫರ್

ಕ್ಯಾಶ್ ಬ್ಯಾಕ್ ಕೊಡುಗೆ ಜತೆಗೆ ಕೆಲವು ದೇಶೀಯ/ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಲಾಂಜ್ ಗಳಲ್ಲೂ ಪ್ರವೇಶ ಇರುತ್ತದೆ. ಇನ್ನು ಥಾಮಸ್ ಕುಕ್, ಮೇಕ್ ಮೈ ಟ್ರಿಪ್ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ವಿಮಾನಗಳು ಮತ್ತು ಹೋಟೆಲ್ ಗಳ ಬುಕ್ಕಿಂಗ್ ಮೇಲೂ ಆಕರ್ಷಕ ಕೊಡುಗೆಗಳು ಇರುತ್ತವೆ.

190 ದೇಶಗಳಲ್ಲಿ ಬಳಕೆ ಮಾಡಬಹುದು

190 ದೇಶಗಳಲ್ಲಿ ಬಳಕೆ ಮಾಡಬಹುದು

ಡಿಸ್ಕವರ್ ಫೈನಾನ್ಷಿಯಲ್ ಸರ್ವೀಸಸ್ ಮತ್ತು ಜಪಾನ್ ಮೂಲದ ಜೆಸಿಬಿ ಇಂಟರ್ ನ್ಯಾಷನಲ್ ಜತೆಗೆ ರುಪೇ ಸಹಭಾಗಿತ್ವ ಇದೆ. ನೂರಾ ತೊಂಬತ್ತು ದೇಶದಲ್ಲಿ ಬಳಕೆದಾರರು ರುಪೇ ಬಳಸಬಹುದು. ಎಸ್ ಬಿಐ, ಎಚ್ ಡಿಎಫ್ ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಸೇರಿದಂತೆ ಸಾವಿರದ ನೂರಕ್ಕೂ ಹೆಚ್ಚು ಬ್ಯಾಂಕ್ ಗಳು ರುಪೇ ಪ್ಲಾಟ್ ಫಾರ್ಮ್ ಹೊಂದಿವೆ.

English summary

RuPay International Cardholders Get 40 Percent Cashback Offer

RuPay international card holders will get 40% cash back and other offers. Here is the complete details.
Story first published: Thursday, January 2, 2020, 18:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X