For Quick Alerts
ALLOW NOTIFICATIONS  
For Daily Alerts

ಅಂತಾರಾಷ್ಟ್ರೀಯ ಪಾವತಿ ಕ್ರಿಪ್ಟೋ ಬಳಕೆಗೆ ಮುಂದಾಗುತ್ತಾ ರಷ್ಯಾ?

|

ಅಂತಾರಾಷ್ಟ್ರೀಯ ಪಾವತಿಗಳಿಗೆ ಕ್ರಿಪ್ಟೋಕರೆನ್ಸಿಯನ್ನು ಬಳಸಲು ರಷ್ಯಾ ಚಿಂತನೆ ನಡೆಸುತ್ತಿದೆ ಎಂದು ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ಶುಕ್ರವಾರ ಸರ್ಕಾರಿ ಅಧಿಕಾರಿಯೊಬ್ಬರನ್ನು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

 

"ಅಂತಾರಾಷ್ಟ್ರೀಯ ವಹಿವಾಟುಗಳಿಗಾಗಿ ಡಿಜಿಟಲ್ ಕರೆನ್ಸಿಗಳನ್ನು ಬಳಸುವ ಕಲ್ಪನೆಯ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ," ಎಂದು ಹಣಕಾಸು ಸಚಿವಾಲಯದ ಹಣಕಾಸು ನೀತಿ ವಿಭಾಗದ ಮುಖ್ಯಸ್ಥ ಇವಾನ್ ಚೆಬೆಸ್ಕೋವ್ ಹೇಳಿದ್ದಾರೆ. ರಷ್ಯಾದ ಅಧಿಕಾರಿಗಳು ದೇಶದ ಕ್ರಿಪ್ಟೋ ಮಾರುಕಟ್ಟೆ ಮತ್ತು ಡಿಜಿಟಲ್ ಕರೆನ್ಸಿಗಳ ಬಳಕೆಯನ್ನು ಹೇಗೆ ನಿಯಂತ್ರಿಸಬೇಕು ಎಂದು ಚರ್ಚೆ ನಡೆಸುತ್ತಿದ್ದಾರೆ. ಈ ನಡುವೆ ಕೇಂದ್ರ ಬ್ಯಾಂಕ್‌ನ ನಿರ್ಧಾರವನ್ನು ಹಣಕಾಸು ಸಚಿವಾಲಯ ವಿರೋಧಿಸಿದೆ.

ಎಚ್ಚರ: ಟ್ವಿಟ್ಟರ್‌ ಬಳಕೆದಾರರಿಂದ ಎನ್‌ಎಫ್‌ಟಿ, ಕ್ರಿಪ್ಟೋ ದೋಚುತ್ತಾರೆ ಸ್ಕಾಮರ್‌ಗಳು!

ಚರ್ಚೆಗಳು ತಿಂಗಳುಗಳಿಂದ ನಡೆಯುತ್ತಿವೆ. ಕ್ರಿಪ್ಟೋಕರೆನ್ಸಿಗಳನ್ನು ಶೀಘ್ರದಲ್ಲೇ ಅಥವಾ ನಂತರ ಪಾವತಿಯ ವಿಧಾನವಾಗಿ ಕಾನೂನುಬದ್ಧಗೊಳಿಸಬೇಕೆಂದು ಸರ್ಕಾರ ನಿರೀಕ್ಷಿಸುತ್ತದೆಯಾದರೂ, ಇನ್ನೂ ಯಾವುದೇ ಒಮ್ಮತವನ್ನು ತಲುಪಲಾಗಿಲ್ಲ.

ಅಂತಾರಾಷ್ಟ್ರೀಯ ಪಾವತಿ ಕ್ರಿಪ್ಟೋ ಬಳಕೆಗೆ ಮುಂದಾಗುತ್ತಾ ರಷ್ಯಾ?

ಹಣಕಾಸು ಸಚಿವಾಲಯವು ಕರಡು ಕಾನೂನಿನ ನವೀಕರಿಸಿದ ಆವೃತ್ತಿಗೆ ಅಂತರರಾಷ್ಟ್ರೀಯ ಪಾವತಿಗಳ ಇತ್ತೀಚಿನ ಪ್ರಸ್ತಾಪವನ್ನು ಸೇರಿಸುವ ಕುರಿತು ಚರ್ಚಿಸುತ್ತಿದೆ ಎಂದು ಸರ್ಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿದೆ.

ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಕ್ರಿಪ್ಟೋವನ್ನು ಇತ್ಯರ್ಥದ ಸಾಧನವಾಗಿ ಅನುಮತಿಸುವುದು ಅಂತರಾಷ್ಟ್ರೀಯ ನಿರ್ಬಂಧಗಳ ಪರಿಣಾಮವನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಈ ಹಿಂದೆಯೇ ಕ್ರಿಪ್ಟೋ ಬಳಕೆಯ ಸುದ್ದಿಯಾಗಿತ್ತು!

ರಷ್ಯಾವು ಉಕ್ರೇನ್‌ ಮೇಲೆ ಯುದ್ಧವನ್ನು ಘೋಷಿಸಿದಂತೆ, ಮಾಸ್ಕೋದ ಮೇಲೆ ಹಲವಾರು ರಾಷ್ಟ್ರಗಳು ನಿರ್ಬಂಧವನ್ನು ಹೇರಲು ಮುಂದಾಗಿದೆ. ಈ ನಿರ್ಣಾಯಕ ಹಂತದಲ್ಲಿ, ಕ್ರಿಪ್ಟೋ ಕರೆನ್ಸಿಗಳು ಅಥವಾ ಡಿಜಿಟಲ್ ಕರೆನ್ಸಿಗಳು ನಿರ್ಬಂಧಗಳಿಂದ ದೂರವಿರಲು ಅಥವಾ ಆರ್ಥಿಕ ನಿರ್ಬಂಧಗಳಿಂದ ಪಾರಾಗಲು ಕ್ರಿಪ್ಟೋಕರೆನ್ಸಿಯನ್ನು ಕಾನೂನುಬದ್ಧಗೊಳಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿರ್ಧಾರ ಮಾಡಬಹುದು ಎಂದು ಸುದ್ದಿ ಆಗುತ್ತಿದೆ.

ಆರ್ಥಿಕ ನಿರ್ಬಂಧದಿಂದ ಪಾರಾಗಲು ರಷ್ಯಾ ಕ್ರಿಪ್ಟೋಕರೆನ್ಸಿಯನ್ನು ಬಳಸುವ ಸಾಧ್ಯತೆ. ಇದು ಡಿಜಿಟಲ್ ಕರೆನ್ಸಿಗಳ ಮೂಲಕ ಜಾಗತಿಕವಾಗಿ ಕೆಲಸ ಮಾಡುವ ಯಾರೊಂದಿಗಾದರೂ ಒಪ್ಪಂದಗಳನ್ನು ಮಾಡಿಕೊಳ್ಳಬಹುದು ಎಂದು ಬಿಸಿನೆಸ್ ಟುಡೇ ವರದಿ ಮಾಡಿದೆ. ಕ್ರೇಮಿಯಾವನ್ನು ರಷ್ಯಾವು 2014ರಲ್ಲಿ ಆಕ್ರಮಣ ಮಾಡಿದ ಬಳಿಕ ರಷ್ಯಾದ ಬ್ಯಾಂಕುಗಳು, ತೈಲ ಮತ್ತು ಅನಿಲ ಮಧ್ಯಸ್ಥರೊಂದಿಗೆ ವ್ಯಾಪಾರ ಮಾಡಲು ಯುಎಸ್‌ ನಿರ್ಬಂಧವನ್ನು ವಿಧಿಸಿತ್ತು. ಆಗ, ರಷ್ಯಾದ ಆರ್ಥಿಕತೆಯು ನಿರ್ಬಂಧಗಳಿಂದ ಭಾರೀ ಪೆಟ್ಟು ತಿಂದಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ಅನ್ನು ಉಲ್ಲೇಖಿಸಿ ಬಿಸಿನೆಸ್ ಟುಡೇ ವರದಿ ಮಾಡಿದೆ.

English summary

Russia Mulling Cryptocurrency Use For International Payments

Russia Mulling Cryptocurrency Use For International Payments.
Story first published: Saturday, May 28, 2022, 18:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X