For Quick Alerts
ALLOW NOTIFICATIONS  
For Daily Alerts

ಸಲ್ಮಾನ್ ಖಾನ್ ಡುಪ್ಲೆಕ್ಸ್ ಅಪಾರ್ಟ್‌ಮೆಂಟ್‌ ಬಾಡಿಗೆ ತಿಂಗಳಿಗೆಷ್ಟಿದೆ?

|

ಹಿಂದಿ ಚಿತ್ರರಂಗದ ಜನಪ್ರಿಯ ನಟ ಸಲ್ಮಾನ್ ಖಾನ್ ಒಡೆತನದ ಬಾಂದ್ರಾದ ಡುಪ್ಲೆಕ್ಸ್ ಅಪಾರ್ಟ್‌ಮೆಂಟ್‌ ಬಾಡಿಗೆ ಒಪ್ಪಂದ ಪತ್ರ ಇಂದು ನವೀಕರಿಸಿದ್ದಾರೆ. ಬಾಂದ್ರಾದ ಈ ಅಪಾರ್ಟ್‌ಮೆಂಟ್‌ ಬಾಡಿಗೆ ತಿಂಗಳಿಗೆ ಎಷ್ಟಿರಬಹುದು ಎಂಬುದು ಇದೀಗ ಬಹಿರಂಗವಾಗಿದೆ. ಮುಂದಿನ ಮೂರು ವರ್ಷಗಳ ಅವಧಿಗೆ ಬಾಡಿಗೆ ಒಪ್ಪಂದ ಪತ್ರವನ್ನು ನವೀಕರಿಸಲಾಗಿದ್ದು, ತಿಂಗಳಿಗೆ 8.25 ಲಕ್ಷ ರು ಪಾವತಿಸುತ್ತಿದ್ದಾರೆ ಎಂದು ಜಾಪ್ ಕೀ.ಕಾಂ ವರದಿ ಮಾಡಿದೆ.

ಸಲ್ಮಾನ್ ಖಾನ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಒಡೆತನದಲ್ಲಿರುವ ಬಾಂದ್ರಾದ ಮಕ್ಬಾ ಹೈಟ್ಸ್ ಕಟ್ಟಡದ 17ನೇ ಹಾಗೂ 18ನೇ ಮಹಡಿಯ ಡುಪ್ಲೆಕ್ಸ್ ಅಪಾರ್ಟ್ಮೆಂಟ್ ಬಾಡಿಗೆ ಒಪ್ಪಂದ ರಿನ್ಯೂ ಮಾಡಲಾಗಿದೆ. ಸಲ್ಮಾನ್ ಅಪ್ತರಾದ ಬಾಬಾ ಸಿದ್ದಿಕಿ ಹಾಗೂ ಜೀಶನ್ ಸಿದ್ದಿಕಿ ಅವರು ಸಹಿ ಹಾಕಿ ಪತ್ರಗಳನ್ನು ಪಡೆದಿದ್ದಾರೆ ಎಂದು ಮನಿಕಂಟ್ರೋಲ್ ವರದಿ ಹೇಳಿದೆ.

ಆಗಸ್ಟ್ 30, 2021ರಂದೇ ನೋಂದಣಿ ಮಾಡಿಕೊಳ್ಳಲಾಗಿದೆ. ಮಾರ್ಚ್ 1 ರಿಂದ ಕರಾರು ಪತ್ರ ನೋಂದಣಿ ಪ್ರಕ್ರಿಯೆ ನಡೆಸಲಾಗಿದೆ.

ಸಲ್ಮಾನ್ ಖಾನ್ ಅಪಾರ್ಟ್‌ಮೆಂಟ್‌ ಬಾಡಿಗೆ ತಿಂಗಳಿಗೆಷ್ಟಿದೆ?

ಸುಮಾರು 2,265 ಚದರ ಅಡಿ ವಿಸ್ತೀರ್ಣದ ಈ ಕಟ್ಟಡ 10 ಕಾರು ಪಾರ್ಕಿಂಗ್ ಜಾಗವನ್ನು ಹೊಂದಿದೆ. 17ನೇ ಮಹಡಿಯೂ 1,167.03 ಚದರಡಿ ವಿಸ್ತೀರ್ಣ ಹೊಂದಿದ್ದು, 1,227.84 ಚದರಡಿ ಟೆರೇಸ್ ಇದೆ. 18ನೇ ಮಹಡಿ 1,098.78 ಚದರಡಿ ಇದ್ದು, 431.63 ಚದರಡಿ ಟೆರೇಸ್ ಹೊಂದಿದೆ. ಈ ಒಪ್ಪಂದ ನವೀಕರಣ ಬಗ್ಗೆ ಸಲ್ಮಾನ್ ಖಾನ್ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬಾಂದ್ರಾದಲ್ಲೇ ಇರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ನಲ್ಲಿ ಸಲ್ಮಾನ್ ಖಾನ್ ಹಾಗೂ ಕುಟುಂಬ ನೆಲೆಸಿದೆ. ಪನ್ವೇಲ್ ನಲ್ಲಿ ದೊಡ್ಡ ಫಾರ್ಮ್ ಹೌಸ್ ಹೊಂದಿದ್ದಾರೆ. ಬಾಂದ್ರಾದ ಅಪಾರ್ಟ್ಮೆಂಟ್ ನಿರ್ಮಾಣ ವೇಳೆಯಲ್ಲೇ 30 ಕೋಟಿ ರು ಕೊಟ್ಟು ಖರೀದಿಸಿದ್ದರು ಎಂಬ ಸುದ್ದಿ ಕಳೆದ ಎರಡು ವರ್ಷಗಳ ಹಿಂದೆ ಬಂದಿತ್ತು. ನಂತರ ಮಕ್ಬಾ ಹೈಟ್ಸ್ ಡುಪ್ಲೆಕ್ಸ್ ಅಪಾರ್ಟ್ಮೆಂಟ್ ಗಳನ್ನು ತಮ್ಮ ಆಪ್ತರಾದ ಬಾಬಾ ಸಿದ್ದಿಕಿ ಸುಪರ್ದಿಗೆ ಸಲ್ಮಾನ್ ನೀಡಿದ್ದರು. ಪ್ರತಿವರ್ಷ ಮುಂಬೈ ನಗರದಲ್ಲೇ ಅತಿದೊಡ್ಡ ಈದ್ ಪಾರ್ಟಿ ಕೊಡುವ ಬಾಬಾ ಸಿದ್ದಿಕಿ ಅವರು ಸಲ್ಮಾನ್ ಖಾನ್ ಒಡೆತನದ ಸಂಸ್ಥೆಯ ಮೂಲಕ ಈ ಅಪಾರ್ಟ್ಮೆಂಟ್ ವ್ಯವಹಾರ ಕುದುರಿಸಿದ್ದರು. ನಂತರ 2021ರಲ್ಲಿ ಬಾಡಿಗೆ ಒಪ್ಪಂದ ನವೀಕರಿಸಿದ್ದು, 11 ತಿಂಗಳಿಗೆ ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ.

ಚಿಂಗಾರಿಯ ಗರಿ ಲೋಕಾರ್ಪಣೆ

ಭಾರತದ ಮೊತ್ತ ಮೊದಲ ಕ್ರಿಪ್ಟೋ ಟೋಕನ್ ಚಿಂಗಾರಿಯ ಗರಿ ಲೋಕಾರ್ಪಣೆ ಮಾಡಿರುವ ಸಲ್ಮಾನ್ ಖಾನ್ ಅವರು ಕ್ರಿಪ್ಟೋಕರೆನ್ಸಿಯಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬ ವಿಷಯವೂ ಬಹಿರಂಗವಾಗಿದೆ. NFT ಕ್ಷೇತ್ರದತ್ತ ಸಿನಿಮಾ ಸೆಲೆಬ್ರಿಟಿಗಳು ಮುಖ ಮಾಡುತ್ತಿದ್ದು, ಮುಂಬೈನ ರಿಯಲ್ ಎಸ್ಟೇಟ್ ನಲ್ಲೂ ಡಿಜಿಟಲ್ ಕರೆನ್ಸಿ ಓಡಾಡುತ್ತಿದೆ ಎಂಬ ಸುದ್ದಿಯಿದೆ. ಮನೆ, ಬಂಗಲೆ ನೋಂದಣಿ ವೇಳೆ, ವೈಟ್ , ಬ್ಲಾಕ್ ಎಂದು ಸ್ಟ್ಯಾಂಪ್ ಡ್ಯೂಟಿ ಕಟ್ಟಿ ಕೂಡಾ ಇಂತಿಷ್ಟು ಉಪ ನೋಂದಣಿ ಕಚೇರಿಯ ಅಧಿಕಾರಿಗಳಿಗೆ ನೀಡುವ ಕಾಲವಿತ್ತು. ಈಗೆಲ್ಲ ಇದು ಡಿಜಿಟಲ್ ಕರೆನ್ಸಿ, ಗೂಗಲ್ ಪೇ ಸೇರಿದಂತೆ ಡಿಜಿಟಲ್ ಪೇಮೆಂಟ್ ಗೇಟ್ ವೇ ಗಳು ಸ್ಥಾನ ಪಡೆದುಕೊಂಡಿವೆ.

ಅಮಿತಾಬ್ ಬಚ್ಚನ್ ಅಕ್ಟೋಬರ್ 13ರಂದು ಬಾಲಿ ಕಾಯಿನ್ ಎಂಬ ಡಿಜಿಟಲ್ ಕರೆನ್ಸಿ ಪರ ಪ್ರಚಾರ ಮಾಡುತ್ತಾ NFT ಲೋಕಕ್ಕೆ ಎಂಟ್ರಿ ಘೋಷಿಸಿದ ಬಳಿಕ ಸಲ್ಮಾನ್ ಖಾನ್ ಎಂಟ್ರಿಯಾಗಿದೆ. ಹಾಗೆ ನೋಡಿದರೆ ಬಾಲಿಕಾಯಿನ್ ಎಂಬುದನ್ನು ಹುಟ್ಟು ಹಾಕಿರುವುದು ಸಲ್ಮಾನ್ ಸಂಬಂಧಿ ನಟ ಅತುಲ್ ಅಗ್ನಿಹೋತ್ರಿ ಎಂಬುದು ವಿಶೇಷ. ಬಾಲಿವುಡ್ ಹಾಗೂ ಕ್ರಿಪ್ಟೋ ಕರೆನ್ಸಿ ಲೋಕದ ಬಗ್ಗೆ ಇನ್ನಷ್ಟು ರೋಚಕ ಮಾಹಿತಿ ನಿಧಾನವಾಗಿ ಹೊರ ಬರುವ ಸಾಧ್ಯತೆಯಿದ್ದು, ಕಾದು ನೋಡಬೇಕಿದೆ.

English summary

Salman Khan Bandra duplex rent agreement details out

Actor Salman Khan has renewed a rent agreement for a duplex apartment in Mumbai’s Bandra for Rs 8.25 lakh a month for a period of three years, documents accessed by Zapkey.com show.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X