ಎಸ್ ಬಿಐ ಗೃಹ ಸಾಲ 6.80%ನಿಂದ ಶುರು; ಪ್ರೊಸೆಸಿಂಗ್ ಶುಲ್ಕ ಇಲ್ಲ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಮಾರ್ಚ್ 31, 2021ರ ತನಕ ಪ್ರೊಸೆಸಿಂಗ್ ಶುಲ್ಕ ಮನ್ನಾ ಮಾಡಿದೆ. ವಾರ್ಷಿಕ ಬಡ್ಡಿ ದರ 6.80%ನಿಂದ ಗೃಹ ಸಾಲ ಬಡ್ಡಿ ದರ ಶುರುವಾಗುತ್ತದೆ. ಗ್ರಾಹಕರಿಗೆ ವಿವಿಧ ರೀತಿಯ ಗೃಹ ಸಾಲವನ್ನು ಒದಗಿಸುತ್ತಿದೆ.
ರೆಗ್ಯುಲರ್ ಗೃಹ ಸಾಲ, ಸರ್ಕಾರಿ ನೌಕರರಿಗೆ ಎಸ್ ಬಿಐ ಪ್ರಿವಿಲೇಜ್ ಹೋಮ್ ಲೋನ್, ಎಸ್ ಬಿಐ ಶೌರ್ಯ ಸಾಲ, ಎಸ್ ಬಿಐ ಮ್ಯಾಕ್ಸ್ ಗೇಯ್ನ್ ಲೋನ್, ಎಸ್ ಬಿಐ ಸ್ಮಾರ್ಟ್ ಹೋಮ್, ಈಗಾಗಲೇ ಇರುವ ಗ್ರಾಹಕರಿಗೆ ಟಾಪ್ ಅಪ್ ಲೋನ್, ಎಸ್ ಬಿಐ ಎನ್ ಆರ್ ಐ ಲೋನ್, ಹೆಚ್ಚಿನ ಮೊತ್ತದ ಸಾಲಕ್ಕೆ ಎಸ್ ಬಿಐ ಫ್ಲೆಕ್ಸಿಪೇ ಹೋಮ್ ಲೋನ್ ಮತ್ತು ಮಹಿಳೆಯರಿಗೆ ಎಸ್ ಬಿಐ ಹರ್ ಘರ್ ಸಾಲ ನೀಡಲಾಗುತ್ತಿದೆ.
ಹೊಸ ಗ್ರಾಹಕರು 7208933140 ಸಂಖ್ಯೆಗೆ ಕರೆ ಮಾಡಿ, ಗೃಹ ಸಾಲದ ಬಗ್ಗೆ ಎಲ್ಲ ಮಾಹಿತಿ ತಿಳಿಯಬಹುದು ಎಂದು ಬ್ಯಾಂಕ್ ನಿಂದ ತಿಳಿಸಲಾಗಿದೆ. ಗೃಹ ಸಾಲದ ಸೆಗ್ಮೆಂಟ್ ನಲ್ಲಿ ಎಸ್ ಬಿಐ ಮಾರುಕಟ್ಟೆ ಪಾಲು ಶೇಕಡಾ 34ರಷ್ಟಿದೆ. ಪ್ರತಿ ದಿನ ಒಂದು ಸಾವಿರ ಗೃಹ ಸಾಲ ಗ್ರಾಹಕರು ಸೇರ್ಪಡೆ ಆಗುತ್ತಿದ್ದಾರೆ.

ಗೃಹ ಸಾಲ ವ್ಯವಹಾರದಲ್ಲಿ ಸ್ಟೇಟ್ ಬ್ಯಾಂಕ್ ವ್ಯವಹಾರವು 5 ಲಕ್ಷ ಕೋಟಿ ರುಪಾಯಿಯನ್ನು ದಾಟಿದೆ. 2024ರ ಹೊತ್ತಿಗೆ ಅಸೆಟ್ಸ್ ಅಂಡರ್ ಮ್ಯಾನೇಜ್ ಮೆಂಟ್ 7 ಲಕ್ಷ ಕೋಟಿ ರುಪಾಯಿ ಗುರಿ ಹೊಂದಿದೆ.
2011ರಲ್ಲಿ 89 ಸಾವಿರ ಕೋಟಿ ರುಪಾಯಿ ಇದ್ದ ಎಸ್ ಬಿಐ ಗೃಹ ಸಾಲ ವ್ಯವಹಾರ ಐದು ಪಟ್ಟು ಬೆಳೆದು, 2021ಕ್ಕೆ 5 ಲಕ್ಷ ಕೋಟಿ ರುಪಾಯಿ ಆಗಿದೆ. ಪ್ರಧಾನಮಂತ್ರಿ ಆವಾಸ ಯೋಜನಾ ಅಡಿಯಲ್ಲಿ 2020ರ ಡಿಸೆಂಬರ್ ತನಕ ಎಸ್ ಬಿಐನಿಂದ ಎರಡು ಲಕ್ಷ ಮನೆಗಳಿಗೆ ಸಾಲ ವಿತರಣೆ ಮಾಡಿದೆ.
ಪ್ರಧಾನಮಂತ್ರಿ ಆವಾಸ ಯೋಜನಾ ಸಬ್ಸಿಡಿ ಪ್ರಕ್ರಿಯೆಗೆ ಏಕೈಕ ಹೌಸಿಂಗ್ ಮತ್ತು ನಗರಾಭಿವೃದ್ಧಿ ಕೇಂದ್ರ ನೋಡಲ್ ಏಜೆನ್ಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ.