For Quick Alerts
ALLOW NOTIFICATIONS  
For Daily Alerts

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಹೌಸಿಂಗ್ ಲೋನ್ ಮೇಲೆ ವಿಶೇಷ ಆಫರ್

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಹೌಸಿಂಗ್ ಲೋನ್ ಮೇಲೆ ವಿಶೇಷ ಆಫರ್ ಘೋಷಣೆ ಮಾಡಲಾಗಿದೆ. ಎಸ್ ಬಿಐನಿಂದ ಗೃಹ ಸಾಲ ಪಡೆಯುವವರಿಗೆ ಮೂರು ಅನುಕೂಲಗಳು ದೊರೆಯಲಿವೆ.

ಸಾಲಕ್ಕೆ ಯಾವುದೇ ಪ್ರೊಸೆಸಿಂಗ್ ಶುಲ್ಕ ಇರುವುದಿಲ್ಲ, ಹೆಚ್ಚಿನ ಸಿಬಿಲ್ ಸ್ಕೋರ್ ಇರುವವರಿಗೆ ಮೂವತ್ತು ಲಕ್ಷ ಮೇಲ್ಪಟ್ಟು ಒಂದು ಕೋಟಿ ರು. ತನಕದ ಸಾಲಕ್ಕೆ 0.10% ಬಡ್ಡಿ ವಿನಾಯಿತಿ ಹಾಗೂ ಎಸ್ ಬಿಐ ಯೋನೋ ಅಪ್ಲಿಕೇಷನ್ ಮೂಲಕ ಅಪ್ಲೈ ಮಾಡಿದಲ್ಲಿ 0.5% ವಿನಾಯಿತಿ ದೊರೆಯುತ್ತದೆ.

ಎಸ್‌ಬಿಐನಿಂದ ಸಿಗಲಿದೆ ವೇಗದ ಕೃಷಿ ಸಾಲಎಸ್‌ಬಿಐನಿಂದ ಸಿಗಲಿದೆ ವೇಗದ ಕೃಷಿ ಸಾಲ

ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ರೆಪೋ ದರ 4%ಗೆ ಇಳಿಕೆ ಮಾಡಿದ ಮೇಲೆ ಹೌಸಿಂಗ್ ಲೋನ್ ಮೇಲಿನ ಬಡ್ಡಿ ದರ ದಶಕಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಎಸ್ ಬಿಐನಿಂದ ಹೊಸದಾಗಿ ಪಡೆಯುವ ಎಲ್ಲ ಗೃಹ ಸಾಲಗಳು ಎಕ್ಸ್ ಟರ್ನಲ್ ಬೆಂಚ್ ಮಾರ್ಕ್ (EBR) ಜೋಡಣೆ ಆಗಿರುತ್ತದೆ. ಸದ್ಯಕ್ಕೆ ಅದು 6.65% ಇದೆ. ಇನ್ನು ಎಸ್ ಬಿಐ EBR ರೆಪೋ ದರಕ್ಕೆ ಜೋಡಣೆ ಆಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಹೌಸಿಂಗ್ ಲೋನ್ ಮೇಲೆ ವಿಶೇಷ ಆಫರ್

ವೇತನ ಪಡೆಯುವ ಗ್ರಾಹಕರಿಗೆ ಸದ್ಯಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗೃಹ ಸಾಲ ಬಡ್ಡಿ ದರವು 6.95%ರಿಂದ 7.45% ಇದೆ. ಇನ್ನು ಸ್ವ ಉದ್ಯೋಗಿಗಳಿಗೆ ಬಡ್ಡಿ ದರ 7.10%ರಿಂದ 7.60% ಇದೆ. ಇದರ ಜತೆಗೆ ಪ್ರೊಸೆಸಿಂಗ್ ಶುಲ್ಕ ವಿನಾಯಿತಿ ಸಿಗುವುದರಿಂದ ಸಾಲ ಪಡೆಯುವವರಿಗೆ ಸಾಲದ ಮೊತ್ತದ ಮೇಲೆ 0.40% ಉಳಿತಾಯ ಆಗುತ್ತದೆ.

ಇನ್ನು ಈಗಾಗಲೇ ಗೃಹ ಸಾಲ ಪಡೆದು, ಹದಿನೈದು ವರ್ಷಕ್ಕಿಂತ ಹೆಚ್ಚು ಬಾಕಿ ಅವಧಿ ಇದ್ದು, 7.50%ಗಿಂತ ಹೆಚ್ಚು ಬಡ್ಡಿ ಪಾವತಿಸುತ್ತಿದ್ದಲ್ಲಿ ಅಂಥವರು ತಮ್ಮ ಗೃಹ ಸಾಲವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ವರ್ಗಾವಣೆ ಮಾಡಬಹುದು. 30 ಲಕ್ಷ ರುಪಾಯಿ ಸಾಲಕ್ಕೆ (ಬಾಕಿ ಅಸಲು ಮೊತ್ತ), ಹದಿನೈದು ವರ್ಷದ ಬಾಕಿ ಅವಧಿ ಹಾಗೂ 7.50% ಬಡ್ಡಿ ದರಕ್ಕೆ ಸಾಲ ಪಡೆದವರು ಎಸ್ ಬಿಐಗೆ ವರ್ಗಾವಣೆ ಮಾಡುವ ಮೂಲಕ 1.52 ಲಕ್ಷ ರುಪಾಯಿಯನ್ನು ಉಳಿತಾಯ ಮಾಡಬಹುದು.

English summary

SBI Announces Special Offers on House Loans. Check Details in Kannada

India's leading bank State Bank Of India launched special housing loan offer. Three benefit to housing loan available to borrowers. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X