ಭಾರತದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶುಕ್ರವಾರ (ಜುಲೈ 31, 2020) ಆರ್ಥಿಕ ವರ್ಷ 2021ರ ಮೊದಲ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದೆ. ಕಳೆದ ವರ್ಷದ ಏಪ್ರಿಲ್ ನಿಂದ ಜೂನ್ ಕೊನೆ ಅವಧಿಯ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ ಈ ಬಾರಿ ಲಾಭ 81% ಹೆಚ್ಚಾಗಿದೆ. ನಿವ್ವಳ ಲಾಭ 4,189.3 ಕೋಟಿ ರುಪಾಯಿ ಮುಟ್ಟಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವ್ವಳ ಬಡ್ಡಿ ಆದಾಯ (NII) ಅಥವಾ ಬಡ್ಡಿ ಗಳಿಕೆ ಮತ್ತು ವೆಚ್ಚದ ನಡುವಿನ ವ್ಯತ್ಯಾಸವು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ 16% ಏರಿಕೆ ಆಗಿದೆ. 26,641.5 ಕೋಟಿ ರುಪಾಯಿ ಮುಟ್ಟಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಎಸ್ ಬಿಐ 2,312 ಕೋಟಿ ನಿವ್ವಳ ಲಾಭ ಗಳಿಸಿತ್ತು.
ಇನ್ನು ಎಸ್ ಬಿಐ ಒಟ್ಟಾರೆಯಾಗಿ ಮೀಸಲಿಟ್ಟಿರುವ ಹಣದ (ಪ್ರಾವಿಷನ್ಸ್) ಪ್ರಮಾಣ ಕಳೆದ ವರ್ಷಕ್ಕಿಂತ 36% ಹೆಚ್ಚಾಗಿದ್ದು, ಜೂನ್ ತ್ರೈಮಾಸಿಕದಲ್ಲಿ 12,501 ಕೋಟಿ ಮುಟ್ಟಿದೆ. ಬ್ಯಾಂಕ್ ನ ಇತರ ಆದಾಯ 0.7% ಇಳಿಕೆ ಆಗಿ, 7,957 ಕೋಟಿ ರುಪಾಯಿ ಮುಟ್ಟಿದೆ. ಈ ತ್ರೈಮಾಸಿಕದಲ್ಲಿ ಹೆಚ್ಚುವರಿ ಪ್ರಾವಿಷನ್ 1,836 ಕೋಟಿ ಇಡಲಾಗಿದೆ. ಒಟ್ಟಾರೆ 3008 ಕೋಟಿ ಎತ್ತಿಡಲಾಗಿದೆ.

ಎಸ್ ಬಿಐ ಒಟ್ಟಾರೆ ಠೇವಣಿ 16% ಏರಿಕೆಯಾಗಿ, 34.19 ಲಕ್ಷ ಕೋಟಿ ತಲುಪಿದೆ. ಒಟ್ಟಾರೆ ಸಾಲವು 7.6% ಹೆಚ್ಚಳ ಕಂಡು, 22.98 ಲಕ್ಷ ಕೋಟಿ ಮುಟ್ಟಿದೆ. ಮಧ್ಯಾಹ್ನ 3 ಗಂಟೆ ಹೊತ್ತಿಗೆ 3.11% ಏರಿಕೆ ದಾಖಲಿಸಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರು 192.35 ರುಪಾಯಿಗೆ ವಹಿವಾಟು ನಡೆಸಿತು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications