For Quick Alerts
ALLOW NOTIFICATIONS  
For Daily Alerts

ಎಸ್ ಬಿಐನಿಂದ ಬಿಲ್ಡರ್ ಗಳಿಗೆ, ಮನೆ ಖರೀದಿದಾರರಿಗೆ ನೆಮ್ಮದಿಯ ಸುದ್ದಿ

|

ಭಾರತದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಮನೆ ಖರೀದಿದಾರರಿಗೆ ಅತಿ ಮುಖ್ಯವಾದ ಸುದ್ದಿ ಹೊರಬಂದಿದೆ. ರೆಸಿಡೆನ್ಷಿಯಲ್ ಬಿಲ್ಡರ್ ಫೈನಾನ್ಸ್ ವಿಥ್ ಬೈಯರ್ ಗ್ಯಾರಂಟಿ (ಆರ್ ಬಿಬಿಜಿ) ಎಂಬ ಹೊಸ ಯೋಜನೆ ತಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲ ಪಡೆದ ಗೃಹ ಯೋಜನೆಗಳಿಗೆ (ರೆಸಿಡೆನ್ಷಿಯಲ್ ಪ್ರಾಜೆಕ್ಟ್) ಮತ್ತು ಗೃಹ ಸಾಲ ಪಡೆದವರಿಗೆ ಇದು ಅನ್ವಯಿಸುತ್ತದೆ.

 

ರೆಸಿಡೆನ್ಷಿಯಲ್ ಪ್ರಾಜೆಕ್ಟ್ ಗಳು ಸರಿಯಾದ ಸಮಯಕ್ಕೆ ಪೂರ್ಣಗೊಳ್ಳುವುದಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಗ್ಯಾರಂಟಿ ಆಗಿ ನಿಲ್ಲುತ್ತದೆ. ವಾಸ್ತವ್ಯ ಪ್ರಮಾಣಪತ್ರ ಸಿಗುವ ತನಕ ಈ ಖಾತ್ರಿ ದೊರೆಯುತ್ತದೆ. ಹೀಗೆ ಬ್ಯಾಂಕ್ ನಿಂದ ಖಾತ್ರಿ ನೀಡುವುದಕ್ಕೆ ಡೆವಲಪರ್ ಗೆ ಇಂತಿಷ್ಟು ಶುಲ್ಕ ಬೀಳುತ್ತದೆ.

 

ಈಗಾಗಲೇ ಅರ್ಧಕ್ಕೆ ನಿಂತಿರುವ ರೆಸಿಡೆನ್ಷಿಯಲ್ ಪ್ರಾಜೆಕ್ಟ್ ಗಳನ್ನು ಪೂರ್ಣಗೊಳಿಸುವ ಉದ್ದೇಶ ಕೂಡ ಈ ಯೋಜನೆಗೆ ಇದೆ. ಬ್ಯಾಂಕ್ ಅಧ್ಯಕ್ಷರಾದ ರಜನೀಶ್ ಕುಮಾರ್ ಮಾತನಾಡಿ, ಈ ಯೋಜನೆಯು ಎರಡೂವರೆ ಕೋಟಿ ರುಪಾಯಿ ತನಕದ ಮನೆಗೆ ಅನ್ವಯ ಆಗುತ್ತದೆ. ಮೊದಲಿಗೆ ಭಾರತದ ಹತ್ತು ನಗರಗಳಲ್ಲಿ ಆರಂಭವಾಗಲಿದ್ದು, ಆ ನಂತರ ಉಳಿದ ಕಡೆ ಶುರು ಮಾಡಲಿದ್ದೇವೆ ಎಂದಿದ್ದಾರೆ.

ಎಸ್ ಬಿಐನಿಂದ ಬಿಲ್ಡರ್ ಗಳಿಗೆ, ಮನೆ ಖರೀದಿದಾರರಿಗೆ ನೆಮ್ಮದಿಯ ಸುದ್ದಿ

ಈ ಗ್ಯಾರಂಟಿ ಯೋಜನೆ ಅಡಿಯಲ್ಲಿ ಪ್ರತಿಷ್ಠಿತ ಬಿಲ್ಡರ್ ಗಳು ಬ್ಯಾಂಕ್ ನ ಎಲ್ಲ ಮಾನದಂಡಗಳನ್ನು ಅನುಸರಿಸಿದರೆ ಅಂಥವರಿಗೆ ಐವತ್ತರಿಂದ ನಾನೂರು ಕೋಟಿ ತನಕ ಸಾಲ ದೊರೆಯುತ್ತದೆ. ಆಂದ ಹಾಗೆ ಸ್ಟಾರ್ ರೇಟಿಂಗ್ ಮತ್ತು ಸಿಬಿಲ್ ಸ್ಕೋರ್ ಗಮನಿಸಿಯೇ ಈ ಪ್ರಾಜೆಕ್ಟ್ ಗಳನ್ನು ಆಯ್ಕೆ ಮಾಡಲಾಗುತ್ತದೆ.

ಹೀಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವೇ ಬಿಲ್ಡರ್ ಗಳಿಗೆ ಗ್ಯಾರಂಟಿಯಾಗಿ ನಿಂತಾಗ ಖರೀದಿದಾರರು ಧೈರ್ಯವಾಗಿ ಮನೆ ಖರೀದಿಸಬಹುದು. ಅವರ ಹಣಕ್ಕೆ ಭದ್ರತೆ ಇರುತ್ತದೆ. ಜತೆಗೆ ಒತ್ತಡದಲ್ಲಿ ಇರುವ ರಿಯಲ್ ಎಸ್ಟೇಟ್ ವಲಯಕ್ಕೆ ಉತ್ತೇಜನ ನೀಡಿದಂತಾಗುತ್ತದೆ.

English summary

SBI New Scheme To Safeguard The Interest Of Home Buyers

India's leading bank SBI has introduced new scheme to safeguard interest of home buyers and builders. Here is the complete details.
Story first published: Thursday, January 9, 2020, 7:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X