For Quick Alerts
ALLOW NOTIFICATIONS  
For Daily Alerts

ಗಮನಿಸಿ: ಎಸ್‌ಬಿಐನ ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೇವೆ, ಎಟಿಎಂ ಸೇರಿ ಹಲವು ಸೇವೆ ಸ್ಥಗಿತ

|

ಎಲ್ಲಾ ಭಾರತೀಯ ಬ್ಯಾಂಕುಗಳು ತಮ್ಮ ಬ್ಯಾಂಕಿಂಗ್‌ ಸೇವೆಯನ್ನು ಸುಗಮವಾಗಿ ನಿರ್ವಹಣೆ ಮಾಡಬೇಕಾದರೆ ನಿಗದಿತವಾದ ನಿರ್ವಹಣಾ ಸೇವೆಯನ್ನು ಭರಿಸಬೇಕಾಗುತ್ತದೆ. ಈ ಮೂಲಕ ಬ್ಯಾಂಕುಗಳು ನೆಟ್‌ ಬ್ಯಾಂಕಿಂಗ್‌ ಅಥವಾ ಮೊಬೈಲ್‌ ಬ್ಯಾಂಕಿಂಗ್‌ ಸೇವೆಗಳು ದಿಢೀರನ್ನೆ ಸ್ಥಗಿತಗೊಳ್ಳುವುದನ್ನು ಹಾಗೂ ಯಾವುದೇ ರೀತಿಯ ವೈಫಲ್ಯವನ್ನು ತಡೆಯಲು ಸಹಕಾರಿ ಆಗಿದೆ.

ಈ ಸಂದರ್ಭದಲ್ಲಿ ಗ್ರಾಹಕರಿಗೆ ಒಂದು ನಿರ್ದಿಷ್ಟ ಸಮಯದ ಗಡುವು ನೀಡಿ ನಿರ್ವಹಣಾ ಕಾರ್ಯವನ್ನು ಬ್ಯಾಂಕುಗಳು ಮಾಡಬೇಕಾಗುತ್ತದೆ. ಇದು ಯಶಸ್ವಿಯಾದ ಬಳಿಕ ಬ್ಯಾಂಕಿಂಗ್‌ ಸೇವೆಯು ಪುನರ್‌ ಆರಂಭವಾಗುತ್ತದೆ.

ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಬಳಕೆದಾರರಿಗೆ ಮೆಗಾ ಫೆಸ್ಟಿವಲ್‌ ಆಫರ್‌ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಬಳಕೆದಾರರಿಗೆ ಮೆಗಾ ಫೆಸ್ಟಿವಲ್‌ ಆಫರ್‌

ಈ ಹಿನ್ನೆಲೆಯಿಂದಾಗಿ ತಮ್ಮ ನಿರ್ವಹಣಾ ಕಾರ್ಯದ ಬಗ್ಗೆ ಭಾರತದ ಅತೀ ದೊಡ್ಡ ಬ್ಯಾಂಕ್‌ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತಮ್ಮ ಗ್ರಾಹಕರಿಗೆ ಈ ಬಗ್ಗೆ ಈಗಲೇ ಎಚ್ಚರಿಕೆಯನ್ನು ನೀಡಿದೆ. ಈ ನಿರ್ವಹಣಾ ಕಾರ್ಯ ನಡೆಯುವ ಸಂದರ್ಭದಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೇವೆ, ಯೋನೋ, ಯೋನೋ ಲೈಟ್‌ ಹಾಗೂ ಯುಪಿಐ ಸೇವೆಯು ಈ ಸಂದರ್ಭದಲ್ಲಿ ನಿರ್ವಹಣೆ ಆಗುವುದಿಲ್ಲ ಎಂದು ಬ್ಯಾಂಕ್‌ ಟ್ವೀಟ್‌ನಲ್ಲಿ ತಿಳಿಸಿದೆ. ಹಾಗಾದರೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಬ್ಯಾಂಕಿಂಗ್‌ ಸೇವೆಗಳು ಯಾವಾಗ ಸ್ಥಗಿತವಾಗಲಿದೆ, ಇಲ್ಲಿದೆ ವಿವರ ಮುಂದೆ ಓದಿ.

ಗಮನಿಸಿ: ಎಸ್‌ಬಿಐನ ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೇವೆ ಸ್ಥಗಿತ

ಈ ಬಗ್ಗೆ ಟ್ವೀಟ್‌ ಮಾಡಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, "ನಮ್ಮ ಗೌರವಾನ್ವಿತ ಗ್ರಾಹಕರು ನಾವು ಇನ್ನೂ ಹೆಚ್ಚು ಗುಣಮಟ್ಟದ ಸೇವೆಯನ್ನು ನೀಡಲು ಬೇಕಾಗಿ ಕೈಗೊಳ್ಳಲಾಗುವ ನಿರ್ವಹಣಾ ಕಾರ್ಯಕ್ಕೆ ಸಹಕರಿಸಬೇಕು ಎಂದು ಮನವಿ ಮಾಡುತ್ತೇವೆ," ಎಂದು ಹೇಳಿದೆ.

"ನಮ್ಮ ಗ್ರಾಹಕರಿಗೆ ಅಧಿಕ ಸುರಕ್ಷೆಯನ್ನು ಒದಗಿಸುವ ನಿಟ್ಟಿನಲ್ಲಿ ನಾವು ನಮ್ಮ ವ್ಯವಸ್ಥೆಯನ್ನು ಅಪ್‌ಗ್ರೇಡ್‌ ಮಾಡುತ್ತಿದ್ದೇವೆ. ಇದು ಅಕ್ಟೋಬರ್‌ 10 ರಂದು ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಇಂಟರ್‌ನೆಟ್‌ ಬ್ಯಾಂಕಿಂಗ್‌, ಯೋನೋ, ಯೋನೋ ಲೈಟ್‌, ಯೋನೋ ಬಿಸ್‌ನೆಸ್‌, ಯುಪಿಐ, ಇ-ಪೇ, ಎಟಿಎಂ ಸೇವೆಯು ಸ್ಥಗಿತವಾಗುತ್ತದೆ," ಎಂದು ಮಾಹಿತಿ ನೀಡಿದೆ.

SBI ಇಂಟರ್ನೆಟ್ ಬ್ಯಾಂಕಿಂಗ್ ಸೇರಿದಂತೆ ಹಲವು ಸೇವೆಗಳಲ್ಲಿ ವ್ಯತ್ಯಯSBI ಇಂಟರ್ನೆಟ್ ಬ್ಯಾಂಕಿಂಗ್ ಸೇರಿದಂತೆ ಹಲವು ಸೇವೆಗಳಲ್ಲಿ ವ್ಯತ್ಯಯ

"ಈ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಮತ್ತು ನಮ್ಮೊಂದಿಗೆ ಸಹಕರಿಸಲು ನಮ್ಮ ಗ್ರಾಹಕರ ಬಳಿ ವಿನಂತಿ ಮಾಡುತ್ತೇವೆ," ಎಂದು ಕೂಡಾ ತಿಳಿಸಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ "ಪ್ರೀ ರಿವಾರ್ಡ್ ದೊರೆಯುವ ಆಫರ್‌ಗಳ ಬಗ್ಗೆ ಎಚ್ಚರವಾಗಿರಿ, ಧನ್ಯವಾದಗಳು," ಎಂದು ಕೂಡಾ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ಗ್ರಾಹಕರಿಗೆ ವಿನಂತಿ ಮಾಡಿದೆ.

ಕಳೆದ ತಿಂಗಳು ಕೂಡಾ ಎಸ್‌ಬಿಐ ಈ ಬಗ್ಗೆ ಎಚ್ಚರಿಕೆ ನೀಡಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಇಂಟರ್ನೆಟ್ ಬ್ಯಾಂಕಿಂಗ್ ಸೇರಿದಂತೆ ಹಲವು ಸೇವೆಗಳಲ್ಲಿ ವ್ಯತ್ಯಯವಾಗುವ ಕುರಿತು ಮಾಹಿತಿ ನೀಡಿತ್ತು. ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಸೆಪ್ಟೆಂಬರ್ 4 ಹಾಗೂ ಸೆಪ್ಟೆಂಬರ್ 5ರ ನಡುವೆ ಎಸ್‌ಬಿಐನ ವಿವಿಧ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿತ್ತು. ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಸೆಪ್ಟೆಂಬರ್ 4 ಹಾಗೂ ಸೆಪ್ಟೆಂಬರ್ 5ರ ನಡುವೆ ಎಸ್‌ಬಿಐನ ವಿವಿಧ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿತ್ತು.

English summary

SBI UPI, YONO & Internet Banking Services To Remain Shut On Oct 10: Here’s Why

SBI UPI, YONO & Internet Banking Services To Remain Shut On This day: Here’s Why. Read on.
Story first published: Sunday, October 10, 2021, 14:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X