For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಇಂಡಸ್ಟ್ರೀಸ್- ಫ್ಯೂಚರ್ ಸಮೂಹದ ವ್ಯವಹಾರಕ್ಕೆ ಸೆಬಿ ಸಮ್ಮತಿ

By ಅನಿಲ್ ಆಚಾರ್
|

ಫ್ಯೂಚರ್ ಸಮೂಹದ ಹೊಂದಾಣಿಕೆ ಯೋಜನೆ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಗೆ ಆಸ್ತಿ ಮಾರಾಟಕ್ಕೆ ಸೆಕ್ಯೂರಿಟೀಸ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಬುಧವಾರ ಸಮ್ಮತಿ ನೀಡಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿಯಲ್ಲಿ ತಿಳಿಸಿದೆ. ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಿಂದ ಈ ವ್ಯವಹಾರಕ್ಕೆ ಒಪ್ಪಿಗೆ ದೊರಕಿದ ಮೇಲೆ ಈ 24,713 ಕೋಟಿ ರುಪಾಯಿಯ ವ್ಯವಹಾರಕ್ಕೆ ಬಿಎಸ್ ಇಯಿಂದ ಕೂಡ "ಯಾವುದೇ ವ್ಯತಿರಿಕ್ತ ಪರಿಣಾಮ ಆಗಲ್ಲ" ಎಂಬ ವರದಿ ನೀಡಲಾಗಿದೆ.

ಸದ್ಯಕ್ಕೆ ಫ್ಯೂಚರ್ಸ್ ಸಮೂಹ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಮಧ್ಯದ ವ್ಯವಹಾರ ವ್ಯಾಜ್ಯ ದೆಹಲಿ ಹೈಕೋರ್ಟ್ ನಲ್ಲಿ ಬಾಕಿ ಇದೆ. ಜಾಗತಿಕ ಇ ಕಾಮರ್ಸ್ ಕಂಪೆನಿಯಾದ ಅಮೆಜಾನ್ ನಿಂದ ಫ್ಯೂಚರ್ ಹಾಗೂ ರಿಲಯನ್ಸ್ ಮಧ್ಯದ ವ್ಯವಹಾರಕ್ಕೆ ಆಕ್ಷೇಪ ವ್ಯಕ್ತವಾಗಿದೆ ಎಂಬುದನ್ನು ಷೇರುದಾರರು ಅಥವಾ ಎನ್ ಸಿಎಲ್ ಟಿ ಒಪ್ಪಿಗೆ ಪಡೆಯುವ ವೇಳೆ ನಿರ್ದಿಷ್ಟವಾಗಿ ಪ್ರಸ್ತಾವ ಮಾಡಬೇಕು ಎಂದು ಬಿಎಸ್ ಇ ಪತ್ರದಲ್ಲಿ ತಿಳಿಸಿದೆ.

"ಫ್ಯೂಚರ್- ರಿಲಯನ್ಸ್ ವ್ಯವಹಾರವನ್ನು ಅಮೆಜಾನ್ ಆಕ್ಷೇಪ ಸೆಬಿಗೆ ತಡೆಯಲ್ಲ"

ದೆಹಲಿ ಹೈಕೋರ್ಟ್ ಸೇರಿದಂತೆ ಇತರೆಡೆಯಿಂದ ಯಾವುದೇ ಆಕ್ಷೇಪ ಇಲ್ಲ ಎಂಬ ತೀರ್ಪು ಹೊರಬೀಳಬೇಕಾಗಿದೆ. ಕಳೆದ ಆಗಸ್ಟ್ ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನ ಅಂಗಸಂಸ್ಥೆಯಾದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಿಂದ ಫ್ಯೂಚರ್ ಗ್ರೂಪ್ ಗೆ ಸೇರಿದ ರೀಟೇಲ್, ಹೋಲ್ ಸೇಲ್ ಹಾಗೂ ಲಾಜಿಸ್ಟಿಕ್ಸ್ ವ್ಯವಹಾರವನ್ನು ರು. 24,713 ಕೋಟಿಗೆ ಖರೀದಿಸುವ ಮಾತಾಗಿತ್ತು.

ರಿಲಯನ್ಸ್ ಇಂಡಸ್ಟ್ರೀಸ್- ಫ್ಯೂಚರ್ ಸಮೂಹದ ವ್ಯವಹಾರಕ್ಕೆ ಸೆಬಿ ಸಮ್ಮತಿ

ಈ ಯೋಜನೆಯಲ್ಲಿ ಫ್ಯೂಚರ್ ಸಮೂಹದ ಆಯ್ದ ಕಂಪೆನಿಯನ್ನು ಮೊದಲಿಗೆ ಫ್ಯೂಚರ್ ಎಂಟರ್ ಪ್ರೈಸಸ್ ಲಿಮಿಟೆಡ್ ನಲ್ಲಿ ವಿಲೀನ ಮಾಡಬೇಕಿತ್ತು. ಈ ಖರೀದಿ ವ್ಯವಹಾರವು ಸೆಬಿ, ಸಿಸಿಐ, ಎನ್ ಸಿಎಲ್ ಟಿ, ಷೇರುದಾರರು, ಸಾಲ ನೀಡಿದವರು ಹಾಗೂ ಇತರ ಒಪ್ಪಿಗೆಗಳ ಮೇಲೆ ಆಧಾರ ಪಟ್ಟಿತ್ತು.

English summary

SEBI Cleared Future Group- Reliance Industries Rs 24713 Crore Deal

SEBI on Wednesday cleared Future group- Reliance Industries Rs 24,713 crore deal.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X