For Quick Alerts
ALLOW NOTIFICATIONS  
For Daily Alerts

ಷೇರು ಮಾರ್ಕೆಟ್ ಎತ್ತರದ ದಾಖಲೆಯೊಂದಿಗೆ ದಿನ- ವಾರಾಂತ್ಯ; ಮಾರುತಿ 449 ರು. ಏರಿಕೆ

|

ಮಾಹಿತಿ ತಂತ್ರಜ್ಞಾನ (ಐ.ಟಿ.) ಮತ್ತು ವಾಹನ ವಲಯದ ಷೇರುಗಳ ಗಳಿಕೆಯಿಂದ ಬೆಂಬಲ ಪಡೆದು, ಈಕ್ವಿಟಿ ಬೆಂಚ್ ಮಾರ್ಕ್ ಆದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕ ಶುಕ್ರವಾರ (ಜನವರಿ 8, 2021) ಭರ್ಜರಿ ಏರಿಕೆ ಕಂಡಿವೆ. ದಿನದ ವಹಿವಾಟಿನಲ್ಲಿ ನಿಫ್ಟಿ ಹೊಸ ದಾಖಲೆ ಎತ್ತರವಾದ 14,367.30 ಪಾಯಿಂಟ್ ಮತ್ತು ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆಯಾದ 48,854.21 ಪಾಯಿಂಟ್ ಅನ್ನು ಮುಟ್ಟಿತ್ತು.

ಸೆನ್ಸೆಕ್ಸ್ 689 ಪಾಯಿಂಟ್ ಗಳ ಏರಿಕೆ ಕಂಡು, 48,782.51 ಪಾಯಿಂಟ್ ನೊಂದಿಗೆ ದಿನದ ಕೊನೆಗೆ ವ್ಯವಹಾರ ಮುಗಿಸಿತು. ನಿಫ್ಟಿ 210 ಪಾಯಿಂಟ್ ಗಳ ಹೆಚ್ಚಳವನ್ನು ದಾಖಲಿಸಿ, 14,347.25 ಪಾಯಿಂಟ್ ನೊಂದಿಗೆ ವಹಿವಾಟು ಚುಕ್ತಾಗೊಳಿಸಿತು. ಮಿಡ್ ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಸೂಚ್ಯಂಕವು ಒಂದು ಪರ್ಸೆಂಟ್ ಗೂ ಹೆಚ್ಚು ಏರಿಕೆ ಕಂಡಿತು.

* ಜಾಗತಿಕ ಸಕಾರಾತ್ಮಕ ಪ್ರಭಾವ

* ಮೂರನೇ ತ್ರೈಮಾಸಿಕದ ಫಲಿತಾಂಶದ ಬಗ್ಗೆ ಭರವಸೆ

* ಆರ್ಥಿಕ ಚೇತರಿಕೆಯ ನಿರೀಕ್ಷೆ

* ಯು.ಎಸ್. ನಲ್ಲಿ ಜೋ ಬೈಡನ್ ಅಧ್ಯಕ್ಷೀಯ ಹುದ್ದೆಗೆ ಘೋಷಣೆಯಾದ ಸಕಾರಾತ್ಮಕ ಸುದ್ದಿ

* ಮಾಹಿತಿ ತಂತ್ರಜ್ಞಾನ (ಐ.ಟಿ), ವಾಹನ ವಲಯದ ಷೇರುಗಳಲ್ಲಿ ಬೆಲೆಗಳಲ್ಲಿ ಏರಿಕೆ

 ಸಾವಿರ ಗಡಿ ದಾಟಿದ ಬಿಟ್ ಕಾಯಿನ್; ಭಾರತದಲ್ಲಿ ಮೌಲ್ಯ ರು. 30 ಲಕ್ಷ ಸಾವಿರ ಗಡಿ ದಾಟಿದ ಬಿಟ್ ಕಾಯಿನ್; ಭಾರತದಲ್ಲಿ ಮೌಲ್ಯ ರು. 30 ಲಕ್ಷ

ಈ ಮೇಲ್ಕಂಡ ಐದು ಅಂಶಗಳು ಸೇರಿ ಷೇರು ಮಾರ್ಕೆಟ್ ಎತ್ತರಕ್ಕೆ ಏರಲು ಕಾರಣ ಆಯಿತು. ಇನ್ನು ಈ ದಿನ ನಿಫ್ಟಿಯಲ್ಲಿ ಏರಿಕೆ ಮತ್ತು ಇಳಿಕೆ ಕಂಡ ಪ್ರಮುಖ ಷೇರುಗಳಿವು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳಿವು
ಮಾರುತಿ ಸುಜುಕಿ

ವಿಪ್ರೋ

ಟೆಕ್ ಮಹೀಂದ್ರಾ

ಯುಪಿಎಲ್

ಐಷರ್ ಮೋಟಾರ್ಸ್

ಷೇರು ಪೇಟೆ ದಾಖಲೆಯೊಂದಿಗೆ ದಿನ, ವಾರಾಂತ್ಯ; ಮಾರುತಿ 449 ರು. ಏರಿಕೆ

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳಿವು
ಹಿಂಡಾಲ್ಕೋ

ಟಾಟಾ ಸ್ಟೀಲ್

ಇಂಡಸ್ ಇಂಡ್ ಬ್ಯಾಂಕ್

ಭಾರ್ತಿ ಏರ್ ಟೆಲ್

ಐಟಿಸಿ

English summary

Sensex, Nifty Ends Week And Day With Record High, Maruti Suzuki Top Gainer

Stock market index sensex and nifty ends with record high on January 8, 2021. Maruti Suzuki top gainer of the day. Here is the nifty top gainers and losers.
Story first published: Friday, January 8, 2021, 16:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X