ಸೆನ್ಸೆಕ್ಸ್, ನಿಫ್ಟಿ ಹೊಸ ದಾಖಲೆ; ಟಾಟಾ ಮೋಟಾರ್ಸ್ 6%ಗೂ ಹೆಚ್ಚು ಗಳಿಕೆ
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಬುಧವಾರ (ಜನವರಿ 20, 2021) ಮತ್ತೊಮ್ಮೆ ಸಾರ್ವಕಾಲಿಕ ದಾಖಲೆ ಬರೆದವು. ಸೆನ್ಸೆಕ್ಸ್ 393.83 ಪಾಯಿಂಟ್ ಮೇಲೇರಿ, 49,792.12 ಪಾಯಿಂಟ್ ನೊಂದಿಗೆ ದಿನಾಂತ್ಯದ ವಹಿವಾಟು ಮುಗಿಸಿತು. ಈ ದಿನ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 49,874.42 ಪಾಯಿಂಟ್ ತಲುಪಿತ್ತು. ಇನ್ನು ನಿಫ್ಟಿ 123.55 ಪಾಯಿಂಟ್ ಹೆಚ್ಚಳವಾಗಿ, 14,644.70 ಪಾಯಿಂಟ್ ನೊಂದಿಗೆ ವ್ಯವಹಾರ ಮುಗಿಸಿತು.
ಈ ದಿನದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 14,666.45 ಪಾಯಿಂಟ್ ಅನ್ನು ನಿಫ್ಟಿ ತಲುಪಿತ್ತು. ಎಲ್ಲ ವಲಯಗಳೂ ಏರಿಕೆಯೊಂದಿಗೆ ಮುಕ್ತಾಯ ಕಂಡವು. ಇನ್ಫರ್ಮೇಷನ್ ಟೆಕ್ನಾಲಜಿ ಹಾಗೂ ಪಿಎಸ್ ಯು ಬ್ಯಾಂಕ್ ತಲಾ 2% ಹೆಚ್ಚಳ ಆದವು. ಇನ್ನು ಬಿಎಸ್ ಇ ಮಿಡ್ ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ 0.6- 1 ಪರ್ಸೆಂಟ್ ಏರಿಕೆಯಾದವು.
ಹೋಮ್ ಫಸ್ಟ್ ಫೈನಾನ್ಸ್ ಕಂಪೆನಿ ಐಪಿಒ ಜ. 21ರಿಂದ 25
ಈ ದಿನದ ಷೇರು ಪೇಟೆ ವ್ಯವಹಾರದಲ್ಲಿ 1553 ಕಂಪೆನಿಯ ಷೇರುಗಳು ಏರಿಕೆ ಕಂಡರೆ, 1407 ಕಂಪೆನಿ ಷೇರುಗಳು ಇಳಿಕೆ ಕಂಡವು ಮತ್ತು 157 ಕಂಪೆನಿಯ ಷೇರುಗಳಲ್ಲಿ ಯಾವ ಬದಲಾವಣೆ ಆಗಲಿಲ್ಲ.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಪರ್ಸೆಂಟ್
ಟಾಟಾ ಮೋಟಾರ್ಸ್ 6.28%
ಅದಾನಿ ಪೋರ್ಟ್ಸ್ 4.84%
ವಿಪ್ರೋ 3.42%
ಮಾರುತಿ ಸುಜುಕಿ 2.81%
ಟೆಕ್ ಮಹೀಂದ್ರಾ 2.72%
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಪವರ್ ಗ್ರಿಡ್ ಕಾರ್ಪೊರೇಷನ್ -1.75%
ಶ್ರೀ ಸಿಮೆಂಟ್ಸ್ -1.62%
ಎನ್ ಟಿಪಿಸಿ -1.35%
ಗೇಲ್ -1.18%
ಎಸ್ ಬಿಐ ಲೈಫ್ ಇನ್ಷೂರೆನ್ಸ್ -0.85%