For Quick Alerts
ALLOW NOTIFICATIONS  
For Daily Alerts

ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಉಪಾಧ್ಯಕ್ಷ ಜೇ ವೈ. ಲೀಗೆ ಮೂರು ವರ್ಷ ಜೈಲು ಶಿಕ್ಷೆ

By ಅನಿಲ್ ಆಚಾರ್
|

ದಕ್ಷಿಣ ಕೊರಿಯಾದ ಕೋರ್ಟ್ ನಿಂದ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಉಪಾಧ್ಯಕ್ಷ ಜೇ ವೈ. ಲೀ ಅವರಿಗೆ ಎರಡೂವರೆ ವರ್ಷದ ಜೈಲು ಶಿಕ್ಷೆ ವಿಧಿಸಿ, ಸೋಮವಾರ ಆದೇಶ ನೀಡಿದೆ. ಈ ಬೆಳವಣಿಗೆಯಿಂದಾಗಿ ಟೆಕ್ ದೈತ್ಯ ಕಂಪೆನಿ ಸ್ಯಾಮ್ಸಂಗ್ ನಾಯಕತ್ವ ಹಾಗೂ ದೊಡ್ಡ ಉದ್ಯಮದ ಬಗ್ಗೆ ದಕ್ಷಿಣ ಕೊರಿಯಾಗೆ ಇರುವ ಆಲೋಚನೆ ಬಗ್ಗೆ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದೆ.

ಈ ಕೋರ್ಟ್ ಆದೇಶದೊಂದಿಗೆ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ನಲ್ಲಿನ ಪ್ರಮುಖ ನಿರ್ಧಾರದಿಂದ ಲೀ ಅವರನ್ನು ಪಕ್ಕಕ್ಕೆ ಸರಿಸಲಾಗುತ್ತದೆ. ಅಂದ ಹಾಗೆ ಪ್ರತಿಸ್ಪರ್ಧಿಗಳ ವಿರುದ್ಧ ಮೇಲುಗೈ ಸಾಧಿಸಲು ಸ್ಯಾಮ್ಸಂಗ್ ತೀವ್ರವಾಗಿ ಯತ್ನಿಸುತ್ತಿದೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಲೀ ಅವರ ತಂದೆ ಮೃತಪಟ್ಟಿದ್ದು, ಸ್ಯಾಮ್ಸಂಗ್ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದರು.

 

ಲಂಚ, ಬಹುಪತ್ನಿತ್ವ ಆರೋಪದಲ್ಲಿ ಮಾಜಿ ಬ್ಯಾಂಕರ್ ಗೆ ಚೀನಾದಲ್ಲಿ ಮರಣದಂಡನೆ

ಈ ಹಿಂದಿನ ಅಧ್ಯಕ್ಷ ಪಾರ್ಕ್ ಗುಯೆನ್- ಹೈ ಅವರ ಸಹವರ್ತಿಗೆ ಲಂಚ ನೀಡಿದ ಆರೋಪದಲ್ಲಿ 52 ವರ್ಷದ ಲೀ ಅವರಿಗೆ 2017ರಲ್ಲಿ ಐದು ವರ್ಷ ಶಿಕ್ಷೆ ಆಗಿತ್ತು. ಆದರೆ ತಾನೇನೂ ತಪ್ಪು ಮಾಡಿಲ್ಲ ಎಂದಿದ್ದರು. ಆ ನಂತರ ಮೇಲ್ಮನವಿ ಸಲ್ಲಿಸಿದ್ದರಿಂದ ಶಿಕ್ಷೆ ಇಳಿಕೆ ಮಾಡಿ, ಅರ್ಜಿ ಅಮಾನತು ಮಾಡಲಾಗಿತ್ತು. ಒಂದು ವರ್ಷ ಕಳೆದ ಮೇಲೆ ಲೀ ಅವರನ್ನು ಬಿಡುಗಡೆ ಮಾಡಲಾಗಿತ್ತು.

ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಉಪಾಧ್ಯಕ್ಷ ಜೇ ವೈ. ಲೀಗೆ 3 ವರ್ಷ ಜೈಲು

ಆ ನಂತರ ಸುಪ್ರೀಮ್ ಕೋರ್ಟ್ ನಿಂದ ಮತ್ತೆ ಸಿಯೋಲ್ ಕೋರ್ಟ್ ಗೆ ವಾಪಸ್ ಕಳುಹಿಸಲಾಯಿತು. ಅದೀಗ ಸೋಮವಾರ ಆದೇಶ ನೀಡಿದೆ. ದಕ್ಷಿಣ ಕೊರಿಯಾದ ಕಾನೂನು ಪ್ರಕಾರ, ಮೂರು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಶಿಕ್ಷೆಯನ್ನು ಮಾತ್ರ ಅಮಾನತು ಮಾಡಬಹುದು.

ದೀರ್ಘಾವಧಿ ಶಿಕ್ಷೆಗೆ ಅಧ್ಯಕ್ಷರ ಕ್ಷಮಾದಾನದ ಹೊರತು ಶಿಕ್ಷೆ ಅನುಭವಿಸಬೇಕು. ಈಗ ಲೀ ಮತ್ತೆ ಜೈಲು ಸೇರುತ್ತಾರೆ. ಈಗಾಗಲೇ ವಶದಲ್ಲಿ ಒಂದು ವರ್ಷವನ್ನು ಲೀ ಕಳೆದಿದ್ದು, ಬಾಕಿ ಅವಧಿಯನ್ನು ಜೈಲಿನಲ್ಲಿ ಕಳೆಯುವ ನಿರೀಕ್ಷೆ ಇದೆ.

ಸೋಮವಾರದಂದು ಬಂದ ಆದೇಶವನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಬಹುದು. ಆದರೆ ಇದರಿಂದ ಕಾನೂನು ವ್ಯಾಖ್ಯಾನದಲ್ಲಿ ಬದಲಾವಣೆ ಆಗಬಹುದೇ ವಿನಾ ಅದರಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಇಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯ ಪಡುತ್ತಾರೆ.

ಇತ್ತೀಚೆಗೆ ಚೀನಾದಲ್ಲಿ ಉದ್ಯಮಿಯೊಬ್ಬರ ವಿರುದ್ಧ ಭ್ರಷ್ಟಾಚಾರ ಹಾಗೂ ಬಹುಪತ್ನಿತ್ವದ ಆರೋಪದಲ್ಲಿ ಮರಣದಂಡನೆ ವಿಧಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

English summary

Seoul High Court Sentenced 30 Months Jail Term To Samsung Electronics Vice Chairman Jay Y. Lee

South Korea's Seoul high court sentenced 30 months jail term to Samsung's vice chairman Jay Y. Lee in bribing case.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X