For Quick Alerts
ALLOW NOTIFICATIONS  
For Daily Alerts

ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ

|

ಅದಾನಿ ಗ್ರೂಪ್ ಷೇರು ಮಾರುಕಟ್ಟೆಯಲ್ಲಿ ಹಲವಾರು ವಂಚನೆಗಳನ್ನು ಮಾಡಿದೆ ಎಂಬ ಬಗ್ಗೆ ಹಿಂಡನ್‌ಬರ್ಗ್ ವರದಿ ಮಾಡಿದ ಬಳಿಕ ಅದಾನಿ ಗ್ರೂಪ್‌ನಲ್ಲಿ ಹಲವಾರು ಬದಲಾವಣೆಗಳು ಉಂಟಾಗಿದೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಭಾರೀ ನಷ್ಟವನ್ನು ಕಂಡಿದೆ. ಈ ನಡುವೆ ಬ್ರಿಟಿಷ್ ಬ್ಯಾಂಕ್ ಸ್ಟಾಂಡರ್ಡ್ ಚಾರ್ಟೆಡ್ ಅದಾನಿ ಗ್ರೂಪ್‌ನ ಡಾಲರ್ ಬಾಂಡ್ ಮೇಲೆ ಸಾಲವನ್ನು ನೀಡುವುದನ್ನು ಸ್ಥಗಿತಗೊಳಿಸಿದದೆ ಎಂದು ವರದಿಯಾಗಿದೆ.

 

ಈ ಹಿಂದೆ ಹಲವಾರು ಬ್ಯಾಂಕ್‌ಗಳು ಅದಾನಿ ಗ್ರೂಪ್‌ನ ಡಾಲರ್‌ ಬಾಂಡ್ ಮೇಲೆ ಸಾಲವನ್ನು ನೀಡುವುದನ್ನು ನಿಲ್ಲಿಸಿದೆ. ಸ್ವಿಜ್ ಹೂಡಿಕೆ ಬ್ಯಾಂಕಿಂಗ್ ಸಂಸ್ಥೆ ಕ್ರೆಡಿಟ್ ಸ್ಯುಸ್ಸ್ ಮತ್ತು ಅಮೆರಿಕಾದ ಸಿಟಿಗ್ರೂಪ್ ಅದಾನಿ ಗ್ರೂಪ್‌ನ ಡಾಲರ್‌ ಬಾಂಡ್ ಮೇಲೆ ಸಾಲವನ್ನು ನೀಡದಿರಲು ನಿರ್ಧಾರ ಮಾಡಿದೆ.

 

ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ

ಸಾಲಕ್ಕಾಗಿ ಅದಾನಿ ಗ್ರೂಪ್ ಸಂಸ್ಥೆಯ ಬಾಂಡ್‌ಗಳನ್ನು ಮೇಲಾಧಾರವಾಗಿ ಪಡೆದುಕೊಳ್ಳಬಾರದು ಎಂದು ಬ್ಯಾಂಕ್‌ಗೆ ಖಾಸಗಿ ಕ್ಲೈಂಟ್‌ಗಳು ತಿಳಿಸಿದ್ದಾರೆ. ಸಿಂಗಾಪುರದಲ್ಲಿ ಈ ಬೆಳವಣಿಗೆ ಕಂಡು ಬಂದಿದೆ ಎಂದು ಸ್ಟಾಡರ್ಡ್ ಚಾರ್ಟೆಡ್‌ನ ಸಿಬ್ಬಂದಿಗಳು ಮಾಹಿತಿ ನೀಡಿರುವುದಾಗಿ ಮಾಧ್ಯಮಗಳ ವರದಿ ಉಲ್ಲೇಖ ಮಾಡಿದೆ.

ಅದಾನಿ ಡಾಲರ್ ಬಾಂಡ್ ಮೇಲೆ ಸಾಲಕ್ಕೆ  ಸ್ಟಾಡರ್ಡ್ ಚಾರ್ಟೆಡ್ ನಕಾರ

ಅಧಿಕಾರಿಗಳು ಹೇಳಿರುವುದು ಏನು?

ಇನ್ನು ಈ ಬೆಳವಣಿಗೆ ಬಗ್ಗೆ ಮಾಹಿತಿ ತಿಳಿದಿರುವ ಅಧಿಕಾರಿಯೊಬ್ಬರು, "ಅದಾನಿ ಗ್ರೂಪ್ ಸ್ಟಾಕ್‌ಗಳು ನಿರಂತರವಾಗಿ ಇಳಿಯುತ್ತಿದೆ. ಆದ್ದರಿಂದಾಗಿ ಅದರ ಬಾಂಡ್ ಮೇಲಾಧಾರವಾಗಿ ಸಾಲವನ್ನು ನೀಡುವುದನ್ನು ನಿಲ್ಲಿಸಲಾಗಿದೆ. ಈ ಸೆಕ್ಯೂರಿಟಿಗಳಿಗೆ ಸ್ಟಾನ್‌ಚಾರ್ಟ್‌ ಕೂಡಾ ಕೊಂಚ ಸಾಲವನ್ನು ನೀಡಿದೆ. ಇದು ಬ್ಯಾಂಕ್‌ಗಳಿಗೆ ಬರಿ ಒಂದು ಸಣ್ಣ ವಿಚಾರವೇನಲ್ಲ. ಆದರೆ ಬ್ಯಾಂಕ್‌ಗಳ ರಕ್ಷಣೆಗಾಗಿ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ," ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಈಗಾಗಲೇ ಹಲವಾರು ಬ್ಯಾಂಕ್‌ಗಳು ಅದಾನಿ ಗ್ರೂಪ್‌ಗೆ ಎಷ್ಟು ಸಾಲವನ್ನು ನೀಡಲಾಗಿದೆ ಎಂಬ ಮಾಹಿತಿ ನೀಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯಾವುದೇ ಆತಂಕದ ಸ್ಥಿತಿ ಇಲ್ಲ, ಬ್ಯಾಂಕ್‌ಗಳು ನಿಯಮಕ್ಕೆ ಅನುಗುಣವಾಗಿ ಸಾಲವನ್ನು ನೀಡಿದೆ ಎಂದು ಹೇಳಿದ್ದಾರೆ. ಹಾಗೆಯೇ ಸೆಬಿಯು ಕೂಡಾ ತನ್ನ ಕಾರ್ಯವನ್ನು ಮಾಡುತ್ತದೆ ಎಂದಿದ್ದಾರೆ.

ಏನಿದು ಹಿಂಡನ್‌ಬರ್ಗ್ ವರದಿ?

ತನಿಖಾ ಸಂಸ್ಥೆ ಹಿಂಡೆನ್‌ಬರ್ಗ್ ಅದಾನಿ ಗ್ರೂಪ್‌ ವಿರುದ್ಧ ಭಾರೀ ವಂಚನೆ ಆರೋಪ ಮಾಡಿದೆ. ಲೆಕ್ಕಪತ್ರ ವಂಚನೆಯಲ್ಲಿ ಹಾಗೂ ಸ್ಟಾಕ್ ಮ್ಯಾನಿಪ್ಯುಲೇಷನ್‌ನಲ್ಲಿ ಅದಾನಿ ಗ್ರೂಪ್‌ ಭಾಗವಹಿಸಿದೆ ಎಂದು ಹಿಂಡೆನ್‌ಬರ್ಗ್ ತನಿಖಾ ವರದಿ ಹೇಳಿದೆ. ಅದಾನಿ ಗ್ರೂಪ್ ವಿರುದ್ಧ ಮನಿ ಲಾಂಡರಿಂಗ್, ತೆರಿಗೆ ಡಾಲರ್ ಕಳ್ಳತನ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಕೂಡ ಹಿಂಡನ್‌ಬರ್ಗ್ ತನಿಖಾ ವರದಿ ಮಾಡಿದೆ. ಅದಾನಿ ಕುಟುಂಬದ ಸದಸ್ಯರು ಹಾಗೂ ಕಂಪನಿಗೆ ಸಂಬಂಧಿಸಿದ ಅಧಿಕಾರಿಗಳು ಮಾರಿಷಸ್, ಯುಎಇ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ಕಡಲಾಚೆಯ ಶೆಲ್ ಘಟಕಗಳನ್ನು ರಚಿಸಲು ಸಹಕರಿಸಿದ್ದಾರೆ. ನಕಲಿ ಅಥವಾ ಕಾನೂನುಬಾಹಿರ ವಹಿವಾಟು ಮತ್ತು ಲಿಸ್ಟೆಡ್ ಕಂಪನಿಗಳಿಂದ ಹಣವನ್ನು ಪಡೆಯುವ ಪ್ರಯತ್ನ ಮಾಡಿದ್ದಾರೆ. ನಕಲಿ ಆಮದು/ರಫ್ತು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಹಿಂಡೆನ್‌ಬರ್ಗ್ ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ. ಷೇರು ಮಾರುಕಟ್ಟೆಯಲ್ಲಿ ನಕಲಿ ಷೇರುಗಳ ಸೃಷ್ಟಿ ಮಾಡಲಾಗಿದೆ ಎಂದು ಹೇಳಲಾಗಿದೆ.

English summary

Standard Chartered Joins List Of Banks That Stopped Lending Against Adani Dollar Bonds says report

Challenges continued for Gautam Adani-led Adani Group. Standard Chartered Joins List Of Banks That Stopped Lending Against Adani Dollar Bonds says report.
Story first published: Monday, February 6, 2023, 11:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X