For Quick Alerts
ALLOW NOTIFICATIONS  
For Daily Alerts

ತನ್ನ 20 ಲಕ್ಷ ಗ್ರಾಹಕರಿಗೆ ಮಹತ್ವದ ಸೂಚನೆ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

|

ನವದೆಹಲಿ, ಜೂನ್ 23: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಖಾತೆದಾರರಿಗೆ, ಬರುವ ದಿನಗಳಲ್ಲಿ ಸಂಭವನೀಯ ಸೈಬರ್ ದಾಳಿಯ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.

 

ದಾಳಿಯ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ನೀಡಿ ಎಸ್‌ಬಿಐ ಟ್ವೀಟ್ ಮಾಡಿದೆ. ಭಾರತದ ಪ್ರಮುಖ ನಗರಗಳಲ್ಲಿ ಸೈಬರ್ ದಾಳಿ ನಡೆಯಲಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ ಎಂದು ಎಸ್‌ಬಿಐ ಹೇಳಿದೆ.

EMI ಮುಂದೂಡಿಕೆ ಅವಧಿ: ಬಡ್ಡಿ ಮನ್ನಾ ಮಾಡಲ್ಲ ಎಂದ ಎಸ್‌ಬಿಐEMI ಮುಂದೂಡಿಕೆ ಅವಧಿ: ಬಡ್ಡಿ ಮನ್ನಾ ಮಾಡಲ್ಲ ಎಂದ ಎಸ್‌ಬಿಐ

ಉಚಿತ COVID-19 ಪರೀಕ್ಷೆಯ ವಿಷಯದೊಂದಿಗೆ [email protected] ನಿಂದ ಬರುವ ಇಮೇಲ್‌ಗಳನ್ನು ಕ್ಲಿಕ್ ಮಾಡುವುದರಿಂದ ದಯವಿಟ್ಟು ದೂರವಿರಿ ಎಂದು ಎಚ್ಚರಿಕೆಯ ಸಂದೇಶವನ್ನು ವ್ಯಾಪಕವಾಗಿ ಪ್ರಸಾರ ಮಾಡಿರುವುದು ಗ್ರಾಹಕರಲ್ಲಿ ಆತಂಕ ಹುಟ್ಟಿಹಾಕಿದೆ.

ಲಕ್ಷಾಂತರ ಭಾರತೀಯರನ್ನು ಗುರಿಯಾಗಿಸಬಹುದು

ಈ ಪ್ರಮುಖ ಸೈಬರ್ ದಾಳಿಯಲ್ಲಿ, ನಕಲಿ ಇಮೇಲ್‌ಗಳು, ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಅಥವಾ ಟೆಕ್ಸ್ಟ್ ಸಂದೇಶಗಳಿಂದ ಲಕ್ಷಾಂತರ ಭಾರತೀಯರನ್ನು ಗುರಿಯಾಗಿಸಬಹುದು ಎಂದು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ಭಾನುವಾರ ಎಚ್ಚರಿಸಿರುವ ಬೆನ್ನಲ್ಲೇ ಎಸ್‌ಬಿಐ ಈ ಮಹತ್ವದ ಹೇಳಿಕೆ ನೀಡಿದೆ.

20 ಲಕ್ಷ ಗ್ರಾಹಕರಿಗೆ ಎಸ್‌ಬಿಐ ಅಲರ್ಟ್ ಸಂದೇಶ

20 ಲಕ್ಷ ಗ್ರಾಹಕರಿಗೆ ಎಸ್‌ಬಿಐ ಅಲರ್ಟ್ ಸಂದೇಶ

ಸುಮಾರು 20 ಲಕ್ಷ ಗ್ರಾಹಕರಿಗೆ ಎಸ್‌ಬಿಐ ಅಲರ್ಟ್ ಸಂದೇಶ ಕಳುಹಿಸಿದ್ದು, ಪ್ರಮುಖವಾಗಿ ದೆಹಲಿ, ಮುಂಬೈ, ಬೆಂಗಳೂರು, ಅಹಮದಾಬಾದ್, ಹೈದರಾಬಾದ್, ಚೆನ್ನೈ ಸೇರಿದಂತೆ ಪ್ರಮುಖ ನಗರಗಳ ಗ್ರಾಹಕರು ಗುರಿಯಾಗುವ ಸಾಧ್ಯತೆ ಇದೆ ಎಂದು ಎಸ್‌ಬಿಐ ಎಚ್ಚರಿಕೆ ನೀಡಿ ಸಂದೇಶ ರವಾನಿಸಿದೆ.

20 ಲಕ್ಷ ಗ್ರಾಹಕರಿಗೆ ಎಸ್‌ಬಿಐ ಅಲರ್ಟ್ ಸಂದೇಶ
 

20 ಲಕ್ಷ ಗ್ರಾಹಕರಿಗೆ ಎಸ್‌ಬಿಐ ಅಲರ್ಟ್ ಸಂದೇಶ

ಸುಮಾರು 20 ಲಕ್ಷ ಗ್ರಾಹಕರಿಗೆ ಎಸ್‌ಬಿಐ ಅಲರ್ಟ್ ಸಂದೇಶ ಕಳುಹಿಸಿದ್ದು, ಪ್ರಮುಖವಾಗಿ ದೆಹಲಿ, ಮುಂಬೈ, ಬೆಂಗಳೂರು, ಅಹಮದಾಬಾದ್, ಹೈದರಾಬಾದ್, ಚೆನ್ನೈ ಸೇರಿದಂತೆ ಪ್ರಮುಖ ನಗರಗಳ ಗ್ರಾಹಕರು ಗುರಿಯಾಗುವ ಸಾಧ್ಯತೆ ಇದೆ ಎಂದು ಎಸ್‌ಬಿಐ ಎಚ್ಚರಿಕೆ ನೀಡಿ ಸಂದೇಶ ರವಾನಿಸಿದೆ.

ಇಮೇಲ್‌ಗಳನ್ನು ತೆರೆಯಬೇಡಿ

ಇಮೇಲ್‌ಗಳನ್ನು ತೆರೆಯಬೇಡಿ

ಸೈಬರ್ ಅಪರಾಧಿಗಳು 20 ಲಕ್ಷ ನಾಗರಿಕರ ವೈಯಕ್ತಿ ಇಮೇಲ್ ಐಡಿಗಳನ್ನು ಹೊಂದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗಾಗಿ ಅಪೇಕ್ಷಿಸದ ಇಮೇಲ್‌ಗಳನ್ನು ತೆರೆಯಬೇಡಿ ಮತ್ತು ಅಪೇಕ್ಷಿಸದ ಇಮೇಲ್‌ನಲ್ಲಿರುವ URL ಅನ್ನು ಎಂದಿಗೂ ಕ್ಲಿಕ್ ಮಾಡಬೇಡಿ ಎಂದು ಎಸ್‌ಬಿಐ ಎಚ್ಚರಿಕೆ ನೀಡಿದೆ.

English summary

State Bank of India Warns 20 Lakh Users of Cyber Attacks

SBI Warns To 20 Lakh SBI Customers About Expected Cyber Attack.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X