For Quick Alerts
ALLOW NOTIFICATIONS  
For Daily Alerts

3 ಟ್ರೇಡಿಂಗ್ ಸೆಷನ್ ನಲ್ಲಿ ಷೇರುಪೇಟೆ ಹೂಡಿಕೆದಾರರ ಸಂಪತ್ತು 6.39 ಲಕ್ಷ ಕೋಟಿ ರು. ಹೆಚ್ಚಳ

|

ಕ್ರಿಸ್ ಮಸ್ ಕಾರಣದಿಂದ ಶುಕ್ರವಾರ (ಡಿಸೆಂಬರ್ 25, 2020) ಷೇರು ಮಾರುಕಟ್ಟೆ ರಜಾ. ಈ ವಾರ ಷೇರು ಪೇಟೆ ಕಾರ್ಯ ನಿರ್ವಹಣೆ ಮಾಡಿದ್ದು ನಾಲ್ಕೇ ದಿನ. ಆ ಪೈಕಿ ಸೋಮವಾರ (ಡಿಸೆಂಬರ್ 21, 2020) 1500 ಪಾಯಿಂಟ್ ಹಾಗೂ ನಿಫ್ಟಿ 461 ಪಾಯಿಂಟ್ ಗಳ ಇಳಿಕೆ ಕಂಡಿತು.

ಈ ಷೇರಿನ ಮೇಲೆ ಹೂಡಿದ್ದ ರು. 10,000 ಒಂದು ವರ್ಷದಲ್ಲಿ ರು. 1,30,000ಈ ಷೇರಿನ ಮೇಲೆ ಹೂಡಿದ್ದ ರು. 10,000 ಒಂದು ವರ್ಷದಲ್ಲಿ ರು. 1,30,000

ಆದರೆ, ನಂತರದ ಮೂರು ಟ್ರೇಡಿಂಗ್ ಸೆಷನ್ ನಲ್ಲಿ ಚೇತರಿಸಿಕೊಂಡ ಸೆನ್ಸೆಕ್ಸ್ ಗುರುವಾರ (ಡಿಸೆಂಬರ್ 24, 2020) 46,971 ಪಾಯಿಂಟ್ ಹಾಗೂ ನಿಫ್ಟಿ 13,749 ಪಾಯಿಂಟ್ ನೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ. ಸೋಮವಾರದಂದು ಭಾರೀ ಇಳಿಕೆ ಕಂಡರೂ ಫಾರಿನ್ ಇನ್ ಸ್ಟಿಟ್ಯೂಷನ್ ಇನ್ವೆಸ್ಟರ್ಸ್ (FII) ಭಾರತದ ಮಾರುಕಟ್ಟೆಯಿಂದೇನೂ ಹೊರ ಹೋಗಲಿಲ್ಲ.

ಡಿಸೆಂಬರ್ ನಲ್ಲಿ ಎಫ್ ಐಐ ಹೂಡಿಕೆ 62,648 ಕೋಟಿ ರು.

ಡಿಸೆಂಬರ್ ನಲ್ಲಿ ಎಫ್ ಐಐ ಹೂಡಿಕೆ 62,648 ಕೋಟಿ ರು.

ಸೋಮವಾರದ ದಿನ 323 ಕೋಟಿ ರುಪಾಯಿ ಹಿಂಪಡೆದರೂ ಆ ನಂತರದ ಮೂರು ಟ್ರೇಡಿಂಗ್ ಸೆಷನ್ ನಲ್ಲಿ ಎಫ್ ಐಐ ನಿವ್ವಳ ಖರೀದಿ 2915 ಕೋಟಿ ರುಪಾಯಿಯಷ್ಟಾಗಿದೆ. ಇದರೊಂದಿಗೆ ಡಿಸೆಂಬರ್ ನಲ್ಲಿ ಈ ವರೆಗೆ ದೇಶೀಯ ಈಕ್ವಿಟಿ ಮತ್ತು ಡೆಟ್ ನಲ್ಲಿ 62,648 ಕೋಟಿ ರುಪಾಯಿ ಹೂಡಿಕೆ ಮಾಡಿದಂತಾಗಿದೆ. ನವೆಂಬರ್ ನಲ್ಲಿ ಎಫ್ ಐಐ ಹೂಡಿಕೆ 62,782 ಕೋಟಿ ರು. ಆಗಿತ್ತು.

ಹೂಡಿಕೆದಾರರ ಸಂಪತ್ತು 6.39 ಲಕ್ಷ ಕೋಟಿ ರುಪಾಯಿ ಹೆಚ್ಚಳ

ಹೂಡಿಕೆದಾರರ ಸಂಪತ್ತು 6.39 ಲಕ್ಷ ಕೋಟಿ ರುಪಾಯಿ ಹೆಚ್ಚಳ

ಅಂದ ಹಾಗೆ ಸೋಮವಾರ ಭಾರೀ ಕುಸಿತ ಅಯಿತಲ್ಲ ಅದರಿಂದ ಮಾರುಕಟ್ಟೆ ಬಂಡವಾಳ 185.38 ಲಕ್ಷ ಕೋಟಿ ರುಪಾಯಿಯಿಂದ 178.79 ಲಕ್ಷ ಕೋಟಿ ರುಪಾಯಿಗೆ ಕುಸಿಯಿತು. ಆ ನಂತರ ಗೂಳಿ ಓಟ ಮತ್ತೆ ಶುರುವಾಗಿ, ಚೇತರಿಸಿಕೊಂಡ ಮಾರ್ಕೆಟ್ ನಿಂದಾಗಿ ಹೂಡಿಕೆದಾರರ ಸಂಪತ್ತು 6.39 ಲಕ್ಷ ಕೋಟಿ ರುಪಾಯಿ ಹೆಚ್ಚಾಗಿ, ಮೂರೇ ಟ್ರೇಡಿಂಗ್ ಸೆಷನ್ ನಲ್ಲಿ ಮಾರುಕಟ್ಟೆ ಬಂಡವಾಳ ಮೌಲ್ಯ 185.18 ಲಕ್ಷ ಕೋಟಿ ತಲುಪಿತು.

ಮಿಂಚು ಹರಿಸಿದವು ಐ.ಟಿ. ಷೇರುಗಳು

ಮಿಂಚು ಹರಿಸಿದವು ಐ.ಟಿ. ಷೇರುಗಳು

ಬಿಎಸ್ ಇ ಸೆನ್ಸೆಕ್ಸ್ ಮೂವತ್ತು ಷೇರುಗಳ ಗುಚ್ಛದಲ್ಲಿ ಇನ್ಫರ್ಮೇಷನ್ ಟೆಕ್ನಾಲಜಿ ವಲಯದ ಷೇರುಗಳು ಮಿಂಚಿದವು. ಸೆನ್ಸೆಕ್ಸ್ ನಲ್ಲಿ ಇನ್ಫೋಸಿಸ್ ಟಾಪ್ ಗೇಯ್ನರ್ ಎನಿಸಿಕೊಂಡಿತು. ಅದರ ಬೆನ್ನಿಗೆ ಎಚ್ ಸಿಎಲ್ ಟೆಕ್ನಾಲಜೀಸ್ ನಿಂತಿತು. ಅವೆರಕ್ಕೆ ಬೆಂಬಲ ಎನ್ನುವಂತೆ ಹಿಂದೂಸ್ತಾನ್ ಯುನಿಲಿವರ್, ಸನ್ ಫಾರ್ಮಾ, ಬಜಾಜ್ ಆಟೋ ಹಾಗೂ ಏಷ್ಯನ್ ಪೇಂಟ್ಸ್ ಕೂಡ ಉತ್ತಮ ಗಳಿಕೆ ಕಂಡವು.

ತಡೆಯಾಗಿ ನಿಂತದ್ದು ಇಂಡಸ್ ಇಂಡ್ ಬ್ಯಾಂಕ್

ತಡೆಯಾಗಿ ನಿಂತದ್ದು ಇಂಡಸ್ ಇಂಡ್ ಬ್ಯಾಂಕ್

ಆದರೆ, ಈ ವಾರ ಸೆನ್ಸೆಕ್ಸ್ ಹಿನ್ನಡೆಗೆ ದೊಡ್ಡ ಮಟ್ಟಕ್ಕೆ ಕಾರಣ ಆಗಿದ್ದು ಇಂಡಸ್ ಇಂಡ್ ಬ್ಯಾಂಕ್. ಅದಕ್ಕೆ ಸಾಥ್ ನೀಡಿದ್ದು ಒಎನ್ ಜಿಸಿ, ಎನ್ ಟಿಪಿಸಿ ಮತ್ತು ಬಜಾಜ್ ಫಿನ್ ಸರ್ವ್. ಒಟ್ಟಾರೆಯಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ವಾರಾಂತ್ಯವನ್ನು ಗಳಿಕೆಯಲ್ಲೇ ಮುಗಿಸಿದೆ. ಆದರೆ ಕಳೆದ ವಾರಾಂತ್ಯದ ಮಟ್ಟಕ್ಕೆ ಹೋಲಿಸಿದಲ್ಲಿ 1% ಇಳಿಕೆ ಆಗಿದೆ.

English summary

Stock Market Investors Wealth Increased By Rs 6.39 Lakh Crores In 3 Trading Sessions

Share market investors wealth of Rs 6.39 lakh crore increased in 3 trading session between December 22 to 24.
Story first published: Friday, December 25, 2020, 13:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X