For Quick Alerts
ALLOW NOTIFICATIONS  
For Daily Alerts

ಕಾಫೀ ಡೇ ವೆಂಡಿಂಗ್ ಮಶೀನ್ ವ್ಯವಹಾರ ಖರೀದಿ ಸಾಲಿನಲ್ಲಿ ಟಾಟಾ, ಜುಬಿಲಿಯಂಟ್

|

ಕಾಫೀ ಡೇ ಸಮೂಹದ ವೆಂಡಿಂಗ್ ಮಶೀನ್ ವ್ಯವಹಾರದ ಖರೀದಿಗಾಗಿ ಟಾಟಾ ಸಮೂಹ ಹಾಗೂ ಜುಬಿಲಿಯಂಟ್ ಫುಡ್ ವರ್ಕ್ಸ್ ಕಣ್ಣಿಟ್ಟಿವೆ ಎಂದು ಈ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ. ಕಾಫೀ ಡೇ ಸಮೂಹದ ವ್ಯವಹಾರಕ್ಕಾಗಿ 2000 ಕೋಟಿ ರುಪಾಯಿ ಅಗತ್ಯ ಇದೆ. ಇದು ಮಾರ್ಕೀ ಜಾಗತಿಕ ಖಾಸಗಿ ಈಕ್ವಿಟಿ ಫಂಡ್ ಆಸಕ್ತಿಯನ್ನು ಸಹ ಸೆಳೆದುಕೊಂಡಿದೆ.

ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಮೂಲಕ ಈ ವ್ಯವಹಾರ ಮಾಡಲು ಟಾಟಾ ಗ್ರೂಪ್ ಮುಂದಾಗಿದೆ. ಟಾಟಾ ಸಮೂಹದ ಪೈಕಿಯೇ ಮೂರನೇ ಅತ್ಯಂತ ಮೌಲ್ಯಯುತ ಕಂಪೆನಿ ಇದು. ಅಂದ ಹಾಗೆ ಈ ವ್ಯವಹಾರದಲ್ಲಿ ವಾರ್ ಬರ್ಗ್ ಪಿನಾಕಸ್, ಗೋಲ್ಡ್ ಮನ್ ಸ್ಯಾಚ್ಸ್ ಮತ್ತು ಬ್ಲ್ಯಾಕ್ ಸ್ಟೋನ್ ಕೂಡ ಆಸಕ್ತಿ ಹೊಂದಿವೆ ಎಂದು ಮೂಲಗಳು ತಿಳಿಸಿವೆ.

ಯಾವುದೇ ವ್ಯವಹಾರವು ಏಪ್ರಿಲ್ 1, 2020ರಂದು ಘೋಷಿಸಿದಂತೆ, ಭಾರತದಲ್ಲಿ ಗುರಿ ಹಾಕಿಕೊಳ್ಳಲಾದ 32.6 ಬಿಲಿಯನ್ ಅಮೆರಿಕನ್ ಡಾಲರ್ ವಿಲೀನ ಹಾಗೂ ಖರೀದಿ ವ್ಯವಹಾರಕ್ಕೆ ಸೇರಿಕೊಳ್ಳುತ್ತದೆ ಎಂದು ರೆಫಿನಿಟಿವ್ ದತ್ತಾಂಶದಿಂದ ತಿಳಿದುಬರುತ್ತದೆ.

ಬೆಂಗಳೂರಿನ ಕಾಫಿ ಡೇ ಟೆಕ್‌ ಪಾರ್ಕ್ ಸ್ವಾಧೀನಕ್ಕೆ ಮುಂದಾದ ಬ್ಲ್ಯಾಕ್‌ ಸ್ಟೋನ್ಬೆಂಗಳೂರಿನ ಕಾಫಿ ಡೇ ಟೆಕ್‌ ಪಾರ್ಕ್ ಸ್ವಾಧೀನಕ್ಕೆ ಮುಂದಾದ ಬ್ಲ್ಯಾಕ್‌ ಸ್ಟೋನ್

ಟಾಟಾ ಕನ್ಸ್ಯೂಮರ್ ವಕ್ತಾರೆ ಮಾತನಾಡಿ, ಸದ್ಯದ ಸ್ಥಿತಿಯಲ್ಲಿ ವಿವಿಧ ಅವಕಾಶಗಳ ಮೌಲ್ಯಮಾಪನ ಮಾಡುತ್ತಿದ್ದೇವೆ ಹಾಗೂ ಈ ಬಗ್ಗೆ ಬೇರೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಇನ್ನು ಜುಬಿಲಿಯಂಟ್ ಫುಡ್ ವರ್ಕ್ಸ್ ನಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಾಫೀ ಡೇ ವೆಂಡಿಂಗ್ ಮಶೀನ್ ವ್ಯವಹಾರ ಖರೀದಿ ಸಾಲಿನಲ್ಲಿ ಟಾಟಾ

ಬ್ಲ್ಯಾಕ್ ಸ್ಟೋನ್ ನಿಂದ 2700 ಕೋಟಿ ರುಪಾಯಿಗೆ ಖರೀದಿ
ಈ ವರ್ಷದ ಆರಂಭದಲ್ಲಿ ಬ್ಲ್ಯಾಕ್ ಸ್ಟೋನ್ ಸ್ಥಳೀಯ ರಿಯಲ್ ಎಸ್ಟೇಟ್ ಡೆವಲಪರ್ ಜತೆ ಸೇರಿ ಬೆಂಗಳೂರಿನಲ್ಲಿ ಕಾಫೀ ಡೇ ಸಮೂಹಕ್ಕೆ ಸೇರಿದ ಆಫೀಸ್ ಪಾರ್ಕ್ ಅನ್ನು 2700 ಕೋಟಿ ರುಪಾಯಿಗೆ ಖರೀದಿಸಿತ್ತು. ಈಗ ವೆಂಡಿಂಗ್ ಮಶೀನ್ ವ್ಯವಹಾರವು ಕಾಫೀ ಡೇ ಗ್ಲೋಬಲ್ ಅಡಿಯಲ್ಲಿದೆ. ಲಿಸ್ಟ್ ಆಗಿರುವ ಕಾಫೀ ಡೇ ಎಂಟರ್ ಪ್ರೈಸಸ್ ಶೇ 90ರಷ್ಟು ಪಾಲನ್ನು ಇದರಲ್ಲಿ ಹೊಂದಿದೆ.

ಅಂದ ಹಾಗೆ ಕಾಫೀ ಡೇ ಎಂಟರ್ ಪ್ರೈಸಸ್ ಷೇರಿನ ಟ್ರೇಡಿಂಗ್ ಅನ್ನು ಅಮಾನತು ಮಾಡಲಾಗಿದೆ. ನಿಗದಿತ ಅವಧಿಯಲ್ಲಿ ಹಣಕಾಸು ಫಲಿತಾಂಶ ಪ್ರಕಟಿಸಲು ವಿಫಲವಾದ ಹಿನ್ನೆಲೆಯಲ್ಲಿ ಮಾರ್ಕೆಟ್ ನಿಯಂತ್ರಕ ಸಂಸ್ಥೆ ಈ ಕ್ರಮ ಕೈಗೊಂಡಿದೆ.

ಕಳೆದ ವರ್ಷ ಕಾಫೀ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಸಾವಿನ ನಂತರ ಕಾಫೀ ಡೇ ಗ್ರೂಪ್ ಆಸ್ತಿಯನ್ನು ಮಾರಿ, ಸಾಲಗಾರರಿಗೆ ಹಣವನ್ನು ಮರುಪಾವತಿಸಲಾಗುತ್ತಿದೆ. ಈಗ ಹೇಳುತ್ತಿರುವ ಮಾಹಿತಿ ಪ್ರಕಾರ, ವೆಂಡಿಂಗ್ ಮಶೀನ್ ವ್ಯವಹಾರ ಖರೀದಿಗೆ ಸೂಕ್ತ ಖರೀದಿದಾರರನ್ನು ಹುಡುಕಲಾಗುತ್ತಿದೆ. ಕಾಫೀ ಡೇ ಸಮೂಹದ ಸಲಹೆಗಾರ ಆದ MAPE ಶೀಘ್ರದಲ್ಲೇ ಖರೀದಿದಾರರಿಗೆ ಆಸಕ್ತಿ ವ್ಯಕ್ತಪಡಿಸಲು ಆಹ್ವಾನಿಸುವುದಕ್ಕೆ ಯೋಜನೆ ಹಾಕಿಕೊಂಡಿದೆ.

ವ್ಯವಹಾರಕ್ಕೆ 3000 ಕೋಟಿ ರುಪಾಯಿ ಕೇಳಿತ್ತು
ಈ ಹಿಂದೆ ಕಾಫೀ ಡೇ ವೆಂಡಿಂಗ್ ಮಶೀನ್ ವ್ಯವಹಾರಕ್ಕೆ 3000 ಕೋಟಿ ರುಪಾಯಿ ಕೇಳಿತ್ತು. ಆದರೆ ಕೊರೊನಾ ನಂತರದ ಸನ್ನಿವೇಶಗಳ ಹಿನ್ನೆಲೆಯಲ್ಲಿ ಬೆಲೆಯಲ್ಲಿ ಇಳಿಕೆ ಮಾಡಲಾಯಿತು. ಇನ್ನು ಮುಂದೆ ವೆಂಡಿಂಗ್ ಮಶೀನ್ ವ್ಯವಹಾರವನ್ನು ಕಾಫೀ ಡೇ ಗ್ಲೋಬಲ್ ನಿಂದ ಬೇರ್ಪಡಿಸುತ್ತದೆ. ಆ ನಂತರ ಸೂಕ್ತ ಕಂಪೆನಿಗೆ ಮಾರಾಟ ಮಾಡಲಿದೆ.

ಆಹಾರ ಹಾಗೂ ಪಾನೀಯ ವ್ಯವಹಾರದ ಪೋರ್ಟ್ ಫೋಲಿಯೋಗೆ ಪುನಶ್ಚೇತನ ನೀಡಲು ಟಾಟಾ ಕನ್ಸ್ಯೂಮರ್ ಯೋಜನೆ ರೂಪಿಸಿದೆ. ಈಚೆಗೆ ಟಾಟಾ ಕೆಮಿಕಲ್ಸ್ ನ ಪ್ಯಾಕೇಜ್ಡ್ ಪ್ರಾಡಕ್ಟ್ ಅನ್ನು ಖರೀದಿ ಮಾಡಿತ್ತು. ಇದರ ಜತೆಗೆ ಸ್ಟಾರ್ ಬಕ್ಸ್ ಒಟ್ಟಿಗೆ ಸೇರಿ ಕಾಫೀ ಜಾಲವನ್ನು ನಡೆಸುತ್ತದೆ.

ದೇಶದಲ್ಲಿ ವ್ಯಾಪಾರಕ್ಕೆ ಅವಕಾಶ ಇದೆ. ಟಾಟಾದಿಂದ ಇದಕ್ಕೆ ನ್ಯಾಯ ಒದಗಿಸಲು ಸಾಧ್ಯ. ಅವರ ಪ್ರಾವೀಣ್ಯತೆ ಹಾಗೂ ಹಣಕಾಸಿನ ಶಕ್ತಿಯಿಂದ ಟಾಟಾಯಿಂದ ಇರು ಸಾಧ್ಯ. ಸದ್ಯಕ್ಕೆ ಕಾಫೀ ಡೇಗೆ ಹಣಕಾಸಿನ ಸಮಸ್ಯೆ ಇದೆ ಎಂದು ಟೆಕ್ನೋಪಾಕ್ ರೀಟೇಲ್ ಕನ್ಸಲ್ಟೆನ್ಸಿ ಸ್ಥಾಪಕ ಅರವಿಂದ್ ಸಿಂಘಾಲ್ ಹೇಳಿದ್ದಾರೆ.

English summary

Tata Consumer, Jubilant Food Eye On Coffee Day Group's Vending Machine Business

Tata Consumer product and Jubilant Food-Works are weighing a bid for Coffee Day Group’s vending machine business, according to source.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X