For Quick Alerts
ALLOW NOTIFICATIONS  
For Daily Alerts

ಹೊಸೂರು ಘಟಕದ ಮೇಲೆ 5000 ಕೋಟಿ ರು ಹೂಡಿದ ಟಾಟಾ ಎಲೆಕ್ಟ್ರಾನಿಕ್ಸ್

|

ಆಪಲ್ ಸಂಸ್ಥೆಗಾಗಿ ಉಪಕರಣಗಳನ್ನು ತಯಾರಿಸುವ ಟಾಟಾ ಎಲೆಕ್ಟ್ರಾನಿಕ್ಸ್ ನ ಹೊಸ ಘಟಕದ ಮೇಲೆ 5000 ಕೋಟಿ ರು ಹೂಡಿಕೆ ಮಾಡಲಾಗುತ್ತಿದೆ. ಹೊಸೂರಿನಲ್ಲಿ ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮದ ಅಡಿಯಲ್ಲಿರುವ ಈ ಘಟಕದಲ್ಲಿ ಆಪಲ್ ಐಫೋನ್ ಸೇರಿದಂತೆ ಇತರೆ ಜನಪ್ರಿಯ ಉತ್ಪನ್ನಗಳಿಗೆ ಬೇಕಾದ ಉಪಕರಣಗಳನ್ನು ತಯಾರಿಸಲಾಗುತ್ತದೆ.

ಒಟ್ಟಾರೆ, ಬೇಡಿಕೆಗೆ ತಕ್ಕಂತೆ ಈ ಘಟಕದ ಮೇಲೆ 8,000 ಕೋಟಿ ರು ತನಕ ಹೂಡಿಕೆ ಮಾಡಲು ಟಾಟಾ ಸಮೂಹ ಸಿದ್ಧವಾಗಿದೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ.

ಟೈಟಾನ್ ಘಟಕವಾದ ಟೈಟಾನ್ ಇಂಜಿನಿಯರಿಂಗ್ ಹಾಗೂ ಆಟೋಮೇಷನ್ (TEAL) ಈ ಘಟಕ ಸ್ಥಾಪನೆಯಲ್ಲಿ ತಾಂತ್ರಿಕ ಸಲಹೆ ನೀಡಲಿದ್ದು, ಉತ್ಪಾದನೆ ನಂತರ ಆರಂಭವಾಗಲಿದೆ. ಅಕ್ಟೋಬರ್ 17ರಂದು ಘಟಕದ ಭೂಮಿ ಪೂಜೆ ನಡೆಸಲಾಗಿದೆ.

ಟಾಟಾದಿಂದ ಹೊಸೂರು ಘಟಕದ ಮೇಲೆ 5000 ಕೋಟಿ ರು ಹೂಡಿಕೆ

ಲಭ್ಯ ಮಾಹಿತಿ ಪ್ರಕಾರ ಸುಮಾರು 18,000 ಉದ್ಯೋಗಿಗಳನ್ನು ಅಕ್ಟೋಬರ್ 2021ರ ವೇಳೆಗೆ ಈ ಘಟಕ ಹೊಂದಲಿದೆ. ಶೇ 90ರಷ್ಟು ಮಹಿಳಾ ಉದ್ಯೋಗಿಗಳನ್ನು ಈ ಘಟಕ ನೇಮಕ ಮಾಡಿಕೊಳ್ಳಲಿದೆ. ತಮಿಳುನಾಡಿನ ಶ್ರೀಪೆರಂಬದೂರಿನ ಘಟಕದಲ್ಲಿ ಐಫೋನ್ 11 ಅಸೆಂಬ್ಲಿ ಕಾರ್ಯ ನಡೆಯುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

English summary

Tata Group to invest Rs 5,000 crore that manufacture components for Apple

The Tata Group will invest Rs 5,000 crore to create a facility that will manufacture components for iPhone-maker Apple according to sources.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X