For Quick Alerts
ALLOW NOTIFICATIONS  
For Daily Alerts

ಬ್ರಿಟನ್‌ನಲ್ಲಿ ಜಾಗ್ವಾರ್‌ ಕಾರುಗಳ ಮಾರಾಟ ಇಳಿಕೆ: ಟಾಟಾ ಮೋಟಾರ್ಸ್ ಷೇರು 4% ಕುಸಿತ

|

ಬ್ರಿಟನ್‌ನಲ್ಲಿ ಜಾಗ್ವಾರ್‌ ಲ್ಯಾಂಡ್‌ ರೋವರ್ (ಜೆಎಲ್‌ಆರ್‌) ಮಾರಾಟವು ತೀವ್ರ ಕುಸಿತದ ನಂತರ ಶುಕ್ರವಾರ (ಮಾರ್ಚ್ 5) ಟಾಟಾ ಮೋಟಾರ್ಸ್ ಷೇರು ಬೆಲೆ ಶೇಕಡಾ 4.14ರಷ್ಟು ಕುಸಿತ ಸಾಧಿಸಿದೆ.

ಜಗತ್ತಿನ ಐಷಾರಾಮಿ ಕಾರು ತಯಾರಕ ಜಾಗ್ವಾರ್ ಲ್ಯಾಂಡ್ ರೋವರ್ 2021 ರ ಫೆಬ್ರವರಿಯಲ್ಲಿ ಬ್ರಿಟನ್‌ನಲ್ಲಿ 2,171 ವಾಹನಗಳನ್ನು ಮಾರಾಟ ಮಾಡಿದೆ. ಆದರೆ ಕಳೆದ ವರ್ಷ ಇದೇ ಅವಧಿಯಲ್ಲಿ ಮಾರಾಟವಾದ ಕಾರುಗಳ ಸಂಖ್ಯೆ 2,929 ರಷ್ಟಿದ್ದು ಶೇಕಡಾ 26 ರಷ್ಟು ಕುಸಿತ ದಾಖಲಿಸಿದೆ ಎಂದು ಸಿಎನ್‌ಬಿಸಿ-ಟಿವಿ 18 ವರದಿ ಮಾಡಿದೆ.

ಜಾಗ್ವಾರ್‌ ಕಾರುಗಳ ಮಾರಾಟ ಇಳಿಕೆ: ಟಾಟಾ ಮೋಟಾರ್ಸ್ ಷೇರು 4% ಕುಸಿತ

 

ಜಾಗ್ವಾರ್ ಬ್ರಾಂಡ್ ಮಾರಾಟವು ವರ್ಷದಿಂದ ವರ್ಷಕ್ಕೆ ಶೇಕಡಾ 60.6 ರಷ್ಟು ಕುಸಿದು 334 ವಾಹನಗಳು ಮತ್ತು ಲ್ಯಾಂಡ್ ರೋವರ್ ಮಾರಾಟವು ಶೇಕಡಾ 11.7ರಷ್ಟು ಇಳಿದು 1,837 ವಾಹನಗಳಿಗೆ ತಲುಪಿದೆ.

ದೇಶೀಯ ಮಾರುಕಟ್ಟೆಯಲ್ಲಿ, ಟಾಟಾ ಮೋಟಾರ್ಸ್ ಫೆಬ್ರವರಿ 2021 ರಲ್ಲಿ 58,473 ಮಾರಾಟವನ್ನು ನೋಂದಾಯಿಸಿದೆ. ಇದು ಕಳೆದ ವರ್ಷಕ್ಕಿಂತ ಶೇಕಡಾ 54 ಪ್ರತಿಶತದಷ್ಟು ಬೆಳವಣಿಗೆಯಾಗಿದೆ, ಆದರೆ ಒಟ್ಟು ಮಾರಾಟ 61,365 ವಾಹನಗಳಾಗಿದ್ದು, ಕಳೆದ ವರ್ಷ ಇದೇ ತಿಂಗಳಿನಲ್ಲಿ 40,619 ಯುನಿಟ್ ಮಾರಾಟವಾಗಿದೆ.

ಇದರ ಒಟ್ಟು ವಾಣಿಜ್ಯ ವಾಹನಗಳ ಮಾರಾಟವು ವರ್ಷದಿಂದ ವರ್ಷಕ್ಕೆ ಶೇಕಡಾ 21ರಷ್ಟು ಹೆಚ್ಚಾಗಿ 33,966 ಕ್ಕೆ ಏರಿದೆ. ಪ್ರಯಾಣಿಕ ವಾಹನಗಳ ಮಾರಾಟ ಶೇಕಡಾ 119ರಷ್ಟು ಹೆಚ್ಚಾಗಿ 27,225 ಯುನಿಟ್‌ಗಳು ಫೆಬ್ರವರಿಯಲ್ಲಿ ಮಾರಾಟವಾಗಿದೆ.

English summary

Tata Motors Shares Decline 4 Percent On Weak JLR Sales In The UK

Passenger and commercial vehicle maker Tata motors share price fell 3.9 percent intraday on March 5
Story first published: Friday, March 5, 2021, 16:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X