For Quick Alerts
ALLOW NOTIFICATIONS  
For Daily Alerts

ಟಿಸಿಎಸ್‌ ಸಿಇಒ ರಾಜೇಶ್ ಗೋಪಿನಾಥನ್ ವೇತನ 52% ಏರಿಕೆ

|

ದೇಶದ ಬಹುದೊಡ್ಡ ಐಟಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್‌) ಸಿಇಒ ಮತ್ತು ಎಂಡಿ ರಾಜೇಶ್ ಗೋಪಿನಾಥನ್ ಅವರ ಸ್ಯಾಲರಿ ಪ್ಯಾಕೇಜ್ ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 2021-22ರಲ್ಲಿ ಶೇಕಡಾ 52ರಷ್ಟು ಏರಿಕೆಯಾಗಿದೆ.

ರಾಜೇಶ್ ಗೋಪಿನಾಥನ್ ಅವರ ವಾರ್ಷಿಕ ವೇತನವು 2020-21ರ ವಾರ್ಷಿಕ ವರದಿಯ ಪ್ರಕಾರ ಕಳೆದ ಹಣಕಾಸು ವರ್ಷದಲ್ಲಿ ಶೇಕಡಾ 52ರಷ್ಟು ಹೆಚ್ಚಳವಾಗಿ 20 ಕೋಟಿ ರೂ.ಗಳಿಗೆ ತಲುಪಿದೆ. ಗೋಪಿನಾಥನ್ 2019-20ರ ಹಣಕಾಸು ವರ್ಷದಲ್ಲಿ ಗಳಿಸಿದ 13.3 ಕೋಟಿ ರೂ.ಗೆ ಹೋಲಿಸಿದರೆ ಸಂಭಾವನೆಯು ಶೇಕಡಾ 55.22ರಷ್ಟು ಹೆಚ್ಚಳವಾಗಿದೆ ಎಂದು ಟಿಸಿಎಸ್ ತಿಳಿಸಿದೆ.

ಟಿಸಿಎಸ್‌ ಸಿಇಒ ರಾಜೇಶ್ ಗೋಪಿನಾಥನ್ ವೇತನ 52% ಏರಿಕೆ

ಗೋಪಿನಾಥನ್ ಅವರ ಮೂಲ ವೇತನವು 1.27 ಕೋಟಿ ರೂ. ಆಗಿದ್ದು, ಇದು ಹಿಂದಿನ ವರ್ಷದಲ್ಲಿ 1.3 ಕೋಟಿ ರೂ.ಗೆ ಇಳಿಕೆಗೊಂಡಿತ್ತು. ಇವರ ಒಟ್ಟಾರೆ ಪ್ಯಾಕೇಜ್‌ನಲ್ಲಿ ಅಲೋವೆನ್ಸ್‌ 1.3 ಕೋಟಿ ರೂಪಾಯಿಗಳಿಂದ 2.09 ಕೋಟಿ ರೂ. ಏರಿಕೆಗೊಂಡಿದೆ.

ಇನ್ನು ಇವರಿಗೆ ಸೇರಬೇಕಾದ ಕಮಿಷನ್ ಹಿಂದಿನ ವರ್ಷದ 10 ಕೋಟಿ ರೂ.ಗಳಿಂದ 17 ಕೋಟಿ ರೂಪಾಯಿಗೆ ಏರಿಕೆಗೊಂಡಿದೆ. ಟಿಸಿಎಸ್ ಸಿಇಒ ಅವರ ವೇತನದ ಅನುಪಾತವು ನೌಕರರ ಸರಾಸರಿ ವೇತನಕ್ಕೆ 326.8: 1 ಆಗಿದ್ದು, ಇದು ಹಿಂದಿನ ವರ್ಷದ 214.6: 1 ಕ್ಕೆ ಹೋಲಿಸಿದರೆ ಹೆಚ್ಚಾಗಿದೆ.

ಟಿಸಿಎಸ್ ಸಿಇಒ ಅಷ್ಟೇ ಅಲ್ಲದೆ ಕಂಪನಿಯ ಸಿಒಒ ಎನ್‌.ಜಿ. ಸುಬ್ರಮಣ್ಯಂ ಅವರ ಸಂಬಳ ಕಳೆದ ಹಣಕಾಸು ವರ್ಷದಲ್ಲಿ ಶೇಕಡಾ 60ರಷ್ಟು ಹೆಚ್ಚಾಗಿದೆ.

English summary

TCS CEO Rajesh Gopinathan's Salary Increased 52 Percent In FY21

The annual salary of Rajesh Gopinathan, CEO of Tata Consultancy Service (TCS) increased by 52% year-on-year to over Rs 20 crore in the last fiscal according to the annual report for 2020-21.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X