For Quick Alerts
ALLOW NOTIFICATIONS  
For Daily Alerts

ಟಿಸಿಎಸ್ ಸಿಇಒ ವೇತನ 16 ಪರ್ಸೆಂಟ್ ಕಡಿತ: 13.3 ಕೋಟಿ ರುಪಾಯಿ

|

ದೇಶದ ಬಹುದೊಡ್ಡ ಉದ್ಯಮಗಳಲ್ಲಿ ಒಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಿಇಒ ಮತ್ತು ಎಂಡಿ ರಾಜೇಶ್ ಗೋಪಿನಾಥನ್ ಅವರ ಸ್ಯಾಲರಿ ಪ್ಯಾಕೇಜ್ ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 2019-20ರಲ್ಲಿ 16 ಪರ್ಸೆಂಟ್ ಕಡಿತವಾಗಿದೆ. ಈ ಮೂಲಕ ಅವರ ಸ್ಯಾಲರಿ 13.3 ಕೋಟಿಗೆ ತಲುಪಿದೆ ಎಂದು ಕಂಪನಿಯ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

 

2019-20ರ ಟಿಸಿಎಸ್‌ನ ವಾರ್ಷಿಕ ವರದಿಯ ಪ್ರಕಾರ, ಗೋಪಿನಾಥನ್‌ಗೆ 1.35 ಕೋಟಿ ಸ್ಯಾಲರಿ, 1.29 ಕೋಟಿ ಪೆರ್ಕ್ವೈಸೈಟ್, 10 ಕೋಟಿ ಕಮಿಷನ್ (ಲಾಭದ ಶೇಕಡಾ 0.02) ಮತ್ತು 72.82 ಲಕ್ಷ ರುಪಾಯಿ ಭತ್ಯೆ ದೊರೆತಿದ್ದು, ಒಟ್ಟಾರೆ 13.3 ಕೋಟಿಗೆ ತಲುಪಿದೆ. ಆದರೆ 2018-19ರಲ್ಲಿ ಗೋಪಿನಾಥನ್ ಒಟ್ಟು 16.02 ಕೋಟಿ ರುಪಾಯಿ ಸಂಭಾವನೆ ಪಡೆದಿದ್ದರು.

 
ಟಿಸಿಎಸ್ ಸಿಇಒ ವೇತನ 16 ಪರ್ಸೆಂಟ್ ಕಡಿತ: 13.3 ಕೋಟಿ ರುಪಾಯಿ

ಹಿಂದಿನ ವರ್ಷದಲ್ಲಿ, ಗೋಪಿನಾಥನ್ 1.15 ಕೋಟಿ ಸ್ಯಾಲರಿ, 1.26 ಕೋಟಿ ಪರ್ಕ್ವೈಸೈಟ್ ಮತ್ತು 60.35 ಲಕ್ಷ ಭತ್ಯೆಯನ್ನು ಪಡೆದಿದ್ದರು. ಜೊತೆಗೆ ಅವರು 13 ಕೋಟಿಯಷ್ಟು ಕಮಿಷನ್ ಪಡೆದಿದ್ದರು. (ಲಾಭದ ಶೇಕಡಾ 0.03)

"ವರ್ಷದ ವ್ಯವಸ್ಥಾಪಕ ಸಂಭಾವನೆ 15 ಪರ್ಸೆಂಟ್‌ರಷ್ಟು ಕಡಿಮೆಯಾಗಿದೆ. ಕೋವಿಡ್-19 ಸಾಂಕ್ರಾಮಿಕದಿಂದ ಪ್ರಭಾವಿತವಾದ ಆರ್ಥಿಕ ಪರಿಸ್ಥಿತಿಗಳ ದೃಷ್ಟಿಯಿಂದ ಹಣಕಾಸುವ ವರ್ಷ 2020 ಗಾಗಿ ಕಾರ್ಯನಿರ್ವಾಹಕ ಸಂಭಾವನೆ ಹಣಕಾಸು ವರ್ಷ 2019ಕ್ಕಿಂತ ಕಡಿಮೆಯಾಗಿದೆ ''ಎಂದು ವಾರ್ಷಿಕ ವರದಿ ತಿಳಿಸಿದೆ.

ಟಿಸಿಎಸ್ ಸಿಒಒ ಎನ್ ಗಣಪತಿ ಸುಬ್ರಮಣ್ಯಂ ಅವರ ಸ್ಯಾಲರಿಯು ಕೂಡ ಕಡಿತವಾಗಿದೆ. ಹಿಂದಿನ ಹಣಕಾಸು ವರ್ಷ 2018-19ರಲ್ಲಿ 11.61 ಕೋಟಿಗೆ ಹೋಲಿಸಿದರೆ 2019-20 ಅವರ ಆದಾಯ ಗಳಿಕೆಯು 10.11 ಕೋಟಿ ರುಪಾಯಿಗೆ ತಲುಪಿದೆ.

English summary

TCS Ceo Salary Cut By 16 Percent To 13.3 Crore

TCS CEO and MD Rajesh Gopinathan shrank more than 16 per cent to ₹13.3 crore in 2019-20 compared to the previous fiscal year
Story first published: Wednesday, May 20, 2020, 16:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X