For Quick Alerts
ALLOW NOTIFICATIONS  
For Daily Alerts

5 ವರ್ಷ ಕರ್ನಾಟಕ ನಡೆಸುವಷ್ಟು ಹಣ ಇರುವ ಮಸ್ಕ್ ಈಗ ವಿಶ್ವದ ನಂ. 1 ಶ್ರೀಮಂತ

|

"ನೀವೀಗ ವಿಶ್ವದ ನಂಬರ್ ಒನ್ ಶ್ರೀಮಂತ ಆಗಿದ್ದೀರಿ," ಅಂತ ಸುದ್ದಿ ಗೊತ್ತಾದರೆ ಏನು ಮಾಡ್ತೀರೋ ಗೊತ್ತಿಲ್ಲ. ಆದರೆ ಟೆಸ್ಲಾ ಕಂಪೆನಿ ಸಿಇಒ ಎಲಾನ್ ಮಸ್ಕ್ ಪ್ರತಿಕ್ರಿಯೆ ಮಾತ್ರ ಬಲು ಅಪರೂಪ, ವಿಚಿತ್ರ ಮತ್ತು ಅನಿರೀಕ್ಷಿತ ಎನ್ನುವ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬರುತ್ತಿದೆ. ಆಗಿದ್ದೇನೆಂದರೆ, ಗುರುವಾರದಂದು ಎಲಾನ್ ಮಸ್ಕ್ ವಿಶ್ವದ ನಂಬರ್ ಒನ್ ಶ್ರೀಮಂತರಾದರು. ಇಷ್ಟು ಸಮಯ ಆ ಸ್ಥಾನದಲ್ಲಿದ್ದ ಜೆಫ್ ಬೆಜೋಸ್ ಆಸ್ತಿ ಮೌಲ್ಯವನ್ನೂ ಮೀರಿ ನಿಂತರು.

ಟೆಸ್ಲಾ ಖರೀದಿಸುವಂತೆ ಆಪಲ್ ಕದ ತಟ್ಟಿದ್ದ ವಿಶ್ವದ ಎರಡನೇ ಶ್ರೀಮಂತಟೆಸ್ಲಾ ಖರೀದಿಸುವಂತೆ ಆಪಲ್ ಕದ ತಟ್ಟಿದ್ದ ವಿಶ್ವದ ಎರಡನೇ ಶ್ರೀಮಂತ

ಟೆಸ್ಲಾ ಕಂಪೆನಿಯ ಷೇರು 4.8% ಏರಿಕೆ ಕಂಡ ನಂತರ ಬೆಜೋಸ್ ರನ್ನು ದಾಟಿ ನಿಂತರು ಮಸ್ಕ್. ಅವರ ಆಸ್ತಿ ಈಗ 19,500 ಕೋಟಿ ಅಮೆರಿಕನ್ ಡಾಲರ್. ಭಾರತದ ರುಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ, 14,23,500 ಕೋಟಿಗೂ ಹೆಚ್ಚು. ಕರ್ನಾಟಕದ ವಾರ್ಷಿಕ ಬಜೆಟ್ 2.5 ಲಕ್ಷ ಕೋಟಿ ರುಪಾಯಿ ಅಂದುಕೊಂಡರೆ, ಐದು ವರ್ಷಕ್ಕೂ ಹೆಚ್ಚು ಕಾಲ ರಾಜ್ಯಕ್ಕೆ ಯಾವುದೇ ಆದಾಯದ ಅಗತ್ಯ ಇಲ್ಲದೆ ನಡೆಸಿಬಿಡಬಹುದು, ಅಷ್ಟು ಸಂಪತ್ತು ಆತನ ಬಳಿ ಇದೆ.

ಬೆಜೋಸ್ ಬಳಿ ಇರುವ ಆಸ್ತಿ 18,500 ಕೋಟಿ USD

ಬೆಜೋಸ್ ಬಳಿ ಇರುವ ಆಸ್ತಿ 18,500 ಕೋಟಿ USD

ಇನ್ನು ಬೆಜೋಸ್ ಬಳಿ ಇರುವ ಆಸ್ತಿ 18,500 ಕೋಟಿ ಅಮೆರಿಕನ್ ಡಾಲರ್. ಆತನಿಗಿಂತ 10 ಬಿಲಿಯನ್ ಯುಎಸ್ ಡಿ ಹೆಚ್ಚು ಆಸ್ತಿ ಮಸ್ಕ್ ಬಳಿ ಈಗ ಇದೆ. ಅಂದ ಹಾಗೆ, 2017ರ ಅಕ್ಟೋಬರ್ ನಿಂದಲೂ ವಿಶ್ವದ ಮೊದಲ ಶ್ರೀಮಂತ ಎಂಬ ಕಿರೀಟ ಇದ್ದದ್ದು ಜೆಫ್ ಬೆಜೋಸ್ ಗೆ. ಇನ್ನು ಟಾಪ್ ಟೆನ್ ಪಟ್ಟಿಯನ್ನು ನೋಡಿದರೆ ಹತ್ತು ಮಂದಿ ಅತಿ ಶ್ರೀಮಂತರಲ್ಲಿ ಎಂಟು ಜನ ಅಮೆರಿಕನ್ನರಿದ್ದಾರೆ.

ಹದಿಮೂರನೇ ಸ್ಥಾನದಲ್ಲಿ ಭಾರತದ ಮುಕೇಶ್ ಅಂಬಾನಿ

ಹದಿಮೂರನೇ ಸ್ಥಾನದಲ್ಲಿ ಭಾರತದ ಮುಕೇಶ್ ಅಂಬಾನಿ

ನೀವು ಈ ಸುದ್ದಿಯನ್ನು ಓದುವ ಹೊತ್ತಿಗೆ ಬ್ಲೂಮ್ ಬರ್ಗ್ ಸೂಚ್ಯಂಕದಲ್ಲಿ ಇರುವ ಟಾಪ್ ಟೆನ್ ಶ್ರೀಮಂತರ ಪಟ್ಟಿ ಹೀಗಿದೆ: ಎಲಾನ್ ಮಸ್ಕ್, ಜೆಫ್ ಬೆಜೋಸ್, ಬಿಲ್ ಗೇಟ್ಸ್, ಬರ್ನಾರ್ಡ್ ಅರ್ನಾಲ್ಟ್, ಮಾರ್ಕ್ ಝುಕರ್ ಬರ್ಗ್, ಝೊಂಗ್ ಶನ್ಷನ್, ವಾರೆನ್ ಬಫೆಟ್, ಲ್ಯಾರಿ ಪೇಜ್, ಸರ್ಗಿ ಬ್ರಿನ್, ಲ್ಯಾರಿ ಎಲಿಸನ್. ಇನ್ನು ಭಾರತದ ಮುಕೇಶ್ ಅಂಬಾನಿ 7340 ಅಮೆರಿಕನ್ ಡಾಲರ್ ಆಸ್ತಿಯೊಂದಿಗೆ ಹದಿಮೂರನೇ ಸ್ಥಾನದಲ್ಲಿದ್ದಾರೆ.

ನಷ್ಟದಲ್ಲಿದ್ದ ಕಂಪೆನಿಯನ್ನು ಮಾರಬೇಕು ಅಂತಿದ್ದರು
 

ನಷ್ಟದಲ್ಲಿದ್ದ ಕಂಪೆನಿಯನ್ನು ಮಾರಬೇಕು ಅಂತಿದ್ದರು

ಈಗ ನಂಬರ್ ಒನ್ ಶ್ರೀಮಂತ ಎನಿಸಿರುವ ಮಸ್ಕ್, ಒಂದು ಕಾಲದಲ್ಲಿ ಟೆಸ್ಲಾ ಕಂಪೆನಿಯ ಫಲಿತಾಂಶ ಚೆನ್ನಾಗಿಲ್ಲ ಎಂದು ಅದನ್ನು ಮಾರುವುದಕ್ಕೆ ಮುಂದಾಗಿದ್ದರು ಎಂಬುದು ವಿಚಿತ್ರ ಅನ್ನಿಸಿದರೂ ಸತ್ಯ ಸಂಗತಿ. ಟೆಸ್ಲಾ ಓನರ್ಸ್ ಆಫ್ ಸಿಲಿಕಾನ್ ವ್ಯಾಲಿ ಹೆಸರಿನ ಟ್ವಿಟ್ಟರ್ ಖಾತೆಯಿಂದ ಎಲಾನ್ ಮಸ್ಕ್ ಖಾತೆಯನ್ನು ಟ್ಯಾಗ್ ಮಾಡಿ, ಈಗ ವಿಶ್ವದ ಅತ್ಯಂತ ಶ್ರೀಮಂತ ಮಸ್ಕ್ ಎಂದು ಹಾಕಲಾಗಿತ್ತು. ಅದಕ್ಕೆ ಮಸ್ಕ್, ಇದೆಂಥ ವಿಚಿತ್ರ ಹಾಗೂ ಮತ್ತೆ ಕೆಲಸಕ್ಕೆ ವಾಪಸ್ ಆಗೋಣ ಅಂತಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರತಿಕ್ರಿಯೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

English summary

Tesla Inc CEO Elon Musk Become World's Richest Person, Surpassed Jeff Bezos

Tesla Inc CEO Elon R. Musk surpassed Amazon CEO and become world's richest person on Thursday. Here is the list of top 10 rich people of the world.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X