For Quick Alerts
ALLOW NOTIFICATIONS  
For Daily Alerts

ಭಾರತಕ್ಕೆ ಮತ್ತಷ್ಟು ಆರ್ಥಿಕ ಸುಧಾರಣೆಗಳು ಬೇಕಾಗುತ್ತವೆ: ಐಎಂಎಫ್

|

ಸದ್ಯದ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಭಾರತ ಕೈಗೊಂಡಿರುವ ಸಂಘಟಿತ ಪ್ರಯತ್ನಗಳು ಉತ್ತಮವಾಗಿದೆ. ಆದರೆ, ಸುಸ್ಥಿರ ಮತ್ತು ಹೆಚ್ಚು ಅಂತರ್ಗತ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ದೇಶಕ್ಕೆ ಮತ್ತಷ್ಟು ಆರ್ಥಿಕ ಸುಧಾರಣೆಗಳು ಬೇಕಾಗುತ್ತವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.

 

ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯ ವಕ್ತಾರ ಗೆರ್ರಿ ರೈಸ್ ಗುರುವಾರ ಈ ಹೇಳಿಕೆ ನೀಡಿದ್ದು, ಭಾರತದಲ್ಲಿ ಫೇಸ್‌ಬುಕ್ ಮತ್ತು ಗೂಗಲ್‌ನಂತಹ ಜಾಗತಿಕ ದೈತ್ಯ ಕಂಪನಿಗಳು ಇತ್ತೀಚೆಗೆ ಮಾಡಿದ ವಿದೇಶಿ ನೇರ ಹೂಡಿಕೆಯನ್ನು ಶ್ಲಾಘಿಸಿದ್ದಾರೆ. ವ್ಯಾಪಾರ ವಾತಾವರಣವನ್ನು ಬಲಪಡಿಸಲು ಮತ್ತು ವ್ಯಾಪಾರದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಭಾರತದ ಸಂಘಟಿತ ಪ್ರಯತ್ನಗಳು ಹೂಡಿಕೆಯನ್ನು ಆಕರ್ಷಿಸಲು ಸಹಾಯ ಮಾಡಿವೆ, ಆದರೆ ಐಎಂಎಫ್ ಪ್ರಕಾರ, ಸುಸ್ಥಿರ ಮತ್ತು ಹೆಚ್ಚು ಅಂತರ್ಗತ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ದೇಶಕ್ಕೆ ಮತ್ತಷ್ಟು ಆರ್ಥಿಕ ಸುಧಾರಣೆಗಳು ಬೇಕಾಗುತ್ತವೆ ಎಂದಿದ್ದಾರೆ.

ಕೊರೊನಾದಿಂದ ಎಕಾನಮಿ ಕಾಡಿನಲ್ಲಿ ದಾರಿ ತಪ್ಪಿದಂತಾಗಿದೆ ಎಂದ ಐಎಂಎಫ್ಕೊರೊನಾದಿಂದ ಎಕಾನಮಿ ಕಾಡಿನಲ್ಲಿ ದಾರಿ ತಪ್ಪಿದಂತಾಗಿದೆ ಎಂದ ಐಎಂಎಫ್

ಇತ್ತೀಚಿಗೆ, ಹಲವಾರು ಅಂತರರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ 20 ಬಿಲಿಯನ್ ಯುಎಸ್ ಡಾಲರ್ ವಿದೇಶಿ ನೇರ ಹೂಡಿಕೆ ವಾಗ್ದಾನ ಮಾಡಿವೆ ಮತ್ತು ಇದುವರೆಗೆ 40 ಬಿಲಿಯನ್ ಯುಎಸ್ಡಿ ಡಾಲರ್‌ಗಳನ್ನು ಹೂಡಿವೆ ಎಂದಿದ್ದಾರೆ.

ಸಮಗ್ರ ಪ್ರಯತ್ನಗಳನ್ನು ಮಾಡಲಾಗಿದೆ

ಸಮಗ್ರ ಪ್ರಯತ್ನಗಳನ್ನು ಮಾಡಲಾಗಿದೆ

ಇತ್ತೀಚಿನ ವರ್ಷಗಳಲ್ಲಿ, ಭಾರತದಲ್ಲಿ, ವ್ಯಾಪಾರ ವಾತಾವರಣವನ್ನು ಬಲಪಡಿಸಲು ಮತ್ತು ವ್ಯಾಪಾರದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಸಮಗ್ರ ಪ್ರಯತ್ನಗಳನ್ನು ಮಾಡಲಾಗಿದೆ. ಇವು ಹೂಡಿಕೆಯನ್ನು ಆಕರ್ಷಿಸಲು ಮತ್ತು ಚಾಲ್ತಿ ಖಾತೆ ಹಣಕಾಸು ಮಿಶ್ರಣವನ್ನು ಸುಧಾರಿಸಲು ಸಹಾಯ ಮಾಡಿದೆ ಎಂದು ರೈಸ್ ಸುದ್ದಿಗೋಷ್ಠಿಯೊಂದರಲ್ಲಿ ತಿಳಿಸಿದ್ದಾರೆ.

ದಿವಾಳಿತನದ ವಿರುದ್ದದ ಕ್ರಮಗಳು

ದಿವಾಳಿತನದ ವಿರುದ್ದದ ಕ್ರಮಗಳು

ಸದ್ಯದ ಸಂಬಂಧಿತ ಸುಧಾರಣೆಗಳು ಹೊಸ ದಿವಾಳಿತನದ ವಿರುದ್ದದ ಕ್ರಮಗಳು, ರಾಷ್ಟ್ರೀಯ ಸರಕು ಮತ್ತು ಸೇವಾ ತೆರಿಗೆಯನ್ನು ಒಳಗೊಂಡಿವೆ. ಇವುಗಳು ಭಾರತದ ವ್ಯವಹಾರ ಶ್ರೇಯಾಂಕವನ್ನು ಗಳಿಸಲು ಸಹಾಯ ಮಾಡಿವೆ, ವಿಶ್ವ ಬ್ಯಾಂಕಿನ ಈಸ್ ಆಫ್ ಡೂಯಿಂಗ್ ಬಿಸಿನೆಸ್ ಸೂಚ್ಯಂಕದಲ್ಲಿ ವೇಗವಾಗಿ ಚಲಿಸುತ್ತಿವೆ. ಗಮನಾರ್ಹ ಪ್ರಗತಿಯಾಗಿದೆ ಎಂದು ರೈಸ್ ಹೇಳಿದ್ದಾರೆ.

 ಹೆಚ್ಚುವರಿ ಮೂಲಸೌಕರ್ಯ ಹೂಡಿಕೆ ಅಗತ್ಯ
 

ಹೆಚ್ಚುವರಿ ಮೂಲಸೌಕರ್ಯ ಹೂಡಿಕೆ ಅಗತ್ಯ

ಅದೇನೇ ಇದ್ದರೂ, ಇನ್ನೂ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಭಾರತದಲ್ಲಿ ಸುಸ್ಥಿರ ಮತ್ತು ಹೆಚ್ಚು ಅಂತರ್ಗತ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಇತರ ಆರ್ಥಿಕ ಸುಧಾರಣೆಗಳು ಮತ್ತು ಹೆಚ್ಚುವರಿ ಮೂಲಸೌಕರ್ಯ ಹೂಡಿಕೆ ಅಗತ್ಯ ಎಂದು ಅವರು ಹೇಳಿದರು.

ಹೆಚ್ಚುವರಿ ಲಾಕ್‌ಡೌನ್‌ಗಳು ಬೇಕಾಗಬಹುದು

ಹೆಚ್ಚುವರಿ ಲಾಕ್‌ಡೌನ್‌ಗಳು ಬೇಕಾಗಬಹುದು

ಸದ್ಯ ಮತ್ತಷ್ಟು ಹೆಚ್ಚುವರಿ ಲಾಕ್‌ಡೌನ್‌ಗಳು ಬೇಕಾಗಬಹುದು, ಮತ್ತು ವೈರಸ್‌ನ ಬಗೆಗಿನ ಕಳವಳಗಳು ಗ್ರಾಹಕರ ವಿಶ್ವಾಸವನ್ನು ಕುಂದಿಸುತ್ತದೆ ಮತ್ತು ಆರ್ಥಿಕ ಚೇತರಿಕೆಗೆ ವಿಳಂಬವಾಗಬಹುದು. ಮತ್ತೆ, ಭಾರತದಲ್ಲಿ ಮಾತ್ರವಲ್ಲ, ಅನೇಕ ದೇಶಗಳಲ್ಲೂ ಇದೇ ಪರಿಸ್ಥಿತಿ ಇದೆ ಎಂದು ರೈಸ್ ಹೇಳಿದರು.

English summary

The International Monetary Fund Says India Needs Further Economic Reforms

The International Monetary Fund Says India Needs Further Economic Reforms
Story first published: Friday, July 24, 2020, 14:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X