For Quick Alerts
ALLOW NOTIFICATIONS  
For Daily Alerts

ಕೊರೊನಾ ಪರಿಣಾಮ : ಮುಂದಿನ 3 ತಿಂಗಳಿನಲ್ಲಿ ಜಗತ್ತಿನಲ್ಲಿ ತೈಲ ಶೇಖರಣೆಗೆ ಜಾಗವೇ ಇರುವುದಿಲ್ಲ

|

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೇಡಿಕೆ ಕುಸಿದು, ಪೂರೈಕೆ ಹೆಚ್ಚಾಗಿರುವುದರಿಂದ ಮೂರು ತಿಂಗಳೊಳಗೆ ತೈಲವನ್ನು ಸಂಗ್ರಹಿಸಲು ಪ್ರಪಂಚದಲ್ಲಿ ಜಾಗವೇ ಇರುವುದಿಲ್ಲ ಎಂಬುದು ಕೈಗಾರಿಕೆ ಸಲಹೆಗಾರರ ಅಭಿಪ್ರಾಯವಾಗಿದೆ.

2020 ರ ಮೊದಲಾರ್ಧದಲ್ಲಿ ಪ್ರಸ್ತುತ ಪೂರೈಕೆ ಮತ್ತು ಬೇಡಿಕೆಯ ದರಗಳು 1.8 ಶತಕೋಟಿ ಬ್ಯಾರೆಲ್‌ಗಳಷ್ಟು ಹೆಚ್ಚಾಗುತ್ತವೆ ಎಂದು ಐಎಚ್‌ಎಸ್ ಮಾರ್ಕಿಟ್ ಹೇಳಿದೆ. ಅಂದಾಜು 1.6 ಬಿಲಿಯನ್ ಬ್ಯಾರೆಲ್‌ಗಳ ಶೇಖರಣಾ ಸಾಮರ್ಥ್ಯ ಇನ್ನೂ ಲಭ್ಯವಿರುವುದರಿಂದ, ಉತ್ಪಾದಕರು ಉತ್ಪಾದನೆಯನ್ನು ಕಡಿತಗೊಳಿಸಲು ಒತ್ತಾಯಿಸಲಾಗುವುದು. ಏಕೆಂದರೆ ಜೂನ್ ವೇಳೆಗೆ ತೈಲ ಶೇಖರಣೆಗೆ ಯಾವುದೇ ಸ್ಥಳ ಉಳಿದಿಲ್ಲ ಎಂದು ಅದು ಹೇಳಿದೆ.

ಕೊರೊನಾವೈರಸ್ ಏಕಾಏಕಿ ವಿಶ್ವದೆಲ್ಲೆಡೆ ಹರಡಿದ ಪರಿಣಾಮವಾಗಿ ಬೇಡಿಕೆ ಕುಸಿದಿದ್ದರಿಂದ ತೈಲ ಮಾರುಕಟ್ಟೆಗೆ ಆಘಾತವನ್ನುಂಟುಮಾಡಿದೆ. ಜೊತೆಗೆ ಸೌದಿ ಅರೇಬಿಯಾವು ರಿಯಾಯಿತಿಯಲ್ಲಿ ಮಾರುಕಟ್ಟೆಗೆ ಕಚ್ಛಾ ತೈಲ ದರವನ್ನು ಪೂರೈಸುವುದಾಗಿ ಪ್ರತಿಜ್ಞೆ ಮಾಡುತ್ತಿದೆ.

ಇಂಧನಗಳ ಆಮದನ್ನು ನಿಷೇಧಿಸಿರುವ ಪಾಕಿಸ್ತಾನ

ಇಂಧನಗಳ ಆಮದನ್ನು ನಿಷೇಧಿಸಿರುವ ಪಾಕಿಸ್ತಾನ

ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ಮತ್ತು ರಷ್ಯಾ ಸೇರಿದಂತೆ ಮಿತ್ರ ರಾಷ್ಟ್ರಗಳ ಒಕ್ಕೂಟದ ಕುಸಿತದ ನಂತರ , ಗುರುವಾರ ಪಾಕಿಸ್ತಾನವು ಕಚ್ಚಾ ಮತ್ತು ಇಂಧನಗಳ ಆಮದನ್ನು ನಿಷೇಧಿಸಿತು. ಏಕೆಂದರೆ ಅದರ ಶೇಖರಣಾ ತಾಣಗಳು ತುಂಬಿವೆ. ಹೀಗಾಗಿ ತೈಲ ಆಮದನ್ನು ನಿಲ್ಲಿಸಿದ ರಾಷ್ಟ್ರವಾಗಿ ಮುಂಚೂಣಿಯಲ್ಲಿದೆ.

ಸಮುದ್ರದಲ್ಲಿ ಬ್ಯಾರೆಲ್‌ಗಳಲ್ಲಿ ಸಂಗ್ರಹಿಸಲು ಪ್ಲಾನ್

ಸಮುದ್ರದಲ್ಲಿ ಬ್ಯಾರೆಲ್‌ಗಳಲ್ಲಿ ಸಂಗ್ರಹಿಸಲು ಪ್ಲಾನ್

ವಿಶ್ವದ ಇಬ್ಬರು ಅಗ್ರ ತೈಲ ವ್ಯಾಪಾರಿಗಳಾದ ವಿಟಾಲ್ ಗ್ರೂಪ್ ಮತ್ತು ಗನ್ವೋರ್ ಗ್ರೂಪ್, ತೈಲ ಸಂಗ್ರಹಿಸಲು ಹೆಚ್ಚಿನ ಆಸಕ್ತಿ ಇದೆ ಎಂದು ಹೇಳಿದೆ. ಜೊತೆಗೆ ಹಲವಾರು ವ್ಯಾಪಾರಿಗಳು ಸಮುದ್ರದಲ್ಲಿ ಬ್ಯಾರೆಲ್‌ಗಳನ್ನು ಸಂಗ್ರಹಿಸಲು ಸೂಪರ್‌ಟ್ಯಾಂಕರ್‌ಗಳನ್ನು ಕಾಯ್ದಿರಿಸಿದ್ದಾರೆ.

ದಿನಕ್ಕೆ 20 ಮಿಲಿಯನ್ ಬ್ಯಾರೆಲ್‌ಗಳಷ್ಟು ಬೇಡಿಕೆ ಕುಸಿತ

ದಿನಕ್ಕೆ 20 ಮಿಲಿಯನ್ ಬ್ಯಾರೆಲ್‌ಗಳಷ್ಟು ಬೇಡಿಕೆ ಕುಸಿತ

ವಿಶ್ವದೆಲ್ಲೆಡೆ ತೈಲ ಬೇಡಿಕೆ ಸಾಮಾನ್ಯವಾಗಿತ್ತು. ಆದರೆ ಕೊರೊನಾವೈರಸ್ ಹರಡುವಿಕೆ ಹೆಚ್ಚಾಗುತ್ತಾ ಹೋದಂತೆ ಒಂದೊಂದೇ ರಾಷ್ಟ್ರಗಳು ಲಾಕ್‌ಡೌನ್ ಆದ ಪರಿಸ್ಥಿತಿಗೆ ತಲುಪಿದವು. ಇದರಿಂದಾಗಿ ಅತಿ ಹೆಚ್ಚು ತೈಲ ಆಮದು ರಾಷ್ಟ್ರಗಳಲ್ಲಿ ಬೇಡಿಕೆ ಕುಸಿಯಿತು. ಕಳೆದ ವರ್ಷಕ್ಕಿಂತ ದಿನಕ್ಕೆ 20 ಮಿಲಿಯನ್ ಬ್ಯಾರೆಲ್‌ಗಳಷ್ಟು ಬೇಡಿಕೆ ಕುಸಿದಿದೆ ಎಂದು ವಿಟೋಲ್ ಬುಧವಾರ ಹೇಳಿದೆ.

ಎರಡನೇ ತ್ರೈಮಾಸಿಕದಲ್ಲಿ ಸರಬರಾಜು ದಿನಕ್ಕೆ 12.4 ಮಿಲಿಯನ್ ಬ್ಯಾರೆಲ್‌ಗಳಷ್ಟು ಬೇಡಿಕೆಯನ್ನು ಮೀರಬಹುದು, ಇತರ ವ್ಯಾಪಾರಿಗಳು, ಬ್ಯಾಂಕುಗಳು ಮತ್ತು ಸಲಹೆಗಾರರು ಸಹ ಬಂಪರ್ ಹೆಚ್ಚುವರಿಗಳ ಮುನ್ಸೂಚನೆ ನೀಡುತ್ತಾರೆ ಎಂದು ಐಎಚ್‌ಎಸ್ ತಿಳಿಸಿದೆ. ಕಳೆದ ವರ್ಷಕ್ಕಿಂತ ದಿನಕ್ಕೆ 20 ಮಿಲಿಯನ್ ಬ್ಯಾರೆಲ್‌ಗಳಷ್ಟು ಬೇಡಿಕೆ ಕುಸಿದಿದೆ ಎಂದು ಅಗ್ರ ತೈಲ ವ್ಯಾಪಾರಿ ವಿಟೋಲ್ ಬುಧವಾರ ಹೇಳಿದೆ.

 

ಉತ್ಪಾದನೆಯನ್ನು ಕಡಿಮೆ ಮಾಡಬೇಕೋ ಅಥವಾ ಮುಚ್ಚಬೇಕೋ ಎಂಬ ಗೊಂದಲ

ಉತ್ಪಾದನೆಯನ್ನು ಕಡಿಮೆ ಮಾಡಬೇಕೋ ಅಥವಾ ಮುಚ್ಚಬೇಕೋ ಎಂಬ ಗೊಂದಲ

ಸದ್ಯ ಎಲ್ಲೆಡೆ ತೈಲ ಬೇಡಿಕೆ ಕುಸಿದಿರುವುದರಿಂದ ತೈಲ ಉತ್ಪಾದಕಾ ರಾಷ್ಟ್ರಗಳು ಚಿಂತೆಗೀಡಾಗಿವೆ. ಪ್ರತಿನಿತ್ಯ ಲಕ್ಷಾಂತರ ಬ್ಯಾರೆಲ್ ಕಚ್ಛಾ ತೈಲ ಉತ್ಪಾದನೆಯನ್ನು ಮಾಡುವ ರಾಷ್ಟ್ರಗಳು ಉತ್ಪಾದನೆಯನ್ನು ಕಡಿಮೆಗೊಳಿಸಬೇಕೋ ಅಥವಾ ಮುಚ್ಚಬೇಕು ಎಂಬ ಗೊಂದಲದಲ್ಲಿವೆ ಎಂದು ಐಎಚ್‌ಎಸ್‌ನ ತೈಲ ಮಾರುಕಟ್ಟೆಗಳ ಮುಖ್ಯಸ್ಥ ಜಿಮ್ ಬುರ್ಖಾರ್ಡ್ ಹೇಳಿದರು. ಆದರೆ ಇದು ಈಗ ಎಲ್ಲಿ ಮತ್ತು ಎಷ್ಟು ಎಂಬುದರ ಅಂತಿಮ ತೀರ್ಮಾನ ಆಗಬೇಕಿದೆ.

ಅಮೆರಿಕಾದಲ್ಲೂ ಸದ್ಯದಲ್ಲೇ ದಾಸ್ತಾನು ತುಂಬುವ ಸಾಧ್ಯತೆ

ಅಮೆರಿಕಾದಲ್ಲೂ ಸದ್ಯದಲ್ಲೇ ದಾಸ್ತಾನು ತುಂಬುವ ಸಾಧ್ಯತೆ

ಸದ್ಯ ಬೇಡಿಕೆ ಕುಸಿತ ಮತ್ತು ಪೂರೈಕೆ ಹೆಚ್ಚಳದಿಂದಾಗಿ ಶೇಖರಣಾ ಸ್ಥಳದ ಸಂಭಾವ್ಯ ಕೊರತೆಯು ಎದುರು ಕಾಣಸಿಗುತ್ತದೆ. ಅಮೆರಿಕಾದಲ್ಲಿ ಡಬ್ಲ್ಯೂಟಿಐ ಕ್ಯಾಶ್ ರೋಲ್ ಎಂದು ಕರೆಯಲ್ಪಡುವ ತೈಲ ದಾಸ್ತಾನು ಮುಂಬರುವ ವಾರಗಳು ಮತ್ತು ತಿಂಗಳಿನಲ್ಲಿ ಬಹುತೇಕ ತುಂಬುವ ಸಾಧ್ಯತೆ ಇದೆ. 2008ರ ಬಳಿಕೆ ಅತ್ಯಂತ ಕಡಿಮೆ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.

ರಷ್ಯಾಗೂ ಕೂಡ ಶೇಖರಣಾ ಸಾಮರ್ಥ್ಯ ಮುಗಿಯುವ ಭೀತಿ

ರಷ್ಯಾಗೂ ಕೂಡ ಶೇಖರಣಾ ಸಾಮರ್ಥ್ಯ ಮುಗಿಯುವ ಭೀತಿ

ವಿಶ್ವದ ಮೂರು ಅತಿದೊಡ್ಡ ತೈಲ ಉತ್ಪಾದಕರಲ್ಲಿ ಒಂದಾದ ರಷ್ಯಾವು ಸುಮಾರು ಎಂಟು ದಿನಗಳಲ್ಲಿ ಲಭ್ಯವಿರುವ ಶೇಖರಣಾ ಸಾಮರ್ಥ್ಯ ಕಡಿಮೆಯಾಗಲಿದೆ ಎಂದು ಐಹೆಚ್ಎಸ್ ಹೇಳಿದೆ. ಒಂದು ವೇಳೆ ರಫ್ತು ಪ್ರಮಾಣವೂ ಬತ್ತಿ ಹೋದರೆ ಈ ಅಂಕಿ ಅಂಶಗಳು ನಿಜವಾಗಬಹುದು. ಇನ್ನು ಸೌದಿ ಅರೇಬಿಯಾ, ಅಮೆರಿಕಾವು 18 ದಿನಗಳನ್ನು ಹೊಂದಿದೆ ಎನ್ನಲಾಗುತ್ತಿದೆ.

ಆಫ್ರಿಕಾದ ಅತಿದೊಡ್ಡ ಉತ್ಪಾದಕ ನೈಜೀರಿಯಾ, ಐಎಚ್‌ಎಸ್ ಅಳೆಯುವ ಪ್ರದೇಶಗಳಲ್ಲಿ ಹೆಚ್ಚು ದುರ್ಬಲವಾಗಿದೆ. 2020 ರ ಮೊದಲ ತ್ರೈಮಾಸಿಕದಲ್ಲಿ ದಿನಕ್ಕೆ 1.9 ಮಿಲಿಯನ್ ಬ್ಯಾರೆಲ್‌ಗಳ ಉತ್ಪಾದನೆಯು 1 1/2 ರಿಂದ ಎರಡು ದಿನಗಳಲ್ಲಿ ಲಭ್ಯವಿರುವ ಸ್ಥಳೀಯ ಸಂಗ್ರಹಣೆಯನ್ನು ತುಂಬುತ್ತದೆ ಎಂದು ಸಂಸ್ಥೆ ತಿಳಿಸಿದೆ.

 

ಆಫ್ರಿಕಾದ ಬೃಹತ್ ತೈಲ ಉತ್ಪಾದಕಾ ನೈಜೀರಿಯಾಗೂ ಶೇಖರಣೆಯ ಸಮಸ್ಯೆ

ಆಫ್ರಿಕಾದ ಬೃಹತ್ ತೈಲ ಉತ್ಪಾದಕಾ ನೈಜೀರಿಯಾಗೂ ಶೇಖರಣೆಯ ಸಮಸ್ಯೆ

ಆಫ್ರಿಕಾದ ಬೃಹತ್ ತೈಲ ಉತ್ಪಾದಕಾ ರಾಷ್ಟ್ರವಾಗಿರುವ ನೈಜೀರಿಯಾ ಸದ್ಯ ತೈಲ ಶೇಖರಣೆಯಲ್ಲಿ ಅತಿ ಹೆಚ್ಚು ದುರ್ಬಲವಾಗಿದೆ. 2020 ರ ಮೊದಲ ತ್ರೈಮಾಸಿಕದಲ್ಲಿ ದಿನಕ್ಕೆ 1.9 ಮಿಲಿಯನ್ ಬ್ಯಾರೆಲ್‌ಗಳ ಉತ್ಪಾದನೆ ಮಾಡುವ ಈ ದೇಶವು ಒಂದೂವರೆ ದಿನದಿಂದ ಎರಡು ದಿನಗಳಲ್ಲಿ ಲಭ್ಯವಿರುವ ಸ್ಥಳೀಯ ಸಂಗ್ರಹಣೆಯನ್ನು ತುಂಬುತ್ತದೆ ಎಂದು ಸಂಸ್ಥೆ ತಿಳಿಸಿದೆ.

English summary

The World Running Out Of Places To Store Oil

The world will run out of places to store oil in as little as three months, according to an industry consultant.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X