For Quick Alerts
ALLOW NOTIFICATIONS  
For Daily Alerts

ಮಾಜಿ ಶಿಕ್ಷಕಿ ಈಗ ರಷ್ಯಾದ ಅತ್ಯಂತ ಶ್ರೀಮಂತ ಮಹಿಳೆ

|

ಆನ್ ಲೈನ್ ಸ್ಟಾರ್ಟ್ ಅಪ್ ವೊಂದರ ಸ್ಥಾಪಕಿ ಈಗ ರಷ್ಯಾದ ಅತಿ ಶ್ರೀಮಂತ ಮಹಿಳೆಯಾಗಿದ್ದಾರೆ. ಈ ಬಗ್ಗೆ ಫೋರ್ಬ್ಸ್ ನ ರಷ್ಯಾ ಆವೃತ್ತಿಯಲ್ಲಿ ವರದಿ ಮಾಡಲಾಗಿದೆ. 44 ವರ್ಷದ ತಾತ್ಯಾನ ಬಕಲ್ ಚುಕ್ ಬಳಿ 1.4 ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿ ಇರುವ ಅಂದಾಜಿದ್ದು, 1.2 ಬಿಲಿಯನ್ ಆಸ್ತಿ ಹೊಂದಿರುವ 56 ವರ್ಷದ ಯೆಲೆನಾ ಬತುರಿನಾ ಅವರನ್ನು ಮೀರಿಸಿದ್ದಾರೆ.

 

ಬಕಲ್ ಚುಕ್ ಅವರ ಯಶಸ್ಸು ಇರುವುದು ಆನ್ ಲೈನ್ ರೀಟೇಲರ್ ವೈಲ್ಡ್ ಬರೀಸ್ ನಲ್ಲಿ. ಸೋವಿಯತ್ ರಷ್ಯಾ ಕುಸಿತದ ನಂತರ ತುಂಬ ವೇಗವಾಗಿ ಖಾಸಗಿ ಪ್ರಭಾವ ಬೆಳೆಯುತ್ತಿದೆ. ಅದರ ಪರಿಣಾಮ ಕಾಣಿಸುತ್ತಿದೆ. ಅಂದಹಾಗೆ ಬಕಲ್ ಚುಕ್ ಅವರು ಮೊದಲಿಗೆ ಇಂಗ್ಲಿಷ್ ಶಿಕ್ಷಕಿಯಾಗಿದ್ದರು.

 

2004ರಲ್ಲಿ, 28ನೇ ವಯಸ್ಸಿನಲ್ಲಿ ಹೆರಿಗೆ ರಜಾದಲ್ಲಿದ್ದಾಗ ತಮ್ಮ ಅಪಾರ್ಟ್ ಮೆಂಟ್ ನಲ್ಲೇ ಕಂಪೆನಿ ಸ್ಥಾಪಿಸಿದರು. ಸಾಂಪ್ರದಾಯಿಕ ಮಳಿಗೆಯಲ್ಲಿ ನವಜಾತ ಶಿಶುವಿನೊಂದಿಗೆ ಶಾಪಿಂಗ್ ಮಾಡುವ ವೇಳೆಯಲ್ಲಿ ಅವರಿಗೆ ಇ ಕಾಮರ್ಸ್ ವ್ಯವಹಾರದ ಯೋಜನೆ ಹೊಳೆಯಿತು.

ಮಾಜಿ ಶಿಕ್ಷಕಿ ಈಗ ರಷ್ಯಾದ ಅತ್ಯಂತ ಶ್ರೀಮಂತ ಮಹಿಳೆ

ಆಕೆಯ ಒಡೆತನದಲ್ಲಿ ಈಗ ರಷ್ಯಾ ಮತ್ತು ಸೋವಿಯತ್ ರಷ್ಯಾದ ಇತರ ದೇಶಗಳಲ್ಲಿ ಮುಂಚೂಣಿ ಆನ್ ಲೈನ್ ವ್ಯವಹಾರ ಹೊಂದಿರುವ ವೆಬ್ ಸೈಟ್ ಆಕೆಯದು. 2019ರಲ್ಲಿ 88 ಪರ್ಸೆಂಟ್ ಬೆಳವಣಿಗೆ ದಾಖಲಿಸಿ, 3.5 ಬಿಲಿಯನ್ ಅಮೆರಿಕನ್ ಡಾಲರ್ ಆದಾಯವನ್ನು ಗಳಿಸಿದೆ.

ಆರಂಭದಲ್ಲಿ ಆಕೆ ಶೂಗಳು ಮತ್ತು ಬಟ್ಟೆಯ ಮಾರಾಟದ ಮೇಲೆ ಗಮನ ಕೇಂದ್ರೀಕರಿಸಿದ್ದರು. ಆ ನಂತರ 15 ಸಾವಿರ ಬ್ರ್ಯಾಂಡ್ ಗಳ ಆಹಾರ, ಪುಸ್ತಕ, ಎಲೆಕ್ಟ್ರಾನಿಕ್ಸ್, ಆರೋಗ್ಯ ಉತ್ಪನ್ನಗಳ ಮಾರಾಟ ಆರಂಭಿಸಿದರು. ಅಂದ ಹಾಗೆ ಈಚೆಗೆ ಯುರೋಪ್ ಖಂಡದ ಪೋಲೆಂಡ್ ನಲ್ಲಿ ಇ ಕಾಮರ್ಸ್ ವ್ಯವಹಾರ ಆರಂಭಿಸಿದ್ದಾರೆ.

ಬಕಲ್ ಚುಕ್ ಅವರ ಪತಿ ಮಾಸ್ಕೋದಲ್ಲಿ ಮೇಯರ್ ಆಗಿದ್ದ ಯೂರಿ ಲಜ್ಕೋವ್ ರಿಯಲ್ ಎಸ್ಟೇಟ್ ಸಾಮ್ರಾಜ್ಯ ಕಟ್ಟಿದ್ದವರು. ಫೊರ್ಬ್ಸ್ ಪಟ್ಟಿಯಲ್ಲಿ ದಶಕಗಳಿಗಿಂತ ಹೆಚ್ಚು ಕಾಲ ಸ್ಥಾನ ಪಡೆದಿದ್ದರು.

English summary

This Former Teacher Now Russia's Richest Woman

Tatyana Bakalchuk, 44 year old former teacher now Russia's richest woman.
Story first published: Friday, February 21, 2020, 17:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X