For Quick Alerts
ALLOW NOTIFICATIONS  
For Daily Alerts

1 ವರ್ಷದ ಹಿಂದೆ ಈ ಷೇರಿನಲ್ಲಿ 5 ಲಕ್ಷ ರೂ. ಹೂಡಿಕೆ ಮಾಡಿದವರ ಹಣ, ಇಂದು 13.32 ಲಕ್ಷ ರೂ.

|

ಷೇರುಪೇಟೆಯಲ್ಲಿ ದೀರ್ಘಕಾಲಿನ ಹೂಡಿಕೆಗೆ ಒಲವು ತೋರುವವರು ಈ ಮೊದಲು ಹೆಚ್ಚಿದ್ದರೂ, ಆದರೆ ಈಗ ಅಲ್ಪಕಾಲೀನ ಅವಧಿಗೆ ಉತ್ತಮ ಲಾಭಗಳಿಸುವತ್ತ ಹೂಡಿಕೆದಾರರ ಗಮನ ಹೆಚ್ಚಾಗಿದೆ. ಹೀಗಾಗಿಯೇ ಯೋಜಿಸಿ ಹೂಡಿಕೆ ಮಾಡಿದರೆ ಲಾಭ ಪಡೆಯುವ ಸಾಧ್ಯತೆ ಹೆಚ್ಚಿದೆ.

ಬಜಾಜ್ ಫೈನಾನ್ಸ್ ಷೇರು ಒಂದು ವರ್ಷದಲ್ಲಿ ತನ್ನ ಷೇರುದಾರರಿಗೆ ಶೇ 166 ರಷ್ಟು ಲಾಭವನ್ನು ನೀಡಿದೆ. ಈ ಷೇರು 2020 ರ ಜೂನ್ 11 ರಂದು 2,337.15 ರೂ.ಗಳಷ್ಟಿತ್ತು. ಇದು ಇಂದು 6,228.60 ರೂ.ಗಳಷ್ಟು ಬೆಳೆದು ನಿಂತಿದೆ. ಈ ಅವಧಿಯಲ್ಲಿ ಶೇಕಡಾ 166.5 ರಷ್ಟು ಲಾಭ ಗಳಿಸಿದೆ.

ಈ ವರ್ಷದಲ್ಲಿ ಶೇಕಡಾ 16 ರಷ್ಟು ಬೆಳವಣಿಗೆ

ಈ ವರ್ಷದಲ್ಲಿ ಶೇಕಡಾ 16 ರಷ್ಟು ಬೆಳವಣಿಗೆ

ಈ ವರ್ಷದ ಆರಂಭದಿಂದ ಈ ಷೇರು ಶೇ 16 ರಷ್ಟು ಏರಿಕೆ ಕಂಡಿದೆ. ಇದು ಬಿಎಸ್‌ಇನಲ್ಲಿ ಹಿಂದಿನ ವಹಿವಾಟಿನ ಮುಕ್ತಾಯವಾದ 6087.60 ಕ್ಕೆ ಹೋಲಿಸಿದರೆ ಶೇ 0.20 ರಷ್ಟು ಹೆಚ್ಚಳವಾಗಿ 6,100 ರೂ. ತಲುಪಿದೆ. ಈ ಮೂಲಕ ಸಂಸ್ಥೆಯ ಮಾರುಕಟ್ಟೆ ಕ್ಯಾಪ್ 3.70 ಲಕ್ಷ ಕೋಟಿ ರೂ. ದಾಟಿದೆ

ಕಳೆದ 200 ದಿನಗಳಿಗಿಂತ ಬೆಲೆ ಹೆಚ್ಚಿದೆ!

ಕಳೆದ 200 ದಿನಗಳಿಗಿಂತ ಬೆಲೆ ಹೆಚ್ಚಿದೆ!

ಬಜಾಜ್ ಫೈನಾನ್ಸ್ ಷೇರು ಯಾರೂ ಊಹಿಸದ ರೀತಿಯಲ್ಲಿ ಹೂಡಿಕೆದಾರರ ಹಣವನ್ನು ದುಪ್ಪಟ್ಟು ಮಾಡಿದೆ. ಕಳೆದ 5 ದಿನ, 10 ದಿನ, 20 ದಿನ, 50 ದಿನ, 100 ದಿನ, ಮತ್ತು 200 ದಿನಗಳಲ್ಲಿ ಕಂಡಂತಹ ಮಾರುಕಟ್ಟೆ ವಹಿವಾಟುಗಳಿಗಿಂತ ಹೆಚ್ಚಿದೆ.

ಒಂದು ವರ್ಷದ ಹಿಂದೆ 5 ಲಕ್ಷ ಹೂಡಿಕೆ ಮಾಡಿದ್ದರೆ ಈಗ 13 ಲಕ್ಷ!
 

ಒಂದು ವರ್ಷದ ಹಿಂದೆ 5 ಲಕ್ಷ ಹೂಡಿಕೆ ಮಾಡಿದ್ದರೆ ಈಗ 13 ಲಕ್ಷ!

ಒಂದು ವರ್ಷದ ಹಿಂದೆ ಬಜಾಜ್ ಪೈನಾನ್ಸ್‌ ಷೇರುಗಳಲ್ಲಿ 5 ಲಕ್ಷ ರೂ. ಹೂಡಿಕೆ ಮಾಡಿದ್ದರೆ ಇಂದು ಬರೋಬ್ಬರಿ 13.32 ಲಕ್ಷ ರೂ.ಗಳಷ್ಟಾಗುತ್ತಿತ್ತು. ಈ ಮೂಲಕ ಶೇಕಡಾ 100ಕ್ಕಿಂತ ಅಧಿಕ ರಿಟರ್ನ್ ಸಿಗುತ್ತಿತ್ತು.

'BUY' ರೇಟಿಂಗ್ ಉಳಿಸಿಕೊಂಡಿದ್ದ ಮೋತಿಲಾಲ್ ಓಸ್ವಾಲ್

'BUY' ರೇಟಿಂಗ್ ಉಳಿಸಿಕೊಂಡಿದ್ದ ಮೋತಿಲಾಲ್ ಓಸ್ವಾಲ್

ಭಾರತೀಯ ವೈವಿಧ್ಯಮಯ ಹಣಕಾಸು ಸೇವಾ ಸಂಸ್ಥೆಗಳಲ್ಲಿ ಒಂದಾದ ಮೋತಿಲಾಲ್ ಓಸ್ವಾಲ್, ಬಜಾಜ್‌ ಫೈನಾನ್ಸ್ ಪ್ರತಿಷೇರಿಗೆ 6,200 ರೂ.ಗಳ ಗುರಿಯೊಂದಿಗೆ 'ಬೈ' ರೇಟಿಂಗ್ ಉಳಿಸಿಕೊಂಡಿದೆ. ಪರಿಣಾಮ ಬಜಾಜ್ ಫೈನಾನ್ಸ್ ಷೇರುಗಳು ಏರುಮುಖದತ್ತ ಸಾಗಿದೆ.

ಒಂದು ವರ್ಷದ ಹಿಂದೆ ಈ ಷೇರಿನಲ್ಲಿ 5 ಲಕ್ಷ ರೂ. ಹೂಡಿಕೆ ಮಾಡಿದ್ರೆ, ಈಗ 15 ಲಕ್ಷ ರೂ.!ಒಂದು ವರ್ಷದ ಹಿಂದೆ ಈ ಷೇರಿನಲ್ಲಿ 5 ಲಕ್ಷ ರೂ. ಹೂಡಿಕೆ ಮಾಡಿದ್ರೆ, ಈಗ 15 ಲಕ್ಷ ರೂ.!

''ಹಣಕಾಸು ವರ್ಷ 2020-21ರ ಗಳಿಕೆಯ ಕರೆಯಡಿಯಲ್ಲಿ ಶೇಕಡಾ 25ರಷ್ಟು ಸ್ವತ್ತುಗಳ ಬೆಳವಣಿಗೆ ಸಾಧಿಸಿದೆ ಮತ್ತು ಕೋವಿಡ್-19 ಎರಡನೇ ಅಲೆಯ ನಡುವೆ ಇನ್ನು ಶೇಕಡಾ 20ರಷ್ಟು ಬೆಳವಣಿಗೆ ಸಾಧಿಸಬಹುದಾಗಿದೆ'' ಎಂದು ಬ್ರೋಕರೇಜ್ ಸಂಸ್ಥೆ ಹೇಳಿದೆ.

ಆದಾಗ್ಯೂ, ಆಕ್ಸಿಸ್ ಸೆಕ್ಯುರಿಟೀಸ್ ಪ್ರಸ್ತುತ ಮೌಲ್ಯಮಾಪನಗಳು ದುಬಾರಿಯಾಗಿದೆ ಎಂದು ಪ್ರತಿ ಷೇರಿಗೆ 4,300 ರೂ.ಗಳ ಗುರಿಯೊಂದಿಗೆ 'SELL' ರೇಟಿಂಗ್ ಹೊಂದಿದೆ.

 

English summary

Bajaj Finance Stock More Than Doubled Investor Wealth In 1 Year

Share of Bajaj Finance has delivered 166 per cent returns to its shareholders in one year. The share stood at Rs 2,337.15 on June 11, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X