For Quick Alerts
ALLOW NOTIFICATIONS  
For Daily Alerts

ಷೇರುಗಳ ಮೂಲಕ 450 ಕೋಟಿ ಸಂಗ್ರಹಣಕ್ಕೆ ಥಾಮಸ್ ಕುಕ್ ಯೋಜನೆ

By ರಾಜಶೇಖರ್ ಮ್ಯಾಗೇರಿ
|

ನವದೆಹಲಿ, ಫೆಬ್ರವರಿ.21: ದೇಶದಲ್ಲಿ ಕಂಪನಿಯ ಷೇರುಗಳ ಮೂಲಕ 450 ಕೋಟಿ ರೂಪಾಯಿ ಹಣ ಸಂಗ್ರಹಿಸುವುದುಕ್ಕೆ ಥಾಮಸ್ ಕುಕ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಯೋಜನೆ ರೂಪಿಸಿದೆ. ಈ ಹಿನ್ನೆಲೆ ಕಂಪನಿಯು ಆಪ್ಷನಲ್ ಕನ್ವರ್ಟೇಬಲ್ ಕ್ಯೂಮುಲೇಟಿವ್ ಪ್ರಿಫರೆನ್ಸ್ ಷೇರ್(OCCRPS)ಗಳನ್ನು ಖಾಸಗಿಯವರಿಗೆ ನೀಡುವುದಕ್ಕೆ ಉದ್ದೇಶಿಸಲಾಗಿದೆ.

ಕಂಪನಿಯ ಪ್ರಮೋಟರ್ ಆಗಿರುವ ಫೇರ್‌ಬ್ರಿಡ್ಜ್ ಕ್ಯಾಪಿಟಲ್ (ಮಾರಿಷಸ್) ಲಿಮಿಟೆಡ್‌ಗೆ ತಲಾ 10 ಮುಖಬೆಲೆಯ 45,00,00,000 OCCRPS ವಿತರಿಸಲು ಕಂಪನಿಯ ಮಂಡಳಿ ಅನುಮೋದನೆ ನೀಡಿದೆ ಎಂದು ಥಾಮಸ್ ಕುಕ್ ಸಂಸ್ಥೆ ತಿಳಿಸಿದೆ.

ಬೆಂಗಳೂರಿನಲ್ಲಿ ಬಿಟ್‌ಕಾಯಿನ್ ATM ಸ್ಥಾಪಿಸಿದ್ದವರಿಗೆ ರಿಲೀಫ್: ಎಫ್‌ಐಆರ್‌ ರದ್ದುಬೆಂಗಳೂರಿನಲ್ಲಿ ಬಿಟ್‌ಕಾಯಿನ್ ATM ಸ್ಥಾಪಿಸಿದ್ದವರಿಗೆ ರಿಲೀಫ್: ಎಫ್‌ಐಆರ್‌ ರದ್ದು

ಥಾಮಸ್ ಕುಕ್ ಸಂಸ್ಥೆಯು ಅನುಮೋದನೆ ನೀಡಿರುವ 45 ಕೋಟಿ ಷೇರುಗಳ ಒಟ್ಟು ಮೌಲ್ಯವು 450 ಕೋಟಿ ರೂಪಾಯಿ ಆಗಿರಲಿದೆ ಎಂದು ತಿಳಿದು ಬಂದಿದೆ.

ಷೇರುಗಳ ಮೂಲಕ 450 ಕೋಟಿ ಸಂಗ್ರಹಣಕ್ಕೆ ಥಾಮಸ್ ಕುಕ್ ಯೋಜನೆ

ಥಾಮಸ್ ಕುಕ್ ಸಂಸ್ಥೆಯ ಷೇರು ಬೆಲೆ:

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸದ್ಯದ ಮಟ್ಟಿಗೆ ಥಾಮಸ್ ಕುಕ್ (ಇಂಡಿಯಾ) ಲಿಮಿಟೆಡ್ ಷೇರುಗಳ ಬೆಲೆ 47.55 ರೂಪಾಯಿಗಳಿವೆ.

English summary

Thomas Cook India Company plans To Raise Up To Rs 450 Crore

Thomas Cook India Company plans To Raise Up To Rs 450 Crore.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X