For Quick Alerts
ALLOW NOTIFICATIONS  
For Daily Alerts

ಏಷ್ಯಾದ ಟಾಪ್-20 ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಭಾರತೀಯರು; ಯಾರವರು?

|

ಫೋರ್ಬ್ಸ್ ಏಷ್ಯಾದ ನವೆಂಬರ್ ತಿಂಗಳ ಅವತರಣಿಕೆಯಲ್ಲಿ ಅಗ್ರಮಾನ್ಯ 20 ಏಷ್ಯನ್ ಮಹಿಳಾ ಉದ್ಯಮಿಗಳನ್ನು ಹೈಲೈಟ್ ಮಾಡಲಾಗಿದೆ. ಇದರಲ್ಲಿ ಮೂವರು ಭಾರತೀಯರು ಇರುವುದು ವಿಶೇಷ. ಕೋವಿಡ್ ನಂತರ ಉದ್ಭವಿಸಿದ ಅನಿಶ್ಚಿತ ಪರಿಸ್ಥಿತಿಯಲ್ಲೂ ತಮ್ಮ ವಿನೂತನ ತಂತ್ರಗಳಿಂದ ಮತ್ತು ಅವಿರತ ಪ್ರಯತ್ನಗಳಿಂದ ವ್ಯವಹಾರ ವೃದ್ಧಿಸಲು ಕಾರಣರಾದ ಚಾಣಾಕ್ಷ್ಯ ಮಹಿಳೆಯರಿವರು.

 

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಛೇರ್ಮನ್ ಸೋಮಾ ಮೊಂಡಲ್, ಇಂಡಿಯಾ ಬ್ಯುಸಿನೆಸ್ ಆಫ್ ಎಮ್‌ಕ್ಯೂರ್ ಫಾರ್ಮಾ ಸಂಸ್ಥೆಯ ಕಾರ್ಯವಾಹಕ ನಿರ್ದೇಶಕಿ ನಮಿತಾ ಥಾಪರ್ ಹಾಗೂ ಹೊನಸ ಕನ್ಸೂಮರ್ ಸಂಸ್ಥೆಯ ಸಹ-ಸಂಸ್ಥಾಪಕಿ ಮತ್ತು ಚೀಫ್ ಇನೋವೇಶನ್ ಆಫೀಸರ್ ಘಜಲ್ ಅಲಘ್ ಅವರು ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತೀಯ ಮಹಿಳಾ ಉದ್ಯಮಿಗಳೆನಿಸಿದ್ದಾರೆ.

ಆಸ್ಟ್ರೇಲಿಯಾ, ಚೀನಾ, ಸೌತ್ ಕೊರಿಯಾ, ಇಂಡೋನೇಷ್ಯಾ, ಜಪಾನ್, ಸಿಂಗಾಪುರ್, ತೈವಾನ್, ಥಾಯ್ಲೆಂಡ್ ಮತ್ತು ಜಪಾನ್ ದೇಶಗಳ ಮಹಿಳೆಯರೂ ಈ ಫೋರ್ಬ್ಸ್ ಪಟ್ಟಿಯಲ್ಲಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಹೆಚ್ಚು ಬಾಧೆಗೊಳಗಾದ ಶಿಪಿಂಗ್, ರಿಯಲ್ ಎಸ್ಟೇಟ್, ಕಟ್ಟಡ ನಿರ್ಮಾಣ ಇತ್ಯಾದಿ ಕ್ಷೇತ್ರಗಳ ಉದ್ಯಮಗಳಲ್ಲಿ ತೊಡಗಿದ್ದವರು ಈ ಮಹಿಳೆಯರು. ಇಂಥ ಕಷ್ಟದ ಪರಿಸ್ಥಿತಿಯಲ್ಲೂ ತಮ್ಮ ವ್ಯವಹಾರ ಕುಸಿಯದ ರೀತಿಯಲ್ಲಿ ಇವರು ತೋರಿದ ಸಮಯಪ್ರಜ್ಞೆ ಮತ್ತು ಚಾಕಚಕ್ಯತೆಯನ್ನು ಗಣಿಸಿ ಫೋರ್ಬ್ಸ್ ಪಟ್ಟಿಯಲ್ಲಿ ಸೇರಿಸಲಾಗಿದೆ.

ಕೋವಿಡ್ ಕಷ್ಟದಲ್ಲೂ ವ್ಯವಹಾರ ಬೆಳೆಸಿದ ಭಾರತೀಯ ಜಾಣೆಯರು

ಸೋಮಾ ಮೊಂಡಲ್ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾಗೆ ಛೇರ್ಮನ್ ಆದ ಮೊದಲ ಮಹಿಳೆ ಹೌದು. ಐಐಟಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವೀಧರೆಯಾದ ಸೋಮಾ ಮೊಂಡಲ್ ಲೋಹ ಉದ್ಯಮದಲ್ಲಿ 35ಕ್ಕೂ ಹೆಚ್ಚು ವರ್ಷ ಅನುಭವ ಹೊಂದಿದ್ದಾರೆ. ನ್ಯಾಲ್ಕೋದಲ್ಲಿ ಸುದೀರ್ಘ ಅವಧಿ ಕೆಲಸ ಮಾಡಿದ ಅವರು 2017ರಲ್ಲಿ ಎಸ್‌ಎಐಎಲ್‌ಗೆ ನಿರ್ದೇಶಕಿಯಾಗಿ 2017ರಲ್ಲಿ ಸೇರಿದರು. ಅಲ್ಲಿಂದ ಮೇಲೇರಿದ ಅವರು 2021ರಲ್ಲಿ ಛೇರ್ಮನ್ ಆಗಿದ್ದಾರೆ. ಮಾರ್ಕೆಟಿಂಗ್ ವಿಭಾಗದಲ್ಲಿ ಅವರು ತಂದ ಗಮನಾರ್ಹ ಪರಿವರ್ತನೆಯು ಕೋವಿಡ್ ಸಂದರ್ಭದಲ್ಲಿ ಸಂಸ್ಥೆಗೆ ಅನುಕೂಲ ತಂದಿತ್ತು.

ಇನ್ನು, ನಮಿತಾ ಥಾಪರ್ ಭಾರತ ಮೂಲಕ ಎಮ್‌ಕ್ಯೂರ್ ಫಾರ್ಮಾಸ್ಯೂಟಿಕಲ್ಸ್ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದಾರೆ. ನವೋದ್ಯಮಿಗಳಿಗೆ ಪ್ಲಾಟ್‌ಫಾರ್ಮ್ ಆಗಿರುವ ಶಾರ್ಕ್ ಟ್ಯಾಂಕ್ ಇಂಡಿಯಾದ ಮೊದಲ ಸೀಸನ್ ಅನ್ನು ನೋಡಿದವರಿಗೆ ನಮಿತಾ ಥಾಪರ್ ಗುರುತಾಬಹುದು. ಆ ಟಿವಿ ರಿಯಾಲಿಟಿ ಶೋನಲ್ಲಿ ನಮಿತಾ ಥಾಪರ್ ತೀರ್ಪುಗಾರರಲ್ಲಿ ಒಬ್ಬರಾಗಿದ್ದರು. 45 ವರ್ಷದ ನಮಿತಾ ಥಾಪರ್ ಇಂಗ್ಲೆಂಡ್‌ನ ಡ್ಯೂಕ್ ಯೂನಿವರ್ಸಿಟಿಯಲ್ಲಿ ಎಂಬಿಎ ಮಾಡಿದ್ದಾರೆ. ಚಾರ್ಟರ್ಡ್ ಅಕೌಂಟೆಂಟ್ ಕೂಡ ಹೌದು.

 

ಫೋರ್ಬ್ಸ್ ಪಟ್ಟಿಯಲ್ಲಿರುವ ಮೂವರು ಭಾರತೀಯ ಮಹಿಳೆಯರಲ್ಲಿ ಕೊನೆಯವರಾದ ಘಜಲ್ ಅಲಘ್ ಕೂಡ ಕಳೆದ ಸೀಸನ್‌ನ ಶಾರ್ಕ್ ಟ್ಯಾಂಕ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಗಮನ ಸೆಳೆದಿದ್ದರು. ಲೈಫ್ ಸ್ಟೈಲ್ ಕಂಪನಿಯಾದ ಹೊನಸ ಕನ್ಸೂಮರ್ ಪ್ರೈ ಲಿ (ಮಾಮಾ ಅರ್ತ್ ಎಂದು ಖ್ಯಾತಿ) ಸಂಸ್ಥೆಯ ಸಹ-ಸಂಸ್ಥಾಪಕಿಯಾಗಿದ್ದಾರೆ. ದಿ ಡರ್ಮಾ ಕೋ, ಡಯಟ್ ಎಕ್ಸ್ ಪರ್ಟ್ ಇತ್ಯಾದಿ ಕಂಪನಿಗಳ ಸ್ಥಾಪಕಿಯೂ ಹೌದು. ಎನ್‌ಐಐಟಿಯಲ್ಲಿ ಎಸ್‌ಕ್ಯುಎಲ್, ಜೆ2ಎಂಇ, ಒರೇಕಲ್ ಇತ್ಯಾದಿ ಸಾಫ್ಟ್‌ವೇರ್ ಅಪ್ಲಿಕೇಶನ್ಸ್‌ನ ಟ್ರೈನರ್ ಆಗಿದ್ದ ಅವರು ನಂತರದಲ್ಲಿ ಸೌಂದರ್ಯ ವರ್ಧಕ ಮತ್ತು ಆರೋಗ್ಯ ವರ್ಧಕ ಕ್ಷೇತ್ರಕ್ಕೆ ಧುಮುಕಿ ತಮ್ಮ ವ್ಯವಹಾರ ಚಾತುರ್ಯ ತೋರಿಸಿದ್ಧಾರೆ.

English summary

Three Indian Businesswomen Among Top 20 Asian Women Entrepreneurs

Three top Indian businesswomen are featured in the Forbes Asia November issue highlighting 20 Asian women who came up with varying strategies.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X